tumakur : ಉಳಿತಾಯ ಮಾಡಿ ಆರ್ಥಿಕ ಸಬಲತೆ ಹೊಂದಿ

ಗ್ರಾಹಕರು ಬ್ಯಾಂಕಿನ ಜೊತೆ ಸೌಹಾರ್ದ ಸಂಬಂಧವನ್ನು ಉಳಿಸಿ, ಬೆಳೆಸಿಕೊಳ್ಳುವುದರ ಮೂಲಕ ಹಲವು ಪ್ರಯೋಜನಗಳನ್ನು ಪಡೆದು ಅಭಿವೃದ್ಧಿಯನ್ನು ಹೊಂದಬೇಕು ಎಂದು ಹಣಕಾಸು ವಿಭಾಗೀಯ ಪ್ರಾಂತೀಯ ಕಚೇರಿಯ ಮುಖ್ಯ ವ್ಯವಸ್ಥಾಪಕ ಸಿ. ನಾರಾಯಣ್‌ ಹೇಳಿದರು.

  People Should Financially empowered  from saving snr

 ಗುಬ್ಬಿ ( ನ.30):  ಗ್ರಾಹಕರು ಬ್ಯಾಂಕಿನ ಜೊತೆ ಸೌಹಾರ್ದ ಸಂಬಂಧವನ್ನು ಉಳಿಸಿ, ಬೆಳೆಸಿಕೊಳ್ಳುವುದರ ಮೂಲಕ ಹಲವು ಪ್ರಯೋಜನಗಳನ್ನು ಪಡೆದು ಅಭಿವೃದ್ಧಿಯನ್ನು ಹೊಂದಬೇಕು ಎಂದು ಹಣಕಾಸು ವಿಭಾಗೀಯ ಪ್ರಾಂತೀಯ ಕಚೇರಿಯ ಮುಖ್ಯ ವ್ಯವಸ್ಥಾಪಕ ಸಿ. ನಾರಾಯಣ್‌ ಹೇಳಿದರು.

ಪಟ್ಟಣದ ಎಂ.ಜಿ ರಸ್ತೆಯಲ್ಲಿರುವ ಎಸ್‌ಬಿಐ (SBI)  ಶಾಖೆಯ ಆವರಣದಲ್ಲಿ ಎಸ್‌ಬಿಐ ಬ್ಯಾಂಕ್‌ (Bank)  ವತಿಯಿಂದ ಆಯೋಜಿಸಿದ ಆರ್ಥಿಕ ಸಾಕ್ಷರತಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು. ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರು ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆದು ಉಳಿತಾಯ ಮಾಡುವುದರಿಂದ ಗುಂಪು ಸಾಲಗಳನ್ನು ಪಡೆದು ಬ್ಯಾಂಕಿನೊಂದಿಗೆ ಉತ್ತಮ ವ್ಯವಹಾರವನ್ನು ನಡೆಸಿದಾಗ ಆರ್ಥಿಕವಾಗಿ ಸಬಲತೆಯನ್ನು ಹೊಂದಲು ಸಹಕಾರಿಯಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಿಗುವ ಪ್ರಧಾನಮಂತ್ರಿ ಜನಧನ್‌ ಯೋಜನೆ, ಸುರಕ್ಷಾ ಭೀಮಾ ಯೋಜನೆ, ಜೀವನ್‌ ಜ್ಯೋತಿ ಯೋಜನೆ, ಅಟಲ್‌ ಪಿಂಚಣಿ ಯೋಜನೆ ಸೇರಿದಂತೆ ಮುದ್ರಾ ಯೋಜನೆಗಳಂತಹ ಉತ್ತಮ ಯೋಜನೆಗಳ ಪ್ರಯೋಜನವನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಎಸ್‌ಬಿಐ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಜಿ.ಎ ಶಿವಾನಂದ್‌ ಮಾತನಾಡಿ, ಬ್ಯಾಂಕ್‌ನಲ್ಲಿ ವ್ಯವಹರಿಸುವಾಗ ಯಾವುದೇ ರೀತಿಯ ಸಮಸ್ಯೆಗಳು ಉಂಟಾದರೆ ಬಗೆಹರಿಸಿಕೊಳ್ಳಲು ಆರ್‌ಬಿಐನ ಲೋಕಪಾಲರಿಗೆ ದೂರನ್ನು ಲಿಖಿತವಾಗಿ ಅಥವಾ ಮೇಲ್‌ನಲ್ಲಿಯೂ ಸಹ ನೀಡಬಹುದಾಗಿದೆ. ಗ್ರಾಹಕರು ತಮ್ಮದಲ್ಲದ ಬೇರೆಯವರ ದೊಡ್ಡ ಮಟ್ಟದ ಹಣವನ್ನು ತಮ್ಮ ಖಾತೆಗಳಿಗೆ ಜಮಾ ಮಾಡುವುದಾಗಲಿ ಇಲ್ಲವೇ ಖಾತೆಯಿಂದ ಹಣವನ್ನು ಬಿಡಿಸಿಕೊಳ್ಳುವುದಾಗಲಿ ಮಾಡಬಾರದು. ಇದರಿಂದ ಆಗುವ ಸಮಸ್ಯೆಗಳ ಬಗ್ಗೆ ಅರಿವಿರಬೇಕು. ಯಾರಿಗೂ ಸಹ ತಮ್ಮ ಖಾತೆ ಸಂಖ್ಯೆಯನ್ನು ಹಾಗೂ ತಮ್ಮ ಮೊಬೈಲ್‌ಗೆ ಬರುವ ಓಟಿಪಿಯನ್ನು ನೀಡಬಾರದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯರಾದ ಸತ್ಯನಾರಾಯಣ್‌, ಎಸ್‌ಬಿಐ ಶಾಖೆ 2ರ ವ್ಯವಸ್ಥಾಪಕಿ ನಿರ್ಮಲಾ, ಎಫ್‌ಎಲ್‌ಸಿ ಪ್ರಕಾಶ್‌, ಧನಲಕ್ಷ್ಮಿ ಸಂಜೀವಿನಿ ವಿಕಾಸ ಸಂಘ, ಶಾರದಾ ವಿಕಾಸ ಸಂಘ, ಧರಣಿ ವಿಕಾಸ ಸಂಘ, ಶ್ರೀ ಬಸವೇಶ್ವರ ಶ್ರೀ ಶಕ್ತಿ ಸಂಘಗಳ ಮಹಿಳಾ ಪದಾಧಿಕಾರಿಗಳು, ಸದಸ್ಯರು,ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್‌ ಸಿಬ್ಬಂದಿ, ಬ್ಯಾಂಕ್‌ ಸಿಬ್ಬಂದಿ ಸೇರಿದಂತೆ ಬ್ಯಾಂಕ್‌ನ ಗ್ರಾಹಕರು ಉಪಸ್ಥಿತರಿದ್ದರು 

ಮಕ್ಕಳ ಶಿಕ್ಷಣಕ್ಕಾಗಿ ಮಾಡಬೇಕಾದ ವಿಮೆ

ನಮ್ಮ ಜೀವನದ ಪ್ರಮುಖ ವ್ಯಕ್ತಿ, ನಮ್ಮ ಮಗು. ನಮ್ಮ ಮಗುವಿನ ಉಜ್ವಲ ಭವಿಷ್ಯವು ಆರೋಗ್ಯಕರವಾಗಿರಬೇಕು ಎಂದು ಬಯಸುತ್ತೇವೆ. ಆದರೆ ಅದು ಸಮಯದಲ್ಲೂ ಸಾಧ್ಯವಾಗುವುದಿಲ್ಲ. ಹಣಕಾಸಿನ ಕೊರತೆಯಿಂದಾಗಿ ಮಗುವಿನ ಕನಸುಗಳನ್ನ ಈಡೇರಿಸಲು ಸಾಧ್ಯವಾಗದೇ ಹೋಗಬಹುದು. ಅದಕ್ಕಾಗಿ ಮೊದಲೇ ಒಂದಷ್ಟು ಸಿದ್ಧತೆಗಳನ್ನ ಮಾಡಿಕೊಳ್ಳಬೇಕಾಗುತ್ತದೆ. ಆರೋಗ್ಯ (Health) ಮತ್ತು ಜೀವ ವಿಮೆಯ (Life insurance) ಜೊತೆಗೆ ಮಕ್ಕಳ ಕನಸುಗಳನ್ನು ಪೂರೈಸಲು ಮಕ್ಕಳ ಶಿಕ್ಷಣ ವಿಮೆಯು (Child Education Insurance) ಅತ್ಯಗತ್ಯ. ಇಂಥ ವಿಮೆಗಳು ಕನಸುಗಳನ್ನು ತಡೆರಹಿತವಾಗಿ ಈಡೇರಿಸಲು ಸಹಾಯ ಮಾಡುತ್ತವೆ.  ಮಗುವಿನ ಭವಿಷ್ಯದ ಹಣಕಾಸಿನ ಅಗತ್ಯಗಳಾದ ಮದುವೆ, ವ್ಯಾಪಾರವನ್ನು ಪ್ರಾರಂಭಿಸುವುದು,  ಶಿಕ್ಷಣವನ್ನು ಪೂರೈಸಲು ಸಹಾಯ ಮಾಡುತ್ತವೆ.

ಎಲ್ಐಸಿ (LIC) ಮಕ್ಕಳ ಹಣ ಹಿಂತಿರುಗಿಸುವ ಯೋಜನೆ. ಇದು ಬದುಕುಳಿಯುವ ಪ್ರಯೋಜನಗಳನ್ನು ಒಳಗೊಂಡಿರುವ ಲಿಂಕ್ ಮಾಡದ, ಹಣವನ್ನು ಹಿಂತಿರುಗಿಸುವ ವಿಮೆಯಾಗಿದೆ. ಇದು ಪಾಲಿಸಿದಾರರಿಗೆ ತಮ್ಮ ಮಗುವಿನ ಮದುವೆ ಮತ್ತು ಶಿಕ್ಷಣದಂತಹ ಮಹತ್ವದ ವೆಚ್ಚಗಳನ್ನು ಪೂರೈಸಲು ಪ್ರಯೋಜನಕಾರಿಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹತೆಯ ವಯಸ್ಸಿನ ಮಾನದಂಡಗಳು ಗರಿಷ್ಠ 12 ವರ್ಷಗಳಾಗಿರಬೇಕು. ಮೆಚ್ಯೂರಿಟಿ ಅವಧಿಯು 25 ವರ್ಷಗಳಾಗಿರಬೇಕು. ಈ ಯೋಜನೆಯಲ್ಲಿ, ಪಾಲಿಸಿದಾರರ ದುರದೃಷ್ಟಕರ ಸಾವಿನ ಸಂದರ್ಭದಲ್ಲಿ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ.

ಗೂಗಲ್ ಡೂಡಲ್ ಸ್ಪರ್ಧೆ ಗೆದ್ದ ಕೋಲ್ಕತ್ತಾದ ಹುಡುಗ!

HDFC SL ಯುವ ಸ್ಟಾರ್ ಸೂಪರ್ ಪ್ರೀಮಿಯಂ ಯೋಜನೆ. ಇದು ಪ್ರೀಮಿಯಂ ಮನ್ನಾ ಪ್ರಯೋಜನಗಳೊಂದಿಗೆ ಯುನಿಟ್-ಸಂಯೋಜಿತ ಯೋಜನೆಯಾಗಿದ್ದು, ನಿಮ್ಮ ಸಾವಿನ ಸಂದರ್ಭದಲ್ಲಿ ಹೆಚ್ಚಿನ ಪ್ರೀಮಿಯಂಗಳನ್ನು ಪಾವತಿಸದಿರಲು ನಿಮ್ಮ ಕುಟುಂಬವು ಆಯ್ಕೆಯನ್ನು ಆರಿಸಿಕೊಳ್ಳಬಹುದು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಪ್ರೀಮಿಯಂ ಮೊತ್ತವನ್ನು ಆಯ್ಕೆ ಮಾಡಬಹುದು. ಆದಾಗ್ಯೂ ಕನಿಷ್ಠ ಪ್ರೀಮಿಯಂ ವಾರ್ಷಿಕ ₹15,000 ಆಗಿರುತ್ತದೆ. ಇದು ಹೂಡಿಕೆ ಆಧಾರಿತ ಯೋಜನೆಯಾಗಿದೆ. 

ಮ್ಯಾಕ್ಸ್ ಲೈಫ್ ಭವಿಷ್ಯದ ಪ್ರತಿಭೆ ಶಿಕ್ಷಣ ಯೋಜನೆ. ಇದು ಲಿಂಕ್ ಮಾಡದ ಶಿಕ್ಷಣ ಯೋಜನೆಯಾಗಿದೆ. ಇದು ನಿಮ್ಮ ಮಗುವಿನ ಭವಿಷ್ಯದ ಹಣಕಾಸಿನ ಅಗತ್ಯಗಳನ್ನು ಪೂರೈಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಗರಿಷ್ಠ ಜೀವನ ಶಿಕ್ಷಣ ಯೋಜನೆಯ ಪ್ರಾಥಮಿಕ ಉದ್ದೇಶವು ನಿಮ್ಮ ಮಗುವಿನ ಉನ್ನತ ಶಿಕ್ಷಣದ ವೆಚ್ಚವನ್ನು ಸರಿದೂಗಿಸುವುದು. ಇದು ಸಾವಿನ ಸಂದರ್ಭದಲ್ಲಿ ಪಾವತಿ, ಗ್ಯಾರಂಟಿ ಮನಿ ಬ್ಯಾಕ್, ಮೆಚುರಿಟಿ ಪ್ರಯೋಜನಗಳು, ಪ್ರೀಮಿಯಂ ಮನ್ನಾ ಪ್ರಯೋಜನಗಳು ಮತ್ತು ಇನ್ನೂ ಅನೇಕ ಪ್ರಯೋಜನಗಳನ್ನು ಒಳಗೊಂಡಿದೆ. 

Latest Videos
Follow Us:
Download App:
  • android
  • ios