Selfie Craze| ಶಿಥಿಲ ಸೇತುವೆ ಮೇಲೆ ಸೆಲ್ಫಿಗೆ ಪೋಸು..!
* ಹೊಸಪೇಟೆ ಮತ್ತು ಕೊಪ್ಪಳ ಮಧ್ಯ ಭಾಗದಲ್ಲಿ ಬರುವ ಶಿಥಿಲ ಕಿರುಸೇತುವೆ
* ಸೇತುವೆ ಮೇಲೆ ತೆರಳಲು ನಿಷೇಧ
* ಸಂಭಾವ್ಯ ಅಪಾಯ ತಪ್ಪಿಸಬೇಕು ಎಂಬುದು ಪ್ರಜ್ಞಾವಂತರ ಒತ್ತಾಯ
ಹೊಸಪೇಟೆ(ನ.24): ತುಂಗಭದ್ರಾ ಜಲಾಶಯದಿಂದ(Tungabhadra Dam) ಭಾರಿ ಪ್ರಮಾಣದಲ್ಲಿ ನದಿಗೆ ನೀರು ಹರಿಸಿದ ವೇಳೆ ಹೊಸಪೇಟೆ ಮತ್ತು ಕೊಪ್ಪಳ ಮಧ್ಯ ಭಾಗದಲ್ಲಿ ಬರುವ ಶಿಥಿಲ ಕಿರುಸೇತುವೆ ಮೇಲೆ ನಿಂತು ಜನ ಸೆಲ್ಫಿಗೆ(Selfie) ಮುಗಿಬೀಳುತ್ತಿದ್ದಾರೆ!.
ವಿಜಯನಗರ(Vijayanagara) ಹಾಗೂ ಕೊಪ್ಪಳ(Koppal) ಜಿಲ್ಲೆಯ ಮಧ್ಯಭಾಗದಲ್ಲಿ ಈ ಕಿರು ಸೇತುವೆ(Bridge) ಇದೆ. ಈ ಸೇತುವೆ ಮೇಲೆ ತೆರಳಲು ನಿಷೇಧಿಸಲಾಗಿದೆ. ಆದರೂ ಜನರು ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ. ಇದು ಅಪಾಯಕ್ಕೆಡೆ ಮಾಡಿಕೊಡಲಿದ್ದು, ಸಂಭಾವ್ಯ ಅಪಾಯ ತಪ್ಪಿಸಬೇಕು ಎಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.
ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ(Inflow) ಭಾರಿ ಏರಿಕೆಯಾದರೆ, ಡ್ಯಾಂನಿಂದ ನದಿಗೆ(River) ಭಾರಿ ಪ್ರಮಾಣದಲ್ಲಿ ನೀರು(Water) ಹರಿಸಲಾಗುತ್ತಿದೆ. ಇತ್ತೀಚೆಗೆ 1 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ನದಿಗೆ ಹರಿಸಲಾಗಿತ್ತು. ಈ ವೇಳೆ ಜನರು ಈ ನಿಷೇಧಿತ ಕಿರುಸೇತುವೆ ಮೇಲೆ ನಿಂತು ಸೆಲ್ಫಿ ತೆಗೆದುಕೊಂಡಿದ್ದಾರೆ. ಮಕ್ಕಳ ಸಮೇತ ಸೇತುವೆ ಮೇಲೆ ನಿಂತು ಫೋಟೊ ಹಾಗೂ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಸೇತುವೆಗೆ ತಡೆಗೋಡೆಯೂ ಇಲ್ಲದಾಗಿದೆ. ನೀರಿನ ರಭಸಕ್ಕೆ ಸೇತುವೆ ನಡುಗುತ್ತದೆ. ಈ ಸೇತುವೆ ಶಿಥಿಲವಾಗಿದ್ದರೂ ಅದರ ಮೇಲೆ ನಿಂತು ಜನ ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ. ಸಂಬಂಧಿಸಿದ ಇಲಾಖೆಗಳು ಈ ಬಗ್ಗೆ ಕ್ರಮ ವಹಿಸಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.
Selfie Craze| ಚಲಿಸ್ತಿರೋ ರೈಲಿನ ಜೊತೆಗೊಂದು ಸೆಲ್ಫೀ, ಹುಚ್ಚಾಟಕ್ಕೆ ಜೀವ ಕಳೆದುಕೊಂಡ ಬಾಲಕ!
ಸೆಲ್ಫಿ ತೆಗೆಯುವಾಗ ರೈಲಿಂದ ಬಿದ್ದು ಯುವಕ ಸಾವು
ಬೆಂಗಳೂರು: ಇತ್ತೀಚಿಗೆ ನಿಗೂಢವಾಗಿ ನಾಪತ್ತೆಯಾಗಿದ್ದ ಬೆಂಗಳೂರಿನ(Bengaluru) ಗಾಂಧಿನಗರದಲ್ಲಿನ ಬಾರ್ ಕೆಲಸಗಾರನ ಮೃತದೇಹ(Deadbody) ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಸಮೀಪ ರೈಲ್ವೆ ಸೇತುವೆ ಬಳಿ ಪತ್ತೆಯಾಗಿದ್ದು, ಚಲಿಸುವ ರೈಲಿನ ಬಾಗಿಲಿನಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಆಯ ತಪ್ಪಿ ನದಿಗೆ ಬಿದ್ದು ಆತ ಮೃತಪಟ್ಟ ಘಟನೆ ನ.18 ರಂದು ನಡೆದಿತ್ತು.
ಕಾರಿನ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕ್ಯಾಂಟರ್ ಡಿಕ್ಕಿ: ಇಬ್ಬರ ಸಾವು
ಹೊಸಕೋಟೆ: ಮೇಲ್ಸೇತುವೆ(Flyover) ಮೇಲೆ ಕಾರಿನ ಮುಂದೆ ಸೆಲ್ಫಿ(Selfie) ತೆಗೆದುಕೊಳ್ಳುವ ವೇಳೆ ಹಾಲಿನ ಕ್ಯಾಂಟರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಮೃತಪಟ್ಟು(Death), ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಾವರೆಕೆರೆ ಮೇಲ್ಸೇತುವೆ ಮೇಲೆ ನ.12 ರಂದು ನಡೆದಿತ್ತು.
20 ಜನ ಸಿಡಿಲಿಗೆ ಬಲಿ, ಇವರಲ್ಲಿ 11 ಜನರೂ ಸೆಲ್ಫೀ ತೆಗೀತಿದ್ರು..!
ರಾಜಸ್ಥಾನದ(Rajasthan) ಜೈಪುರ(Jaipur), ಕೋಟಾ, ಝಾಲಾವರ್ ಮತ್ತು ಧೋಲ್ಪುರ್ ಜಿಲ್ಲೆಗಳಲ್ಲಿ ಸಿಡಿಲಿಗೆ ಹದಿನೆಂಟು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಲಿಯಾದವರಲ್ಲಿ ಏಳು ಮಕ್ಕಳೂ ಸೇರಿದ್ದಾರೆ. ರಾಜ್ಯದ ಪ್ರತ್ಯೇಕ ಹಳ್ಳಿಗಳಲ್ಲಿ ನಡೆದ ಸಿಡಿಲಿನ ಅಪಘಾತದಲ್ಲಿ(Accident) ಆರು ಮಕ್ಕಳು ಸೇರಿದಂತೆ ಇಪ್ಪತ್ತೊಂದು ಜನರು ಗಾಯಗೊಂಡಿದ್ದರು.
ಜೈಪುರದಲ್ಲಿ ಸಂಭವಿಸಿದ ಒಂದು ದೊಡ್ಡ ದುರಂತದಲ್ಲಿ, ಅಂಬರ್ ಕೋಟೆ ಬಳಿಯ ಬೆಟ್ಟದ ಮೇಲೆ ಸಿಡಿಲು ಬಡಿದು 11 ಜನರು ಹೆಚ್ಚಾಗಿ ಯುವಕರು ಸಾವನ್ನಪ್ಪಿದ್ದಾರೆ. 8 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಲ್ಲಿ ಕೆಲವರು ವಾಚ್ ಟವರ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರೆ, ಮತ್ತೆ ಕೆಲವರು ಬೆಟ್ಟದ ಮೇಲಿದ್ದರು.
ಕ್ಯಾಬ್ ಚಾಲಕನಿಂದ ಪಾನಮತ್ತ ಯುವತಿ ಮೇಲೆ ಅತ್ಯಾಚಾರ, ಸೆಲ್ಫಿಯಲ್ಲಿ ಸಿಕ್ತು ಸಾಕ್ಷ್ಯ!
ಸೆಲ್ಫಿ ಗೀಳು: ಮೂವರು ಸಹೋದರಿಯರ ದಾರುಣ ಸಾವು
ಮನ್ಸೂನ್‌ನಿಂದ(Monsoon) ಕೆರೆ ನದಿಗಳು ತುಂಬಿವೆ. ಜಲಪಾತಗಳ ಸೌಂದರ್ಯ ಹೆಚ್ಚಿದೆ. ಇಲ್ಲೇ ಒಂದು ಫೋಟೋ ತೆಗೆಯೋಣ ಅಂತ ಗಡಿಬಿಡಿಯಲ್ಲಿ ಧಾವಿಸೋ ಮೊದಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಸೆಲ್ಫೀ ತೆಗೆಯೋ ಗೀಳಿನಿಂದ ಮೂವರು ಸಹೋದರಿಯರು ನೀರಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತೆಲಂಗಾಣದ(Telangana) ನಿರ್ಮಲ್ ಜಿಲ್ಲೆಯ ಶಿಂಗಂಗಂನಲ್ಲಿ ಘಟನೆ ನಡೆದಿದೆ.
ತೆಲಂಗಾಣದ ನಿರ್ಮಲ್ ಜಿಲ್ಲೆಯ ಶಿಂಗಂಗಂ ಗ್ರಾಮದಲ್ಲಿ ಸೆಲ್ಫೀ ಕ್ಲಿಕ್ ಮಾಡುವ ಕ್ರೇಝ್‌ಗೆ ಮೂವರು ಅಪ್ರಾಪ್ತ ಸಹೋದರಿಯರು ಪ್ರಾಣ ಕಳೆದುಕೊಂಡಿದ್ದರು. ಮೃತ ಬಾಲಕಿಯರನ್ನು ಸುನೀತಾ (16), ವೈಶಾಲಿ (14) ಮತ್ತು ಅಂಜಲಿ (14) ಎಂದು ಗುರುತಿಸಲಾಗಿದೆ.
ಮೂವರು ಹದಿಹರೆಯದ ಸಹೋದರಿಯರು ಕಾಣೆಯಾಗಿದ್ದರು. ಮರುದಿನ ಅವರ ಮೃತದೇಹ ಗ್ರಾಮದ ಹೊರವಲಯದಲ್ಲಿರುವ ಕೊಳವೊಂದರಲ್ಲಿ ಪತ್ತೆಯಾಗಿವೆ. ಸೆಲ್ಫಿಗಳನ್ನು ಕ್ಲಿಕ್ ಮಾಡಲು ಮೂವರು ಕೊಳಕ್ಕೆ ಹೋಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.