ಹಿರೇಬೆಣಕಲ್ ಬಳಿ ಅಣುಸ್ಥಾವರ: ಹತ್ತು ಹಳ್ಳಿಗಳ ಬಂಡಾಯ, ಯೋಜನೆ ನಿಲ್ಲದಿದ್ದರೆ ಉಗ್ರ ಹೋರಾಟ
ಗುರುತಿಸಿದ ಸ್ಥಳದ ಸನಿಹದಲ್ಲಿ ಐತಿಹಾಸಿಕ ಅಂಜನಾದ್ರಿ, ಹಂಪಿ, ಕುಮಾರರಾಮನ ಬೆಟ್ಟ, ಹೇಮಗುಡ್ಡ ಸೇರಿದಂತೆ ಐತಿಹಾಸಿಕ ಸ್ಮಾರಕಗಳಿವೆ. ಇಲ್ಲಿ ಘಟಕ ಸ್ಥಾಪನೆ ಮಾಡಿದರೆ ಪ್ರವಾಸಿಗರಿಗೂ ತೊಂದರೆಯಾಗುವುದಲ್ಲದೆ ಐತಿಹಾಸಿಕ ಸ್ಮಾರಕಗಳಿಗೆ ಧಕ್ಕೆ ಉಂಟಾಗುತ್ತದೆ. ಈ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕು ಎಂಬ ಆಗ್ರಹ
ಗಂಗಾವತಿ(ಡಿ.29): ತಾಲೂಕಿನ ಹಿರೇಬೆಣಕಲ್‌ನ ಮೋರೇರ ಬೆಟದ ಮತ್ವನ ಬಳಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಹಿರೇಬೆಣಕಲ್, ಚಿಕ್ಕಬೆಣಕಲ್ ಸೇರಿದಂತೆ 10ಕ್ಕೂ ಹೆಚ್ಚು ವಿವಿಧ ಗ್ರಾಮಗಳ ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯೋಜನೆ ನಿಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಹಿರೇಬೆಣಕಲ್ ಶಿಲಾ ಸ್ಮಾರಕಗಳ ಬಳಿ ಅಣು ಸ್ಥಾವರ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತಯೇ ಗ್ರಾಮಸ್ಥರು ಒಗ್ಗಟ್ಟಾಗಿ ಸಭೆ ನಡೆಸಿ ಹೋರಾಟದ ಸಿದ್ಧತೆ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಮಾತನಾಡಿದ ಶರಣೇಗೌಡ, ಕನ್ನಡಪ್ರಭ-ಸುವರ್ಣ ನ್ಯೂಸ್ ನ ಕರ್ನಾಟಕದ 7 ಅದ್ಭುತಗಳಲ್ಲಿ ಮೋರೇರ್ ತಟ್ಟೆಗಳಿಗೆ ಮೊದಲ ಸ್ಥಾನ ನೀಡಲಾಗಿದೆ. ಯುನೆಸ್ಕೋ ಪಟ್ಟಿಯಲ್ಲಿ ಸೇರ್ಪಡೆಗೆ ಶಿಫಾರಸುಗೊಂಡಿದೆ. ಆದರೀಗ ಜಿಲ್ಲಾಧಿಕಾರಿ ಏಕಾಏಕಿ ಮೋರೇರ್ ಬೆಟ್ಟದಿಂದ ಎಡೇಹಳ್ಳಿಯ ವರೆಗೂ ಅರಣ್ಯ ಪ್ರದೇಶದ ಸುಮಾರು 1200 ಎಕರೆ ಭೂಮಿಯನ್ನು ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಸಂಬಂಧ ಜಾಗ ಗುರುತಿಸಿ ಸರ್ವೇ ಮಾಡಿಸಿ ಸರಕಾರಕ್ಕೆ ಕಳುಹಿಸಿಕೊಟ್ಟಿರುವುದು ಖಂಡನೀಯ ಎಂದರು.
ಗಂಗಾವತಿ: ಹಿರೇಬೆಣಕಲ್ ಶಿಲೆಗಳ ಬಳಿ ಅಣು ವಿದ್ಯುತ್ ಸ್ಥಾವರ!
ಅಣುಸ್ಥಾವರ ಸ್ಥಾಪನೆಯಿಂದ ಜೀವಸಂಕುಲಕ್ಕೆ ಧಕ್ಕೆಯಾಗುತ್ತದೆ. ಇದರ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೂ ತೊಂದರೆಯಾಗಲಿದೆ. ಕಾರಣ ಕೂಡಲೆ ಜಿಲ್ಲಾಧಿಕಾರಿಗಳು ಇದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಗುರುತಿಸಿದ ಸ್ಥಳದ ಸನಿಹದಲ್ಲಿ ಐತಿಹಾಸಿಕ ಅಂಜನಾದ್ರಿ, ಹಂಪಿ, ಕುಮಾರರಾಮನ ಬೆಟ್ಟ, ಹೇಮಗುಡ್ಡ ಸೇರಿದಂತೆ ಐತಿಹಾಸಿಕ ಸ್ಮಾರಕಗಳಿವೆ. ಇಲ್ಲಿ ಘಟಕ ಸ್ಥಾಪನೆ ಮಾಡಿದರೆ ಪ್ರವಾಸಿಗರಿಗೂ ತೊಂದರೆಯಾಗುವುದಲ್ಲದೆ ಐತಿಹಾಸಿಕ ಸ್ಮಾರಕಗಳಿಗೆ ಧಕ್ಕೆ ಉಂಟಾಗುತ್ತದೆ. ಈ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ ಅವರು, ಮುಂದಿನ 2-3 ದಿನದೊಳಗಾಗಿ ಹೋರಾಟದ ರೂಪುರೇಷೆ ಸಿದ್ದಪಡಿ ಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಆನಂದಗೌಡ, ವೀರೇಶ ಅಂಗಡಿ, ಲಿಂಗಪ್ಪ ಮಠದ, ಲಿಂಗಪ್ಪ ಇಂದರಗಿ, ಯಮನೂರಪ್ಪ ನೀರಲೂಟಿ, ಗೆದಪ್ಪ, ಶಿವಕುಮಾರ ಸೇರಿದಂತೆ ಇತರರು ಭಾಗವಹಿಸಿದ್ದರು.
ರಾಜ್ಯದ 7 ಅದ್ಭುತಗಳಲ್ಲಿ ಸ್ಥಾನ: ಹಿರೇಬೆಣಕಲ್‌ನಲ್ಲಿ ಸಂಭ್ರಮೋತ್ಸವ
ಹೋರಾಟ ಯಾಕೆ?
* ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ನಲ್ಲಿ ಅಣು ಸ್ಥಾವರ ಸಾಪನೆಗೆ ಜಾಗ ಗುರುತು
* 3000 ವರ್ಷಗಳಷ್ಟು ಹಳೆಯ ಐತಿಹಾಸಕ ತಾಣ ಹಿರೇಬೆಣಕಲ್ ನಿಂದ ಕೇವಲ 4 ಕಿ.ಮೀ. ದೂರದಲ್ಲಿದೆ ಗ್ರಾಮ.
* ಅಣುಸ್ಥಾವರ ನಿರ್ಮಾಣ ಆದರೆ ಶಿಲಾ ಸ್ಮಾರಕಗಳಿಗೆ ಧಕ್ಕೆ ಆತಂಕ
ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!
ಹಿರೇಬೆಣಕಲ್ ಶಿಲೆಗಳ ಬಳಿ ಅಣುಸ್ಥಾವರ ನಿರ್ಮಾಣಕ್ಕೆ ಜಾಗ ಗುರುತು ಬಗ್ಗೆ 'ಕನ್ನಡಪ್ರಭ' ನಿನ್ನೆ ವರದಿ ಮಾಡಿತ್ತು.