Asianet Suvarna News Asianet Suvarna News

Mandya: ಎಚ್‌ಡಿಕೆ ಬೆಂಬಲಿಸಿ ಜೆಡಿಎಸ್‌ ಅಧಿಕಾರಕ್ಕೆ ತನ್ನಿ : ತಮ್ಮಣ್ಣ

ರೈತರು, ಜನಸಾಮಾನ್ಯರ ಬಗ್ಗೆ ಸದಾ ಚಿಂತಿಸುವ ಎಚ್‌.ಡಿ.ಕುಮಾರಸ್ವಾಮಿಯನ್ನು ಬೆಂಬಲಿಸಿ, ಜೆಡಿಎಸ್‌ಅನ್ನು ಅಧಿಕಾರಕ್ಕೆ ತರಬೇಕು ಎಂದು ಶಾಸಕ ಡಿ.ಸಿ.ತಮ್ಮಣ್ಣ ಮನವಿ ಮಾಡಿದರು.

People Should Support  jDS Says DC Thammanna snr
Author
First Published Nov 5, 2022, 5:02 AM IST

ಭಾರತೀನಗರ: (ನ.05):  ರೈತರು, ಜನಸಾಮಾನ್ಯರ ಬಗ್ಗೆ ಸದಾ ಚಿಂತಿಸುವ ಎಚ್‌.ಡಿ.ಕುಮಾರಸ್ವಾಮಿಯನ್ನು ಬೆಂಬಲಿಸಿ, ಜೆಡಿಎಸ್‌ಅನ್ನು ಅಧಿಕಾರಕ್ಕೆ ತರಬೇಕು ಎಂದು ಶಾಸಕ ಡಿ.ಸಿ.ತಮ್ಮಣ್ಣ ಮನವಿ ಮಾಡಿದರು.

ಸಮೀಪದ ಮಠದಹೊನ್ನಾಯಕನಹಳ್ಳಿ ಮಂಟೇಸ್ವಾಮಿ ಮಠದ ಆವರಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಅನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಕೋರಿದರು.

ರೈತರಿಗೆ  (Farmers) ಏನಾದರೂ ಅನುಕೂಲವಾಗಬೇಕಾದರೆ 2023ರ ಚುನಾವಣೆಯಲ್ಲಿ ಜೆಡಿಎಸ್‌ (JDS)  ಅಧಿಕಾರಕ್ಕೆ ಬರಬೇಕು. ಇಲ್ಲದಿದ್ದರೆ ರೈತರು ಉಳಿವಿಗೆ ಕಷ್ಟವಾಗಲಿದೆ. ರಾಷ್ಟ್ರೀಯ ಪಕ್ಷಗಳನ್ನು ರೈತರು, ಜನಸಾಮಾನ್ಯರನ್ನು ಶೋಷಣೆ ಮಾಡಲಿವೆ ಎಂದು ಎಚ್ಚರಿಸಿದರು.

ನನ್ನ 23 ವರ್ಷದ ರಾಜಕೀಯವನ್ನು ಬೆಂಬಲಿಸಿದ್ದೀರಿ. ಅದೇ ರೀತಿ ನಾನು ಪ್ರಾಮಾಣಿಕವಾಗಿ ಕ್ಷೇತ್ರಕ್ಕೆ ಮೂಲ ಸೌರ್ಕಯ ನೀಡಿದ್ದೇನೆ. ತಾಲೂಕಿನಾದ್ಯಂತ ಶಾಶ್ವತ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಮಾದರಿ ಕ್ಷೇತ್ರವನ್ನಾಗಿಸಲು ಹಗಲಿರುಳು ಶ್ರಮಿಸಿದ್ದೇನೆ. ಮುಂದಿನ ದಿನಗಳಲ್ಲಿ ತಮ್ಮಗಳ ಸಹಕಾರ ಅತ್ಯಗತ್ಯ ಎಂದು ಕೋರಿದರು.

ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆಸ್ತೂರು ಬಿಳಿಯಪ್ಪ ಮಾತನಾಡಿ, ದೂರದೃಷ್ಟಿಯುಳ್ಳ ಡಿ.ಸಿ.ತಮ್ಮಣ್ಣರನ್ನು ಮತ್ತೆ ಆಯ್ಕೆಮಾಡಬೇಕು. ಶಾಸಕ ಡಿ.ಸಿ.ತಮ್ಮಣ್ಣ ಆತಗೂರು ಹೋಬಳಿಯ ಕೆರೆಕಟ್ಟೆಗಳನ್ನು ತುಂಬಿಸಿ ಆ ಭಾಗಕ್ಕೆ ಭಗೀರಥರಾಗಿದ್ದಾರೆ. ಜೊತೆಗೆ 5 ಕಿ.ಮೀ ಅಂತರದಲ್ಲಿ 5 ಪ್ರೌಢಶಾಲೆಯನ್ನು ತೆರೆದು ಮಕ್ಕಳ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಿದ್ದಾರೆ ಎಂದರು.

ತಾಲೂಕಿನ ಆಸ್ಪತ್ರೆಗಳನ್ನು ಉನ್ನತೀಕರಣಗೊಳಿಸಿ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆಸಲ್ಲಿಸಿದ್ದಾರೆ. ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವ ರಸ್ತೆ, ಶಿಕ್ಷಣ, ನೀರಾವರಿ ಯೋಜನೆಗೆ ಹೆಚ್ಚು ಮಹತ್ವ ನೀಡಿರುವುದನ್ನು ಮತದಾರರು ಗಮನಿಸಬೇಕು. ಯುವಕರು ಚಿಂತಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಈ ವೇಳೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ನಂತರ ಚಂದೂಪುರ, ಹಾಗಲಹಳ್ಳಿ, ಎಸ್‌.ಐ.ಹೊನ್ನಲಗೆರೆ, ಹೊಸೂರು, ಎಚ್‌.ಹೊಸಹಳ್ಳಿ, ಮುಡೀನಹಳ್ಳಿ ಗ್ರಾಮಗಳಿಗೆ ತೆರಳಿ ಜನರ ಕುಂದುಕೊರತೆಗಳನ್ನು ಶಾಸಕ ಡಿ.ಸಿ.ತಮ್ಮಣ್ಣ ಆಲಿಸಿದರು.

ಸಮಾರಂಭದಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ತಾಪಂ ಮಾಜಿ ಅಧ್ಯಕ್ಷ ಶಿವಶಂಕರ್‌, ಸದಸ್ಯರಾದ ಎನ್‌.ಸಿ.ಪುಟ್ಟಸ್ವಾಮಿಗೌಡ, ಮಧು, ಹಾಗಲಹಳ್ಳಿ ಪ್ರಕಾಶ್‌, ರಾಜಗಿರಿ, ಹೊನ್ನಾಯಕನಹಳ್ಳಿ ಶಿವಣ್ಣ, ಶ್ರೀನಿವಾಸ್‌, ಲಕ್ಷ್ಮಮ್ಮಬೋರೇಗೌಡ, ಸೊಸೈಟಿ ಶ್ರೀನಿವಾಸ್‌, ಶಿವಲಿಂಗಯ್ಯ, ಹೊಸೂರು ಮಹೇಶ್‌, ಎಚ್‌.ಹೊಸಹಳ್ಳಿ ಎಲ…ಐಸಿ ಮಲ್ಲೇಶ್‌, ಶಿವಕುಮಾರ್‌, ಶಿವಲಿಂಗಪ್ಪ (ತಮ್ಮಡಪ್ಪ), ಈಶ್ವರಪ್ಪ, ರೇವಣ್ಣ, ಎಚ್‌.ಸಿ.ನಾಗೇಶ್‌ ಸೇರಿದಂತೆ ಹಲವರಿದ್ದರು.

ಚನ್ನಪಟ್ಟಣದಿಂದಲೇ ಮುಂದಿನ ಸಲವೂ ಸ್ಪರ್ಧೆ

ಚನ್ನಪಟ್ಟಣ (ಅ. 22): ಮುಂದಿನ ವಿಧಾನಸಭೆ ಚುನಾವಣೆಯನ್ನು (Assembly Elections 2023) ಚನ್ನಪಟ್ಟಣದಿಂದಲೇ ಸ್ಪರ್ಧಿಸುವುದಾಗಿ ತಿಳಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy), ಮಾಗಡಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬುದೆಲ್ಲ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ರಾಮನಗರ (Ramanagara) ಜಿಲ್ಲೆ ಚನ್ನಪಟ್ಟಣ ತಾಲೂಕಿನ ಭೈರಾಪುರದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ನಾನು ಯಾವುದೇ ಕ್ಷೇತ್ರಕ್ಕೆ ಹೋಗುವುದಿಲ್ಲ. ಚನ್ನಪಟ್ಟಣದಿಂದಲೇ ಸ್ಪರ್ಧಿಸುತ್ತೇನೆ. ಮಾಗಡಿ ಕ್ಷೇತ್ರಕ್ಕೆ ಹೋಗುತ್ತೇನೆ ಎಂಬುದು ಸುಳ್ಳು. ಅಲ್ಲಿಂದ ಈಗ ಗೆದ್ದಿರುವ ನಮ್ಮ ಪಕ್ಷದ ಅಭ್ಯರ್ಥಿಯೇ ಸ್ಪರ್ಧೆ ಮಾಡಲಿದ್ದಾರೆ. ಹಾಗೂ ಮತ್ತೆ ಅವರೇ ಗೆದ್ದು ಶಾಸಕರಾಗಲಿದ್ದಾರೆ ಎಂದರು. 

ರಾಜ್ಯಾದ್ಯಂತ ಪಕ್ಷದ ಸಂಘಟನೆ ಕೈಗೊಂಡಿದ್ದ ಕಾರಣ ಕೆಲಕಾಲ ಚನ್ನಪಟ್ಟಣಕ್ಕೆ ಬರಲಿಲ್ಲ. ಇಡೀ ಜಿಲ್ಲೆಯೇ ನನ್ನ ಕರ್ಮಭೂಮಿ. ರಾಮನಗರದಿಂದ ನಾನು ಸ್ಪರ್ಧೆ ಮಾಡುತ್ತಿದ್ದವನು ಅನಿವಾರ್ಯ ಕಾರಣದಿಂದ ಚನ್ನಪಟ್ಟಣಕ್ಕೆ ಬರಬೇಕಾಯಿತು. ದೇವೇಗೌಡರ ಕುಟುಂಬದೊಂದಿಗೆ ಈ ತಾಲೂಕಿನ ಜನತೆ ಹೊಂದಿರುವ ಅವಿನಾಭಾವ ಸಂಬಂಧ ಇದಕ್ಕೆ ಕಾರಣ ಎಂದರು.

ಚನ್ನಪಟ್ಟಣದಲ್ಲಿ ಅಲ್ಪ ಸಂಖ್ಯಾತರ ಕಚೇರಿ: ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಅಧಿಕಾರಕ್ಕೆ ತರುವ ವಿಶ್ವಾಸ  ವ್ಯಕ್ತಪಡಿಸಿರುವ ಎಚ್‌ ಡಿ ಕುಮಾರಸ್ವಾಮಿ ಇಂದು ಚನ್ನಪಟ್ಟಣದಲ್ಲಿ ಅಲ್ಪ ಸಂಖ್ಯಾತರ ಕಚೇರಿಯನ್ನು ತೆರೆಯಲಾಗಿದೆ‌,  ಪಕ್ಷದ ಮುಖಂಡರು ಅತ್ಯಂತ ಆಸಕ್ತಿ ವಹಿಸಿ ಕಚೇರಿ ಆರಂಭಿಸಿದ್ದಾರೆ  ಎಲ್ಲಾ ವರ್ಗದವರಿಗೂ ಕಚೇರಿ ಮೀಸಲಿರಸಲಾಗುತ್ತದೆ" ಎಂದರು. 

ಅಸೆಂಬ್ಲಿ ಚುನಾವಣೆಯಲ್ಲಿ ನಿಖಿಲ್‌ ಸ್ಪರ್ಧೆ ಖಚಿತಪಡಿಸಿದ ಎಚ್‌ಡಿಕೆ

ಇಬ್ರಾಹಿಂ ಅವರ ಸಹಕಾರದೊಂದಿಗೆ ರಾಜ್ಯದಲ್ಲಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಹೊರಟಿದ್ದೇವೆ‌ ಎಂದ ಅವರು "ಕಾರ್ಯಕರ್ತರಿಗೆ ಪಕ್ಷದಲ್ಲಿ ವೈಯಕ್ತಿಕವಾಗಿ ಅಧಿಕಾರವನ್ನು ನೀಡಲಾಗುತ್ತದೆ‌. ಕಾರ್ಯಕರ್ತರ ರಕ್ಷಣೆಯನ್ನು ಪಕ್ಷದಿಂದ ಮಾಡಲಾಗುತ್ತದೆ. ರಾಜ್ಯಾದ್ಯಾಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕು. ನಮಗೆ ಹೆಚ್ಚಿನ ಸಮಯವಿಲ್ಲ. ಎಲ್ಲರೂ ರಾಜ್ಯ ಪ್ರವಾಸ ಮಾಡಲು ಸಿದ್ದರಾಗಬೇಕು. ನಿಖಿಲ್ ಕುಮಾರಸ್ವಾಮಿ ಅವರಿಗೆ ಹಳೆ ಮೈಸೂರು ಭಾಗದ ಸಂಪೂರ್ಣ ಜವಾಬ್ದಾರಿ ನೀಡಲಾಗುವುದು. 60 ಕ್ಕೂ ಹೆಚ್ಚು ಕ್ಷೇತ್ರಗಳ ಜವಬ್ದಾರಿಯನ್ನು ನಿಖಿಲ್ ಅವರಿಗೆ ನೀಡಲಾಗುವುದು" ಎಂದರು. 

Follow Us:
Download App:
  • android
  • ios