ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯ ಸಾಮಾಜಿಕ ನ್ಯಾಯದ ಪರಿಕಲ್ಪನೆ ಹಿನ್ನಲೆಯಲ್ಲಿ ತಾಲೂಕು ಸೇರಿದಂತೆ ರಾಜ್ಯಾದ್ಯಂತ ಜೆಡಿಎಸ್‌ ಅಲೆ ವ್ಯಾಪಕವಾಗಿದ್ದು ಚುನಾವಣೆ ಬಳಿಕ ಎಚ್‌ಡಿಕೆ ಈ ರಾಜ್ಯದ ಸಿಎಂ ಆಗಲಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್‌ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.

ಪಾವಗಡ : ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯ ಸಾಮಾಜಿಕ ನ್ಯಾಯದ ಪರಿಕಲ್ಪನೆ ಹಿನ್ನಲೆಯಲ್ಲಿ ತಾಲೂಕು ಸೇರಿದಂತೆ ರಾಜ್ಯಾದ್ಯಂತ ಜೆಡಿಎಸ್‌ ಅಲೆ ವ್ಯಾಪಕವಾಗಿದ್ದು ಚುನಾವಣೆ ಬಳಿಕ ಎಚ್‌ಡಿಕೆ ಈ ರಾಜ್ಯದ ಸಿಎಂ ಆಗಲಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್‌ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.

ಅವರು ಭಾನುವಾರ ತಾಲೂಕಿನ ಪಳವಳ್ಳಿ ಗ್ರಾಮದ ಬಸ್‌ ನಿಲ್ದಾಣದ ಬಳಿ ನೂತನ ಜೆಡಿಎಸ್‌ ಕಚೇರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಎಚ್‌ಡಿಕೆ ಆಡಳಿತ ಅವಧಿಯಲ್ಲಿ ರೈತ ಹಾಗೂ ಜನಪರ ಯೋಜನೆ ರೂಪಿಸಿದ್ದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಜೆಡಿಎಸ್‌ನತ್ತ ಬೆಂಬಲ ವ್ಯಕ್ತವಾಗಿದ್ದು ಸಾಮಾನ್ಯ ಜನತೆಯ ಬದುಕು ಹಸನಾಗಲು ಮತ್ತು ಪಂಚರತ್ನ ಯೋಜನೆಗಳ ಜಾರಿ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಜೆಡಿಎಸ್‌ ಅಲೆ ವ್ಯಾಪಕವಾಗಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚುತ್ತಿದ್ದು ಜೆಡಿಎಸ್‌ ಜಯಭೇರಿ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿ ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ರಾಮನಗರ ಕ್ಷೇತ್ರವನ್ನು ಕುಮಾರಸ್ವಾಮಿ ಅವರ ಮನೆ ಸ್ವತ್ತು ಮಾಡಿಕೊಂಡಿದ್ದಾರೆಯೇ? : ಇಕ್ಬಾಲ್‌ ಹುಸೇನ್‌

ಇತ್ತೀಚೆಗೆ ಕುಮಾರಸ್ವಾಮಿ ಸಮ್ಮುಖದಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರ್ಪಡೆಯಾದ ಜಿಪಂ ಮಾಜಿ ಸದಸ್ಯ ಚನ್ನಮಲ್ಲಯ್ಯ ಮಾತನಾಡಿ, ಸಾಮಾನ್ಯ ಜನತೆಗೆ ನ್ಯಾಯ ಕಲ್ಪಿಸುವ ಪಕ್ಷ ಹಾಗೂ ಸಾಮಾನ್ಯರಿಗೆ ಗೌರವ ನೀಡುವ ಪಕ್ಷ ಎಂದರೆ ಜೆಡಿಎಸ್‌. ಜೆಡಿಎಸ್‌ನಲ್ಲಿ ಒಂದು ಸಾಮಾಜಿಕ ಚಿಂತನೆಯುಳ್ಳ ಪಕ್ಷವಾಗಿದ್ದು, ಇಲ್ಲಿ ಎಲ್ಲರನ್ನು ಸಮಾನವಾಗಿ ಕಾಣಲಿದ್ದು, ಧೈರ್ಯವಾಗಿ ಸಮಸ್ಯೆ ಹೇಳಿ ಮಾಡಿಸಬಹುದು. ಜನಸೇವೆಗೆ ಬದ್ದರಿದ್ದ ಕಾರಣ, ತಾಲೂಕಿನಲ್ಲಿ ಜೆಡಿಎಸ್‌ ಅಲೆ ವ್ಯಾಪಕವಾಗಿದೆ. ಹೀಗಾಗಿ ಚುನಾವಣೆಯಲ್ಲಿ ತಿಮ್ಮರಾಯಪ್ಪ ಗೆಲುವು ಸಾಧಿಸಲಿರುವುದಾಗಿ ಹೇಳಿದರು.

ಹಿರಿಯ ಮುಖಂಡ ಭೀಮನಕುಂಟೆ ವೈ.ಆರ್‌.ಚೌದರಿ ಮಾತನಾಡಿ, ತಾಲೂಕಿನ ಪ್ರಗತಿ ಜೆಡಿಎಸ್‌ನಿಂದ ಮಾತ್ರ ಸಾಧ್ಯ. ವಸತಿ ಶಾಲೆ ಹಾಗೂ ಶಾಲಾ ಕಾಲೇಜುಗಳ ನಿರ್ಮಾಣ ಸೇರಿದಂತೆ ಜೆಡಿಎಸ್‌ ಅಧಿಕಾರದ ಅವಧಿಯಲ್ಲಿ ಕೋಟ್ಯಂತರ ರು. ವೆಚ್ಚದ ಪ್ರಗತಿ ಪರ ಕೆಲಸವಾಗಿವೆ. ಜನತೆಯ ಒಲವು ಜೆಡಿಎಸ್‌ನತ್ತ ಇದ್ದು ಜೆಡಿಎಸ್‌ ಗೆಲ್ಲಲು ಸೈನಿಕರ ರೀತಿ ಸಜ್ಜಾಗುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಬಲರಾಮರೆಡ್ಡಿ, ಕಾರ್ಯಾಧ್ಯಕ್ಷ ಎನ್‌.ಎ.ಈರಣ್ಣ, ಹಿರಿಯ ಮುಖಂಡರಾದ ತಿಮ್ಮಾರೆಡ್ಡಿ, ಚನ್ನಕೇಶವರೆಡ್ಡಿ, ರಾಜಶೇಖರಪ್ಪ, ಗೋವಿಂದಬಾಬು, ಭೀಮನಕುಂಟೆ ವೈ.ಆರ್‌.ಚೌದರಿ, ಅಕ್ಕಲಪ್ಪನಾಯ್ಡ್‌, ತಾಪಂ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್‌, ತಾಲೂಕು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಮಂಜುನಾಥ್‌ ಚೌದರಿ, ರೈತ ಘಟಕದ ಅಧ್ಯಕ್ಷ ಗಂಗಾಧರ್‌ನಾಯ್ಡ್‌, ಪುರಸಭೆ ಮಾಜಿ ಸದಸ್ಯರಾದ ಮನುಮಹೇಶ್‌, ಜಿ.ಎ.ವೆಂಕಟೇಶ್‌, ವಸಂತ್‌ಕುಮಾರ್‌, ಗೋಪಾಲ್‌, ನಾಗೇಂದ್ರಪ್ಪ, ಕಾವಲಗರೆ ರಾಮಾಂಜಿನಪ್ಪ, ಟಿ.ಎನ್‌.ಪೇಟೆ ರಮೇಶ್‌, ಸೋಡಾ ಮಂಜುನಾಥ್‌ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.