ಮೈಸೂರು(ಏ.19): ನಗರದ ನಜರಬಾದ್‌ ರಸ್ತೆಯಲ್ಲಿ ಬಿದಿದ್ದ 100 ಮುಖ ಬೆಲೆಯ ನೋಟು ಮುಟ್ಟದೆ ಜನ ಬೆಂಕಿ ಹಚ್ಚಿದ್ದಾರೆ. ರಸ್ತೆಯಲ್ಲಿ ದುಡ್ಡು ಬಿದ್ದಿದ್ದರೆ ಸಾಮಾನ್ಯವಾಗಿ ಎತ್ತಿಕೊಳ್ಳಲಾಗುತ್ತದೆ.

ಆದರೆ ನೋಟಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ನೋಟಿನಲ್ಲಿ ಕೊರೋನಾ ಸೋಂಕು ಇರಬಹುದು ಎಂಬ ಅನುಮಾನದ ಮೇಲೆ ಔಷಧ ಅಂಗಡಿಯ ಮುಂದೆ ಬಿದ್ದಿದ್ದ ನೋಟಿಗೆ ಸ್ಯಾನಿಟೈಸರ್‌ ಸಿಂಪಡಿಸಿದ ಬಳಿಕ ಬೆಂಕಿ ಹಚ್ಚಿದ್ದಾರೆ. ಹೀಗೆ ನೋಟಿಗೆ ಬೆಂಕಿ ಇಟ್ಟವಿಡಿಯೋ ವೈರಲ್‌ ಆಗಿದೆ.

ಚಿಕ್ಕಮಗಳೂರು ಮಳೆ: ಸಿಡಿಲಿಗೆ ಮೂವರು ಕಾರ್ಮಿಕರು ಸಾವು

ನೋಟಿನ ಮೂಲಕವೂ ಕೊರೋನಾ ಹರಡುವ ಸಾಧ್ಯತೆ ಇದೆ ಎಂಬ ಭಯದಲ್ಲಿ ಜನರು ಈ ರೀತಿ ಮಾಡಿದ್ದಾರೆ. ವಸ್ತುಗಳ ಮೇಲೆ ವೈರಸ್ ಉಳಿಯಬಹುದಾಗಿದೆ. ಇದರಿಂದ ಭಯಗೊಂಡು ನೋಟು ಉರಿಸಲಾಗಿದೆ.