Asianet Suvarna News Asianet Suvarna News

ಅರಸೀಕೆರೆಯಿಂದ 48 ಕಿಮೀ ಇರುವ ಚನ್ನರಾಯಪಟ್ಟಣಕ್ಕೆ ತೆರಳಲು 2000 ದರ!

ಅರಸೀಕೆರೆಯಿಂದ 48 ಕಿಮೀ ಇರುವ ಚನ್ನರಾಯಪಟ್ಟಣಕ್ಕೆ ತೆರಳಲು 2000 ದರ ನೀಡಿದ್ದಾರೆ.  ಎಲ್ಲಾ ಕಡೆಯು ತೆರಳಲೇಬೇಕಾದಲ್ಲಿ 10 ರಷ್ಟು ಹೆಚ್ಚು ದರ ನೀಡಬೇಕಿದೆ. 

people Pay Heavy Price to Travel Due To KSRTC protest snr
Author
Bengaluru, First Published Dec 13, 2020, 4:22 PM IST

ಅರಸೀಕೆರೆ (ಡಿ.13):  ಸರ್ಕಾರಿ ನೌಕರರೆಂದು ಘೋಷಿಸುವುದು ಸೇರಿದಂತೆ ತಮ್ಮ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ ಚಾಲಕರು ಮತ್ತು ನಿರ್ವಾಹಕರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು ದೂರದೂರುಗಳಿಂದ ಬಂದ ಪ್ರಯಾಣಿಕರು ಮುಂದೆ ಪ್ರಯಾಣಿಸಲಾಗದೇ ಪರದಾಡಿದರೆ, ಇನ್ನೂ ಕೆಲವರು ಈ ಮುಷ್ಕರಕ್ಕೆ ಕಾರಣವಾದವರನ್ನು ಶಪಿಸುತ್ತಾ ಒಂದಕ್ಕೆ 10 ರಷ್ಟುಬೆಲೆ ತೆತ್ತು ಪ್ರಯಾಣಿಸಿದರು.

"

ನೆನ್ನೆ ಕೆಲವು ಬಸ್‌ಗಳು ಸಂಚರಿಸಿದರೂ ಇಂದು ಸಾರಿಗೆ ನೌಕರರು ಪ್ರತಿಭಟನೆ ಹಿನ್ನೆಲೆಯಲ್ಲಿ ಬಸ್‌ ನಿಲ್ದಾಣದತ್ತ ಯಾವುದೇ ಬಸ್‌ಗಳು ಸುಳಿಯದೇ ಇದ್ದದ್ದರಿಂದ ಕೆಲವರಿಗೆ ಹಬ್ಬವಾಗಿ ಪರಿಣಮಿಸಿತು. ಮೈಸೂರಿಗೆ ತೆರಳಲು ಪ್ರಯಾಣಿಕರೊಬ್ಬರು ಕಾರಿಗೆ 4 ಸಾವಿರ ಹಣವನ್ನು ತೆತ್ತರೆ ನಗರದಿಂದ 48ಕಿ.ಮೀ ಇರುವ ಚನ್ನರಾಯಪಟ್ಟಣಕ್ಕೆ 2 ಸಾವಿರ ಕೇಳಿದ್ದು ಉಂಟು ಬಸ್‌ ಪ್ರಯಾಣಕ್ಕೆ 50 ರು. ಇರುವ ಹಾಸನಕ್ಕೆ ಮ್ಯಾಕ್ಸಿ ಕ್ಯಾಬ್‌ಗಳಲ್ಲಿ 150 ರು. ಗಳನ್ನು ಪಡೆಯುವ ಮೂಲಕ ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎಂಬುದನ್ನು ಸಾಬೀತುಪಡಿಸಿದರು.

ಮುಷ್ಕರ ನಿರತರಿಗೆ ಮಾತುಕತೆಗೆ ಮುಕ್ತ ಅಹ್ವಾನ ನೀಡಿದ ಸಾರಿಗೆ ಸಚಿವರು ..

.ಕಲಬುರಗಿಯಿಂದ ರೈಲಿನಲ್ಲಿ ಮಧ್ಯರಾತ್ರಿ ನಗರಕ್ಕೆ ಬಂದ 30ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ಗಳಿಗಾಗಿ ಕಾದು ಆಟೋ ಒಂದಕ್ಕೆ 1 ಸಾವಿರ ನೀಡಿ ಹಾಸನದತ್ತ ಪ್ರಯಾಣಿಸಿದರು. ಗದಗಿನಿಂದ ಧರ್ಮಸ್ಥಳಕ್ಕೆ ತೆರಳಲೆಂದು ಕುಟುಂಬವೊಂದು ಇಲ್ಲಿನ ಬಸ್‌ ನಿಲ್ದಾಣಕ್ಕೆ ಬಂದಿಳಿದಿದ್ದು, ಮಗುವಿನಂದಿಗೆ ತಾಯಿ ಮಗಳು ಎತ್ತಲೂ ಪ್ರಯಾಣಿಸಲು ಸೌಲಭ್ಯವಿಲ್ಲದೆ ತಮ್ಮ ಅತಂತ್ರ ಸ್ಥಿತಿಗೆ ಕಣ್ಣೀರಿಟ್ಟರು .

ಚಿಕ್ಕಮಗಳೂರು ವಿಭಾಗದ ಡಿಟಿಓ ದಿನೇಶ್‌ ನಿಲ್ದಾಣದಲ್ಲಿಯೇ ಎರಡು ದಿನಗಳಿಂದ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ನೌಕರರಿಗೆ ಶಾಂತಿ ಕಾಪಾಡಿಕೊಳ್ಳಿ ಎಂಬ ಹಿತ ನುಡಿಯನ್ನು ನುಡಿಯುತ್ತಿದ್ದರು, ಅಲ್ಲದೆ ಬಸ್‌ ನಿಲ್ದಾಣದೊಳಗೆ ಯಾವುದೇ ವಿರೋಧಿ ಚಟುವಟಿಕೆ ನಡೆಸದಂತೆ ಮನವೊಲಿಸಿ ಹೇಳುತ್ತಿದ್ದರು.ನಿಲ್ದಾಣದ ರಕ್ಷಣೆಗಾಗಿ ಪೋಲೀಸ್‌ ಅಧಿಕಾರಿಗಳು ಸಿಬ್ಬಂದಿ ನೇಮಿಸಿದ್ದರು.

Follow Us:
Download App:
  • android
  • ios