ಮೈಸೂರು(ಆ.24): ಕಳೆದ ಬಾರಿ ಇದ್ದ ಸರ್ಕಾರ ಕೇವಲ ನಾಲ್ಕು ಜನರಿಗೆ ಮಾತ್ರ ಇತ್ತು. ಕುಮಾರಸ್ವಾಮಿ, ರೇವಣ್ಣ, ಪರಮೇಶ್ವರ್‌, ಡಿ.ಕೆ. ಶಿವಕುಮಾರ್‌ ಅವರಿಗೋಸ್ಕರ ಇತ್ತು. ಕೊಟ್ಟಅಧಿಕಾರ ನಡೆಸಲಾಗದೆ ಕೆಳಗೆ ಇಳಿದಿದ್ದಾರೆ ಎನ್ನಬಹುದೇ ಹೊರತು ಅಧಿಕಾರ ಯಾರೂ ಕಿತ್ತುಕೊಂಡಿಲ್ಲ. ಮೈತ್ರಿ ಸರ್ಕಾರ ಬೀಳಲು ಬಿಜೆಪಿ ಕಾರಣವೇ ಅಲ್ಲ ಎಂದು ಮಾಜಿ ಸಚಿವ ಎ. ಮಂಜು ಹೇಳಿದರು.

ಮೈಸೂರು: 'ಸಿದ್ದು ಹೇಳಿಕೆ ಟ್ರೈನ್‌ ಹೋದ ಮೇಲೆ ಟಿಕೆಟ್‌ ತೆಗೆದುಕೊಂಡಂತಿದೆ'

ಮೈಸೂರಿನಲ್ಲಿ ಮಾತನಾಡಿದ ಅವರು, 'ಆ ಸರ್ಕಾರದಲ್ಲಿ ಕಾಂಗ್ರೆಸ್‌ ಅಥವ ಜೆಡಿಎಸ್‌ ಶಾಸಕರಿಗೆ ಉಪಯೋಗ ಆಗಿಲ್ಲ. ಅದೊಂದು ಸಿಂಗಲ್‌ ವಿಂಡೋ ಸರ್ಕಾರ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಸರ್ಕಾರ ಬಿಳುತ್ತಿರಲಿಲ್ಲ. ಮೈತ್ರಿ ಸರ್ಕಾರ ಬೀಳಲು ಅವರವರೇ ಕಾರಣ. ತಮ್ಮ ಮಗನಿಗೆ ಅಧಿಕಾರ ಹೋಯ್ತು ಅಂತ ದೇವೇಗೌಡರು ಏನೇನೋ ಮಾತನಾಡುತ್ತಿದ್ದಾರೆ ಎಂದರು.

'ಮಾಜಿ ಪ್ರಧಾನಿಯೇ ಜನರ ದಾರಿ ತಪ್ಪಿಸುತ್ತಿದ್ದಾರೆ':

ಫೋನ್‌ ಕದ್ದಾಲಿಕೆಗೆ ಯಾರು ಮೊದಲು ಆದೇಶಿಸಿದ್ದಾರೋ ಅವರ ಮೇಲೆ ಮೊದಲು ತನಿಖೆ ಆಗಬೇಕು. ಫೋನ್‌ ಕದ್ದಾಲಿಕೆ ಮಾಡಬಹುದು ಎಂದು ಸುಪ್ರಿಂ ಕೋರ್ಟ್‌ನಲ್ಲಿಯೇ ಆದೇಶ ಇದೆ ಎಂದು ದೇವೇಗೌಡರು ಹೇಳಿದ್ದಾರೆ. ಮಾಜಿ ಪ್ರಧಾನಿಯೊಬ್ಬರು ಈ ರೀತಿ ಜನರ ದಾರಿ ತಪ್ಪಿಸಬಾರದು. ಅದು ಯಾವ ಕೋರ್ಟ್‌ನಲ್ಲಿ ಹೇಳಿದೆ ಎಂದು ತೋರಿಸಿಬಿಡಿ. ಫೋನ್‌ ಕದ್ದಾಲಿಕೆಯನ್ನು ಯಾರೇ ಮಾಡಿದ್ದರೂ ತಪ್ಪೇ? ದೇಶದ್ರೋಹಿಗಳ ಫೋನ್‌ ಕದ್ದಾಲಿಕೆ ಮಾಡಬೇಕಾದರೂ ಅನುಮತಿ ಬೇಕು ಎಂದರು.