ಸುಡು ಬಿಸಿಲಿಗೆ ಹೆದರದ ಕಲಬುರಗಿ ಜನ: ಕೊರೋನಾ ಕಾಟಕ್ಕೆ ಸುಸ್ತೋ ಸುಸ್ತು!

ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕೊರೋನಾ ಭೀತಿ| ಕೊರೋನಾದಿಂದ ಬಚಾವ್ ಆಗಲು ಸೀರೆ ಸೆರಗು, ಧೋತಿ, ಶಾಲಿಗೆ ಮೊರೆ| ಕೇಂದ್ರ ಬಸ್ ನಿಲ್ದಾಣದ ಸುತ್ತಮುತ್ತ ಭರದಿಂದ ಸಾಗಿದ ಸ್ವಚ್ಛತೆ ಕಾರ್ಯ| ನಿಲ್ದಾಣದ ಮೂಲೆ ಮೂಲೆಗಳಲ್ಲಿ ಕಸಕಡ್ಡಿ ಸಿಗದಂತೆ ಸ್ವಚ್ಛ| 

People Of Kalaburagi Anxiety for Coronavirus

ಕಲಬುರಗಿ(ಮಾ.15): ಎಂತಹ ಸುಡು ಬಿಸಿಲಿಗೂ ತಲೆಕೆಡಿಸಿಕೊಳ್ಳದ ಕಲಬುರಗಿ ಜನತೆ ಕೊರೋನಾ ವೈರಸ್‌ನಿಂದ ಭಯಭೀತಗೊಂಡಿದ್ದಾರೆ. ಎಲ್ಲರೂ ಕೊರೋನಾ ವೈರಸ್‌ನಿಂದ ತಪ್ಪಿಸಿಕೊಳ್ಳಲು ತಮ್ಮಲ್ಲಿರುವ ಕರವಸ್ತ್ರ, ಮಾಸ್ಕ್, ಶಾಲು, ಸೀರೆ ಸೆರಗಿಗೆ ಮೊರೆ ಹೋಗಿದ್ದಾರೆ. 

ಮಾಸ್ಕ್, ಸ್ಯಾನಿಟೈಜರ್ ಬರ ಕಾಡುತ್ತಿರುವ ಕಲಬುರಗಿಯಲ್ಲಿ ಜನ ತಮ್ಮ ಬಳಿಯ ಲಭ್ಯ ಕರವಸ್ತ್ರ, ಸೀರೆ ಸೆರಗು, ಧೋತಿ, ಶಾಲಿನ ಚುಂಗ್ ಗಳನ್ನೇ ಮಾಸ್ಕ್ ರೂಪದಲ್ಲಿ ಮೂಗು, ಮುಖಕ್ಕೆ ಕಟ್ಟಿಕೊಂಡ ಅಡ್ಡಾಡುತ್ತಿರುವುದು ಸಾಮಾನ್ಯವಾಗಿದೆ. 

ಭಯವೇ ಬೇಡ ಎಂದ್ರು ಕೊರೋನಾ ಪೀಡಿತರ ಜೊತೆಗೆ ಇದ್ದ ಕಾರವಾರದ ಅಭಿಷೇಕ್

ಕೊರೋನಾ ಭೀತಿಯಿಂದಾಗಿ ಹಳ್ಳಿ ಹೆಮ್ಮಕ್ಕಳೂ ಸಹ ಸೀರೆ ಸೆರಗನ್ನೇ ಮುಖಕ್ಕೆ ಮಾಸ್ಕ್ ರೂಪದಲ್ಲಿ ಕಟ್ಟಿಕೊಂಡು ಅಡ್ಡಾಡುತ್ತಿದ್ದಾರೆ. ಕಲಬುರಗಿಗ್ಯಾಗ ಅದೇನೋ ಗಾಳಿ ಅದ ಅಂತಲ್ರಿ, ಅದಕ್ಕೇ ಹೀಗ ಕಟ್ಕೊಂಡೀವಿ ಎಂದು ಹೆಂಗಸರು ಹೇಳುತ್ತ ಕಲಬುರಗಿಯಲ್ಲಿನ ತಮ್ಮ ಕೆಲಸ ಮುಗಿಸಿಕೊಂಡು ಊರಿಗೆ ಸುರಕ್ಷಿತ ಮರಳುತ್ತಿದ್ದಾರೆ. ಕೊರೋನಾ ಭಯ ಅದೆಷ್ಟರಮಟ್ಟಿಗೆ ಕಾಡುತ್ತಿದೆ ಎಂದರೆ ಮುಂಜಾಗ್ರತ ಕ್ರಮವಾಗಿ ತಲೆಗೆ ಕಟ್ಟಿಕೊಳ್ಳುವ ರುಮಾಲು, ಸೀರೆಯ ಸೆರಗು, ಕರವಸ್ತ್ರಗಳನ್ನು ಬಳಸಿಕೊಳ್ಳುತ್ತಿದ್ದಾರೆ. 

ಕೊರೋನಾ ಹೆಸರೆ ಹೇಳಲು ಬರದ ಹಳ್ಳಿಗಳಿಂದ ಬಂದ ಜನರ ಯಾವುದೋ ಮಾರಿ ಬಂದಿದೆಯಂತೆ, ಈ ಜಡ್‌ನಿಂದ ತಪ್ಪಿಸಿಕೊಳ್ಳಲು ಮಾರಿಗೆ ಕಟ್ಟಿಕೊಂಡಿದ್ದೇವೆ ಹೇಳುತ್ತಾರೆ ಹಳ್ಳಿಯ ಜನತೆ. ನಗರದ ಕೇಂದ್ರ ಬಸ್ ನಿಲ್ದಾಣದ ಸುತ್ತಮುತ್ತ ಸ್ವಚ್ಛತೆ ಕಾರ್ಯ ಭರದಿಂದ ಸಾಗಿದೆ. ನಿಲ್ದಾಣದ ಮೂಲೆ ಮೂಲೆಗಳಲ್ಲಿ ಕಸಕಡ್ಡಿ ಸಿಗದಂತೆ ಸ್ವಚ್ಛಗೊಳಿಸಲಾಗುತ್ತಿದೆ. 

ವಿದೇಶದಿಂದ ಬಂದ ಇಬ್ಬರಿಗೆ ಕೊರೋನಾ ಶಂಕೆ: ಆತಂಕದಲ್ಲಿ ಜನತೆ

ಹೊರ ರಾಜ್ಯಗಳಿಂದ ಬರುವ ಬಸ್ ಗಳಷ್ಟೇ ಅಲ್ಲ ವಿವಿಧ ಜಿಲ್ಲೆಗಳಿಂದ ಬರುವ ಬಸ್‌ಗಳಿಗೂ ಫಿನೈಲ್ ಹಾಕಿ ಸ್ವಚ್ಛಗೊಳಿಸಲಾಗುತ್ತಿದೆ. ಬಸ್ ಒಳಗಡೆ ಪ್ರಯಾಣಿಕರು ಕೂಡುವ ಆಸನ ಸ್ವಚ್ಛಗೊಳಿಸಿ ನಿರಂತರವಾಗಿ ಬಸ್ ನಿಲ್ದಾಣದಲ್ಲಿ ಹೋಟೆಲ್‌ಗಳಲ್ಲಿ ಹೋ ಗುವಾಗ ಕೈ ಸ್ವಚ್ಛ ಮಾಡಿಕೊಂಡು ಊಟ ಮಾಡಿಕೊಳ್ಳಬೇಕು. ಸಾಬೂನು ಇಲ್ಲವೆ ಸಾನಿಟರಿಯಿಂದ ಕೈತೊಳೆದುಕೊಳ್ಳಬೇಕು. ಕೊರೋನಾ ವೈರಸ್ ಲಕ್ಷಣಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
 

Latest Videos
Follow Us:
Download App:
  • android
  • ios