Asianet Suvarna News Asianet Suvarna News

ಚಿಕ್ಕಮಗಳೂರು: ಎರಡೇ ತಿಂಗಳಲ್ಲಿ ಹಾಳಾದ ರಸ್ತೆ, ಕಿತ್ತು ಬರ್ತೀರೋ ಟಾರ್ ಕಂಡು ಜನರ ಆಕ್ರೋಶ

ಹೆಂಚಿನ ಮೇಲೆ ರೊಟ್ಟಿಯಂತೆ ಏಳುತ್ತಿರುವ ಟಾರ್ ಕಂಡು ಜನರ ಆಕ್ರೋಶ

People outrage For Road Damage Just two Months in Chikkamagaluru grg
Author
Bengaluru, First Published Aug 5, 2022, 10:46 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಆ.05):  ಗ್ರಾಮೀಣ ಭಾಗದಲ್ಲಿ ಗುಣ್ಣಮಟ್ಟದ ರಸ್ತೆ ನಿರ್ಮಾಣವಾಗಬೇಕೆಂಬ ಕೂಗು ಜನರದ್ದು. ಆದ್ರೆ ಈ ಉದ್ದೇಶಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಗುತ್ತಿಗೆದಾರರು ಎಳ್ಳು ನೀರು ಬಿಟ್ಟಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಎರಡೇ ತಿಂಗಳಲ್ಲಿ ನಡೆಸಿದ ರಸ್ತೆ ಕಾಮಗಾರಿಯ ನಿಜ ಬಣ್ಣ ಹೊರಬಂದಿದೆ.  

ತುಂತುರ ಮಳೆಗೆ ಬಯಲಾಯ್ತು ರಸ್ತೆಯ ನಿಜಬಣ್ಣ

ಚಿಕ್ಕಮಗಳೂರು ತಾಲೂಕಿನ ತಿರುಗುಣ ಗ್ರಾಮದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಮಾಡಿದ ಎರಡೇ ತಿಂಗಳಲ್ಲಿ ಡಾಂಬರ್ ರಸ್ತೆ ಹಾಳಾಗಿದೆ. ಒಂದು ಕೋಟಿ ವೆಚ್ಚದಲ್ಲಿ ಮಾಡಿದ್ದ ರಸ್ತೆ ಕಳಪೆ ಕಾಮಗಾರಿಯಿಂದ ಎರಡೇ ತಿಂಗಳ ಒಳಗೆ ಗುಂಡಿ ಬಿದ್ದಿದೆ.ತುಂತುರ ಮಳೆಯಿಂದ ರಸ್ತೆಗೆ ಹಾಕಿದ್ದ ಟಾರ್ ಹೆಂಚಿನ ಮೇಲೆ ಹಾಕಿದ ರೊಟ್ಟಿಯಂತೆ ಏಳುತ್ತಿದೆ. ಇದನ್ನು ಕಂಡ ಗ್ರಾಮಸ್ಥರು ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ರಸ್ತೆ ನಿರ್ಮಾಣಕ್ಕಾಗಿ ಈ ಹಿಂದೆ ಗ್ರಾಮಸ್ಥರು ತಮ್ಮ ಜಮೀನುಗಳನ್ನು ಬಿಟ್ಟುಕೊಟ್ಟಿದ್ದರು. ಆದರೆ ಎರಡೇ ತಿಂಗಳಿನಲ್ಲಿ ರಸ್ತೆ ಕಾಮಗಾರಿಯ ನಿಜಬಣ್ಣ ಬಟಾಬಯಲಾಗಿದ್ದು, ಅಧಿಕಾರಿಗಳು, ಹಾಗೂ ಗುತ್ತಿಗೆದಾರರು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಚಿಕ್ಕಮಗಳೂರಿನ ಸರ್ಕಾರಿ ಮೆಡಿಕಲ್‌ ಕಾಲೇಜಿಗೆ ಅನುಮತಿ

ಹಳ್ಳಿ ಜನರ ಕೂಗು ಕೇಳುವವರು  ಯಾರು 

ಗ್ರಾಮದಲ್ಲಿ ನಡೆದಿರುವ ಕಳಪೆ ರಸ್ತೆ ಕಾಮಗಾರಿಯ ಬಗ್ಗೆ ಮಾತಾನಾಡಿದ ಗ್ರಾಮಸ್ಥ ಸಂದೀಪ್ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ನಿರ್ಮಿಸಿದ್ದ ರಸ್ತೆ ಕಿತ್ತು ಬರುತ್ತಿದೆ. ಯಾವ ರೀತಿ ಕಾಮಗಾರಿ ಮಾಡಿದ್ದಾರೋ ಗೊತ್ತಿಲ್ಲ. ಈ ರಸ್ತೆ ಮಾಡುವ ಬದಲು ಹಾಗೇ ಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಕಳಪೆ ಕಾಮಗಾರಿ ಮಾಡಿ ಗುತ್ತಿಗೆದಾರ ಎಸ್ಕೇಫ್ ಆಗಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ರಸ್ತೆ ಸರಿಪಡಿಸದಿದ್ದರೇ ನಾವು ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. 

ಹೊಸ ಡಾಂಬರ್ ರೊಟ್ಟಿಯಂತೆ ಮೇಲೆ ಏಳುತ್ತಿದ್ದು ಕೆಳಗಡೆ ಇದ್ದ ಹಳೇ ಡಾಂಬರ್ ಕೂಡ ಹಾಗೇ ಇದೆ. ಇದನ್ನ ಕಂಡ ಸ್ಥಳಿಯರು ಅಭಿವೃದ್ಧಿಗಾಗಿ ರಸ್ತೆ ಅಲ್ಲ. ದುಡ್ಡಿಗಾಗಿ ರಸ್ತೆ ನಿರ್ಮಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.ಹಳ್ಳಿ ಪ್ರದೇಶಗಳಲ್ಲಿ ರಸ್ತೆಗಳು ಹಾಳಾದರೆ ಅವರು ಸಮಸ್ಯೆಗಳನ್ನು ಹೇಳಿಕೊಳ್ಳಲು ನಗರಕ್ಕೆ ಬರಬೇಕಾಗುತ್ತದೆ. ಆದ್ದರಿಂದ ರಸ್ತೆ ಕಾಮಾಗಾರಿಗಳ ಬಗ್ಗೆ ಪ್ರಶ್ನೆ ಮಾಡುವವರು ಕಡಿಮೆ. ಹೀಗಾಗಿ ಗುತ್ತಿಗೆದಾರರು ತಮಗೆ ಇಷ್ಟ ಬಂದಂತೆ ಹಳ್ಳಿಗಳಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುತ್ತಾರೆ. ಚಿಕ್ಕಮಗಳೂರಿನ ತಿರುಗುಣ ಗ್ರಾಮದಲ್ಲಿಯೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳಪೆ ಕಾಮಗಾರಿ ಆಗಿದೆ ಎಂಬುದು ಆರೋಪ. 
 

Follow Us:
Download App:
  • android
  • ios