ಬಳ್ಳಾರಿ: ಅಕ್ರಮ ಗಣಿಗಾರಿಕೆ ನಿಂತ್ರೂ ಪರಿಣಾಮ ಇನ್ನೂ ನಿಂತಿಲ್ಲ, ದಮ್ಮು, ಕೆಮ್ಮು, ಅಸ್ತಮಾಗೆ ನಲುಗಿದ ಜನತೆ..!

ಸ್ಪಾಂಜ್ ಐರನ್ ಕಂಪನಿಗಳ ಧೂಳಿನಿಂದ ನಲುಗಿದ ಗ್ರಾಮಗಳಲ್ಲಿ ಇದೀಗ ದಮ್ಮು, ಕೆಮ್ಮು, ಅಸ್ತಮ ಸೇರಿದಂತೆ ವಿವಿಧ ರೀತಿಯ ಕಾಯಿಲೆಯಿಂದ ಜನರು ಬಳಲುತ್ತಿದ್ದಾರೆ. ಈ ಬಗ್ಗೆ ಅದೆಷ್ಟೋ ಬಾರಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.  

People Suffer from Cough Asthma Disease in Ballari grg

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ(ಸೆ.13):  ಮಳೆ ನಿಂತರ ಅದರ ಹನಿ‌ ನಿಲ್ಲುತ್ತಿಲ್ಲ ಎನ್ನುವ ಮಾತಿಗೆ ಈ ಗ್ರಾಮಗಳನ್ನು ಉದಾಹರಣೆಯಾಗಿ ನೀಡಬಹುದು. ಯಾಕಂದ್ರೇ, ಅಕ್ರಮ ಗಣಿಗಾರಿಕೆ ನಿಂತರು ಬಳ್ಳಾರಿ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಇನ್ನೂ ‌ಅದರ ಪರಿಣಾಮ ನಿಂತಿಲ್ಲ. ಸ್ಪಾಂಜ್ ಐರನ್ ಕಂಪನಿಗಳ ಧೂಳಿನಿಂದ ನಲುಗಿದ ಗ್ರಾಮಗಳಲ್ಲಿ ಇದೀಗ ದಮ್ಮು, ಕೆಮ್ಮು, ಅಸ್ತಮ ಸೇರಿದಂತೆ ವಿವಿಧ ರೀತಿಯ ಕಾಯಿಲೆಯಿಂದ ಜನರು ಬಳಲುತ್ತಿದ್ದಾರೆ. ಈ ಬಗ್ಗೆ ಅದೆಷ್ಟೋ ಬಾರಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.  

ಮನೆಯಲ್ಲಿ ಯಾವ ವಸ್ತು ಮುಟ್ಟಿದ್ರೂ ಧೂಳುಮಯ

ಗ್ರಾಮದ ಅನತಿ ದೂರದಲ್ಲಿರೋ ಸ್ಪಾಂಜ್ ಐರನ್ ಕಂಪನಿಗಳ ಅವಾಂತರ ಒಂದೆರಡಲ್ಲ. ಜಿಲ್ಲಾಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಅದೆಷ್ಟೋ ಬಾರಿ ದೂರು ನೀಡಿದ್ರೂ ಉಪಯೋಗವಾಗ್ತಿಲ್ಲ..ಮನೆಯ ಮಾಳಿಗೆ ಮೇಲಷ್ಟೇ ಅಲ್ಲ ಮನೆಯೊಳಗಿನ ಸಾಮಾಗ್ರಿಗಳು ಧೂಳುಮಯ.

ಮುಂಡರಗಿ ಲೇಔಟ್: ಅಶ್ರಯ ಮನೆಗಳ  ಹಂಚಿಕೆ ವಿಚಾರಕ್ಕೆ ಬಿಜೆಪಿ-ಕಾಂಗ್ರೆಸ್ ಹಗ್ಗ ಜಗ್ಗಾಟ

ಹೌದು, ಇದು ಶ್ರೀಮಂತ ಜಿಲ್ಲೆಯ ಬಡ ಗ್ರಾಮದ ಜನರ ಗೋಳಾಟದ ಕಥೆ. ಗಣಿಗಾರಿಕೆಯಿಂದ‌ ಸರ್ಕಾರಕ್ಕೆ ಸಾವಿರಾರು ಕೋಟಿ ಆದಾಯ ನೀಡುವ ಬಳ್ಳಾರಿ ಜಿಲ್ಲೆಯ ಗ್ರಾಮಗಳ ಪರಿಸ್ಥಿತಿಯಂತು ಇದೀಗ ಹೇಳ ತೀರದ್ದಾಗಿದೆ. ಸಂಡೂರಿನಲ್ಲಿ ಗಣಿ ಪ್ರದೇಶದಿಂದ ಅಲ್ಲಿಯ ಜನರು ನಲುಗಿದ್ದಾಯ್ತು. ಇದೀಗ ಬಳ್ಳಾರಿ ತಾಲೂಕಿನ ಹಲಕುಂದಿ, ಬೆಳಗಲ್, ಬೆಳಗಲ್ ತಾಂಡ, ಸೇರಿದಂತೆ  ನಾಲ್ಕೈದು ಗ್ರಾಮಗಳ ಸುತ್ತಲು ಹತ್ತಕ್ಕೂ ಹೆಚ್ಚು ಸ್ಪಾಂಜ್ ಐರನ್ ಕಂಪನಿಗಳಿವೆ.  ಈ ಕಂಪನಿಗಳು ಹೊರ ಹಾಕುವ ಹೊಗೆ ಮತ್ತು ಧೂಳಿನಿಂದ ಇಲ್ಲಿಯ ಜನರು ಬದುಕು ದುಸ್ತರವಾಗಿದೆ. ನಿತ್ಯ ಸಾವಿರಾರು ಟನ್ ಮೆದು ಕಬ್ಬಿಣ ಉತ್ಪಾದನೆ ಮಾಡುವ ಈ ಕಂಪನಿಗಳು ಸರ್ಕಾರಕ್ಕೆ ಕೋಟಿ ಕೋಟಿ ತೆರಗೆ ಕಟ್ಟುತ್ತವೆ. ಆದ್ರೇ ಗ್ರಾಮಗಳ ಅಭಿವೃದ್ಧಿ ಅಥವಾ ನಿಯಮಗಳ ಪ್ರಕಾರ ಗ್ರಾಮ ಮತ್ತು ಗ್ರಾಮದ ಸುತ್ತಲು ನೀರನ್ನು ಹಾಕಿ ಧೂಳು ಬಾರದಂತೆ ನೋಡಿಕೊಳ್ಳುವದಿಲ್ಲ. ಪರಿಣಾಮ ಹಲಕುಂದಿ ಗ್ರಾಮದಲ್ಲಿ ಕುಡಿಯೋ ನೀರು, ಉಸಿರಾಡೋ ಗಾಳಿ, ತಿನ್ನೋ ಅನ್ನ, ಅಷ್ಟೇ ಯಾಕೆ ಪಾತ್ರೆ ಪಡುಗ, ಮನೆ ಮಠಗಳಲ್ಲೂ ಧೂಳು ಆವರಿಸಿದೆ ಎನ್ನುತ್ತಾರೆ ಗ್ರಾಮದ ಕಾಂತರೆಡ್ಡಿ.

ಚುನಾವಣೆ ಬಹಿಷ್ಕಾರ ಹಾಕಿದ್ರು ಸಮಸ್ಯೆ ಬಗೆಹರಿದಿಲ್ಲ

ಇನ್ನೂ ಧೂಳು ನಿಯಂತ್ರಣ ಮಾಡದ ಸ್ಪಾಂಜ್ ಐರನ್ ಕಂಪನಿ ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೊನ್ನೆ ನಡೆದ ವಿಧಾನ ಸಭೆ ಚುನಾವಣೆ ಬಹಿಷ್ಕಾರ ಹಾಕಲಾಗಿತ್ತು. ಆದ್ರೇ, ಆಗ ಜಿಲ್ಲಾಡಳಿತ ಕೆಲ ಕಂಪನಿಗಳಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಿತ್ತು. ಧೂಳು ನಿಯಂತ್ರಣ ಮಾಡೋದಾಗಿ ಹೇಳಿತ್ತು. ಆದ್ರೇ ಇದೀಗ ಚುನಾವಣೆ ಮುಗಿದ ಮೂರು ತಿಂಗಳ ಬಳಿಕ ಮತ್ತದೆ ಕಥೆಯಾಗಿದೆ ಎಂದು ಗ್ರಾಮಸ್ಥರಾದ ಸುರೇಶ್ ಆರೋಪಿಸಿದ್ದಾರೆ. 

ದೂರು ನೀಡಿದಾಗ ನೋಟಿಸ್ ನೀಡೋದು ಮಾತ್ರ ಅಧಿಕಾರಿಗಳ ಕೆಲಸ

ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲಿ ಇಲ್ಲಿ ಕಂಪನಿಗಳನ್ನು ಮುಚ್ಚಿ ಎಂದು ಯಾರು ಹೇಳ್ತಿಲ್ಲ. ನಿಯಮಗಳ ಪ್ರಕಾರ ಕಂಪನಿಗಳನ್ನು ನಡೆಸೋ ಮೂಲಕ ಮಾಲಿನ್ಯ ನಿಯಂತ್ರಣ ಮಾಡೋದು ಜತೆಗೆ ಜನರ ಜೀವವನ್ನು ಉಳಿಸಿ ಎನ್ನುತ್ತಿದ್ಧಾರೆ. ಆದ್ರೇ, ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದೇ ಇರೋದು ಮಾತ್ರ ದುರ್ದೈವದ ಸಂಗತಿಯಾಗಿದೆ.

Latest Videos
Follow Us:
Download App:
  • android
  • ios