Asianet Suvarna News Asianet Suvarna News

ವಿಮಾನ ಅಂತಿಮ ವೇಳಾ ಪಟ್ಟಿ ಪ್ರಕಟ: ಕುವೈಟ್‌ ಯಾನಿಗಳಿಗೆ ಮತ್ತೆ ಅನಾನುಕೂಲ

  • ಮಂಗಳೂರು-ಕುವೈಟ್‌ ನಡುವಿನ ನವೆಂಬರ್‌ನಿಂದ ಕಾರ್ಯಾಚರಿಸುವಂತೆ ಏರ್‌ ಇಂಡಿಯಾ ವಿಮಾನ ಹಾರಾಟ
  • ಏರ್‌ ಇಂಡಿಯಾ ವಿಮಾನ ಹಾರಾಟದ ವೇಳಾಪಟ್ಟಿಅಂತಿಮಗೊಂಡಿದೆ. ಆದರೆ ಎರಡನೇ ಬಾರಿಯ ಈ ವೇಳಾಪಟ್ಟಿಯೂ ಯಾನಿಗಳಿಗೆ ಅನುಕೂಲವಾಗಿಲ್ಲ 
People Unhappy over Mangaluru Kuwait flight schedule snr
Author
Bengaluru, First Published Nov 1, 2021, 3:16 PM IST

 ಮಂಗಳೂರು (ನ.01):  ಮಂಗಳೂರು - ಕುವೈಟ್‌ (Mangaluru Kuwait ) ನಡುವಿನ ನವೆಂಬರ್‌ನಿಂದ ಕಾರ್ಯಾಚರಿಸುವಂತೆ ಏರ್‌ ಇಂಡಿಯಾ (Air India) ವಿಮಾನ ಹಾರಾಟದ ವೇಳಾಪಟ್ಟಿ (Schedule) ಅಂತಿಮಗೊಂಡಿದೆ. ಆದರೆ ಎರಡನೇ ಬಾರಿಯ ಈ ವೇಳಾಪಟ್ಟಿಯೂ ಯಾನಿಗಳಿಗೆ ಅನುಕೂಲವಾಗಿಲ್ಲ ಎಂಬ ಆರೋಪ ಕುವೈಟ್‌ನಲ್ಲಿರುವ ಅನಿವಾಸಿ ಕರಾವಳಿಗರಿಂದ (Coastal People) ಕೇಳಿಬಂದಿದೆ.

ಕೋವಿಡ್‌ (Covid) ಪ್ರಥಮ ಅಲೆ ವರೆಗೆ ಸಮಪರ್ಕವಾಗಿಯೇ ಇದ್ದ ಮಂಗಳೂರು-ಕುವೈಟ್‌ ವಿಮಾನದ (Flight) ವೇಳಾಪಟ್ಟಿಬಳಿಕ ದಿಢೀರನೆ ರಾತ್ರಿ (Night) ಬದಲು ಹಗಲಿಗೆ ಬದಲಾಯಿತು. ಗುರುವಾರ ಹೊರಟು ಮಂಗಳೂರಿಗೆ ಆಗಮಿಸುವವರಿಗೆ ಈ ವೇಳಾಪಟ್ಟಿ ಅನುಕೂಲವಾಗಿತ್ತು. ಕುವೈಟ್‌ನಲ್ಲಿ ಶುಕ್ರವಾರ ಮತ್ತು ಶನಿವಾರ ವಾರಾಂತ್ಯ ರಜೆ ಇರುವುದರಿಂದ ಇದು ಕರಾವಳಿ ಊರಿಗೆ ಬಂದುಹೋಗುವ ಕುವೈಟ್‌ ಉದ್ಯೋಗಿಗಳಿಗೆ (Employees) ಹೆಚ್ಚು ಪ್ರಯೋಜನವಾಗುತ್ತಿತ್ತು. ರಜೆ ಇಲ್ಲದೆ ಭಾನುವಾರ ಮತ್ತೆ ಕೆಲಸಕ್ಕೆ ಹಾಜರಾಗಲು ಸುಲಭವಾಗುತ್ತಿತ್ತು.

Air India ಮಾರಾಟ: ಒಪ್ಪಂದಕ್ಕೆ ಸಹಿ ಹಾಕಿದ ಕೇಂದ್ರ ಸರ್ಕಾರ!

ಆದರೆ ಮೊದಲ ಕೋವಿಡ್‌ ನಂತರ ಇದೇ ವೇಳಾಪಟ್ಟಿಯನ್ನು ಹಠಾತ್ತನೆ ಬದಲಾಯಿಸಲಾಗಿದೆ. ರಾತ್ರಿ ಬದಲು ಹಗಲಿಗೆ ಮಾರ್ಪಡಿಸಲಾಗಿತ್ತು. ಇದರಿಂದಾಗಿ ಕುವೈಟ್‌-ಮಂಗಳೂರು ಯಾನಿಗಳಿಗೆ ವಾರದ ಕರ್ತವ್ಯದ ಅವಧಿಯಲ್ಲಿ ರಜೆ (Leave) ಹಾಕಿ ಬರಬೇಕಾಗುತ್ತಿತ್ತು. ಹೀಗಾಗಿ ಈ ಸಮಯವನ್ನು ಹಿಂದಿನಂತೆ ಮರು ನಿಗದಿಪಡಿಸುವಂತೆ ಕುವೈಟ್‌ನ ಕರಾವಳಿಗರ ಸಂಘಟನೆಗಳು ದ.ಕ. ಸಂಸದರಿಗೆ ಮನವಿ ಸಲ್ಲಿಸಿದ್ದರು. ಆದರೆ ಈಗ ಪ್ರಕಟವಾಗಿರುವ ವೇಳಾಪಟ್ಟಿಯಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ಇದು ಕೂಡ ಕುವೈಟ್‌ನಲ್ಲಿ ಇರುವ ಕರಾವಳಿಗರಿಗೆ ಬಂದುಹೋಗಲು ಅಸಾಧ್ಯವಾಗುವಂತೆ ಇದೆ.

ವಾರದ ಮಧ್ಯೆ ವಿಮಾನ:

ಹೊಸ ವೇಳಾ ಪಟ್ಟಿ ಪ್ರಕಾರ ಮಂಗಳೂರಿನಿಂದ ಪ್ರತಿ ಮಂಗಳವಾರ (Tuesday) ಬೆಳಗ್ಗೆ 6 ಗಂಟೆಗೆ ಹೊರಟರೆ, ಬುಧವಾರ ಬೆಳಗ್ಗೆ 8.45ಕ್ಕೆ ಕುವೈಟ್‌ಗೆ ಹೊರಡಲಿದೆ. ಇದು ಕುವೈಟ್‌ನಲ್ಲಿ ಇರುವ ಕರಾವಳಿ ಉದ್ಯೋಗಿಗಳಿಗೆ ಅನುಕೂಲ ಆಗುವುದಿಲ್ಲ. ವಾರದ ಕೆಲಸದ ದಿನದ ಮಧ್ಯೆ ವಿಮಾನ ಸಂಚಾರ ಏರ್ಪಡಿಸಿರುವುದರಿಂದ ಊರಿಗೆ ಬಂದುಹೋಗಬೇಕಾದರೆ ರಜೆ ಹಾಕಬೇಕಾಗುತ್ತದೆ. ಹಾಗಾಗಿ ಈ ವೇಳಾ ಪಟ್ಟಿಯನ್ನು ಹಿಂದಿನಂತೆ ರಾತ್ರಿಗೆ ಬದಲಾಯಿಸುವುದೇ ಸೂಕ್ತ ಎಂದು ಅಭಿಪ್ರಾಯಪಡುತ್ತಾರೆ.

ಅಧಿಕಾರಗಳ ಸಮಜಾಯಿಷಿ:

ಮಂಗಳೂರಿನ ಏರ್‌ ಇಂಡಿಯಾ ಅಧಿಕಾರಿಗಳ ಪ್ರಕಾರ, ನ.30ರ ವರೆಗೆ ವಂದೇ ಭಾರತ್‌ ಮಿಷನ್‌ನಡಿ ಈ ರೀತಿ ವಿಮಾನ ಸಂಚರಿಸುತ್ತದೆ. ಕೋವಿಡ್‌ ವೇಳೆಯ ಸಂಚಾರ ಇದಾಗಿದ್ದು, ಇದು ತಾತ್ಕಾಲಿಕ ವೇಳಾಪಟ್ಟಿ. ಹಾಗಾಗಿ ಮತ್ತೆ ವೇಳಾಪಟ್ಟಿಪರಿಷ್ಕರಣೆಯಾಗುವ ಸಂಭವ ಇದೆ ಎಂದು ಹೇಳುತ್ತಾರೆ.

  •   ವಿಮಾನ ಅಂತಿಮ ವೇಳಾ ಪಟ್ಟಿ ಪ್ರಕಟ ಕುವೈಟ್‌ ಯಾನಿಗಳಿಗೆ ಮತ್ತೆ ಅನಾನುಕೂಲ
  • ನವೆಂಬರ್‌ನಿಂದ ಕಾರ್ಯಾಚರಿಸುವಂತೆ ಏರ್‌ ಇಂಡಿಯಾ ವಿಮಾನ ಹಾರಾಟದ ವೇಳಾಪಟ್ಟಿ
  • ಎರಡನೇ ಬಾರಿಯ ಈ ವೇಳಾಪಟ್ಟಿಯೂ ಯಾನಿಗಳಿಗೆ ಅನುಕೂಲವಾಗಿಲ್ಲ ಎಂಬ ಆರೋಪ 
  • ಕುವೈಟ್‌ನಲ್ಲಿರುವ ಅನಿವಾಸಿ ಕರಾವಳಿಗರಿಂದ ಆರೋಪ 
  • ಕೋವಿಡ್‌ ಪ್ರಥಮ ಅಲೆ ವರೆಗೆ ಸಮಪರ್ಕವಾಗಿಯೇ ಇದ್ದ ಮಂಗಳೂರು-ಕುವೈಟ್‌ ವಿಮಾನದ ವೇಳಾಪಟ್ಟಿ
  • ವಿಮಾನದ ವೇಳಾಪಟ್ಟಿ ಬಳಿಕ ದಿಢೀರನೆ ರಾತ್ರಿ ಬದಲು ಹಗಲಿಗೆ ಬದಲಾಯಿತು
  • ಗುರುವಾರ ಹೊರಟು ಮಂಗಳೂರಿಗೆ ಆಗಮಿಸುವವರಿಗೆ ಈ ವೇಳಾಪಟ್ಟಿ ಅನುಕೂಲವಾಗಿತ್ತು
  • ಕುವೈಟ್‌ನಲ್ಲಿ ಶುಕ್ರವಾರ ಮತ್ತು ಶನಿವಾರ ವಾರಾಂತ್ಯ ರಜೆ ಇರುವುದರಿಂದ ಇದು ಕರಾವಳಿ ಊರಿಗೆ ಬಂದುಹೋಗುವ ಕುವೈಟ್‌ ಉದ್ಯೋಗಿಗಳಿಗೆ ಹೆಚ್ಚು ಪ್ರಯೋಜನ
  • ಹಿಂದಿನಂತೆ ಮರು ನಿಗದಿಪಡಿಸುವಂತೆ ಕುವೈಟ್‌ನ ಕರಾವಳಿಗರ ಸಂಘಟನೆಗಳು ದ.ಕ. ಸಂಸದರಿಗೆ ಮನವಿ 
  • ಹೊಸ ವೇಳಾಪಟ್ಟಿಪ್ರಕಾರ ಮಂಗಳೂರಿನಿಂದ ಪ್ರತಿ ಮಂಗಳವಾರ ಬೆಳಗ್ಗೆ 6 ಗಂಟೆಗೆ ಹೊರಟರೆ, ಬುಧವಾರ ಬೆಳಗ್ಗೆ 8.45ಕ್ಕೆ ಕುವೈಟ್‌ಗೆ ಹೊರಡಲಿದೆ
Follow Us:
Download App:
  • android
  • ios