Asianet Suvarna News Asianet Suvarna News

ರಮೇಶ ಜಾರಕಿಹೊಳಿಗೇನೋ ಮಂತ್ರಿಗಿರಿ ಸಿಕ್ತು: ಅಭಿವೃದ್ಧಿ ಕಡೆ ಗಮನ ಕೊಡ್ತಾರಾ?

ಸುಗಮ ಸಂಚಾರ, ಪ್ರವಾಸಿ ತಾಣಗಳ ಅಭಿವೃದ್ಧಿ ಸೇರಿದಂತೆ ನಾನಾ ನಿರೀಕ್ಷೆ ಈಡೇರುತ್ತಾ?| ಸಚಿವಗಿರಿ ಯೋಗ; ಅಭಿವೃದ್ಧಿಗೆ ಸಿಗುತ್ತಾ ವೇಗ?|ಗೋಕಾಕನಲ್ಲಿಯೇ ತೋಟಗಾರಿಕೆ ವಿವಿಯ ಅಧ್ಯಯನ ಕೇಂದ್ರ ತೆರೆದರೆ ಇಲ್ಲಿರುವ ಸಾಕಷ್ಟು ವಿದ್ಯಾರ್ಥಿಗಳು ಅನುಕೂಲ|

People of Gokak Development Exception From Minister Ramesh Jarakiholi
Author
Bengaluru, First Published Feb 7, 2020, 12:03 PM IST

ಭೀಮಶಿ ಭರಮಣ್ಣವರ 

ಗೋಕಾಕ(ಫೆ.07): ನಿರೀಕ್ಷೆಯಂತೆ ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ನಾನಾ ಸವಾಲುಗಳನ್ನು ಮೆಟ್ಟಿನಿಂತು ಮತ್ತೆ ಸಚಿವರಾಗಿದ್ದಾರೆ. ಕ್ಷೇತ್ರ ದ ಇತಿಹಾಸದಲ್ಲಿ ಇದುವರೆಗೂ ಖಾತೆ ತೆರೆಯದ ಬಿಜೆಪಿ ಈಗ ಖಾತೆ ಮಾತ್ರವಲ್ಲ, ಸಚಿವ ಸ್ಥಾನವನ್ನೂ ಪಡೆದುಕೊಂಡಿರುವುದಕ್ಕೆ ಕೇಂದ್ರೀಕೃತ ಕಾರಣರಾಗಿದ್ದಾರೆ ರಮೇಶ ಜಾರಕಿಹೊಳಿ. ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ರಮೇಶ ಜಾರಕಿಹೊಳಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರೂ ಕ್ಷೇತ್ರದ ಮತದಾರರು ಮಾತ್ರ ಅವರನ್ನು ಕೈಬಿಟ್ಟಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ, ರಾಜಕೀಯ ಸ್ಥಿತ್ಯಂತರದಿಂದಾಗಿ ಕೈಗೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದಾರೆ. ಸದ್ಯ ಸಿಎಂ ಯಡಿಯೂರಪ್ಪ ಅವರೇ ಭರವಸೆ ಕೊ ಟ್ಟಂತೆ ಸಚಿವರನ್ನಾಗಿಯೂ ಮಾಡಿ ದ್ದಾರೆ. ಈಗ ಕ್ಷೇತ್ರದ ಜನರು ನಾನಾ ಅಭಿವೃದ್ಧಿಯ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಕ್ಷೇತ್ರಕ್ಕೆ ಸಚಿವ ಸ್ಥಾನವೇ ಒಲಿ ದಿರುವುದು ಅಭಿವೃದ್ಧಿ ಕಾಮಗಾರಿಗಳಿ ಗೆ ಹಣ ಬರುವುದರಲ್ಲಿ ಎರಡು ಮಾತಿಲ್ಲ ಎಂಬುವುದು ಜನರ ನಿರೀಕ್ಷೆ. ಸಂಚಾರ ಸುಗಮವಾಗಬೇಕು: ಈಗಾಗಲೇ ರಸ್ತೆ ಕಾಮಗಾರಿಗಳು ಆರಂಭಗೊಂ ಡಿವೆ. ಇನ್ನೂ ಕೆಲವೆಡೆ ರಸ್ತೆ ಅಗಲೀಕರಣ ಜತೆಗೆ ಸಂಚಾರ ನಿಯಂತ್ರಣಕ್ಕೆ ಬೇಕಾಗುವಷ್ಟು ರಸ್ತೆಯ ನಿರ್ಮಾಣ ಕಾರ್ಯವಾಗಬೇಕಿದೆ. ನಗರ ಬೆಳೆದಂತೆ ಅದಕ್ಕೆ ತಕ್ಕಂತೆ ಮೂಲಸೌಲಭ್ಯಗಳು ಕೂಡ ಸಿಗಬೇಕಿದೆ. ಹೀಗಾಗಿ ಸುಗಮ ಸಂಚಾರಕ್ಕೆ ಕಟ್ಟುನಿಟ್ಟಾದ ಸಿಗ್ನಲ್‌ಗಳು, ಸರಿ, ಬೆಸ ಪಾರ್ಕಿಂಗ್ ವ್ಯವಸ್ಥೆಯ ಸಮರ್ಪಕ ಜಾರಿಯಾಗಬೇಕಿದೆ. ಮಾಸ್ಟರ್ ಪ್ಲಾನ್ ಮಾಡಿದ್ದ ರಿಂದ ಗೋಕಾಕ ನಗರದ ಒಳರಸ್ತೆಗಳಲ್ಲಿನ ಸಂಚಾರ ವ್ಯವಸ್ಥೆ ಮೇಲೆ ಭಾರೀ ಪರಿಣಾಮ ಬೀರಿದ್ದು, ಕಾಮಗಾರಿಗೆ ಶೀಘ್ರ ಮುಕ್ತಿಸಿಗಬೇಕಿದೆ.

ನೀರಾವರಿ ಯೋಜನೆಗಳ ವಿಸ್ತರಣೆಯಾಗುವುದೆ?

ಕ್ಷೇತ್ರದಲ್ಲಿ ಘಟಪ್ರಭಾ ನದಿ ಹರಿದಿರುವು ದರಿಂದ ಈ ನದಿಯ ನೀರನ್ನು ಉಪಯೋ ಗಿಸಿಕೊಂಡು ಮತ್ತಷ್ಟು ಭೂಮಿಯನ್ನು ಹಸಿರಾಗಿಸಬೇಕಿದೆ. ಈಗಾಗಲೇ ಸಾವಿರಾ ರು ಎಕರೆ ಪ್ರದೇಶ ನೀರಾವರಿಗೆ ಒಳಪಟ್ಟಿ ದೆ. ಜತೆಗೆ ತುಂತುರು, ಹನಿ ನೀರಾವರಿಯಂತಹ ಯೋಜನೆಗಳ ಅನುಷ್ಠಾನದಲ್ಲಿಯೂ ಮುಂದಿದೆ. ಅದನ್ನು ಮತ್ತಷ್ಟು ಕ್ಷೇತ್ರಕ್ಕೆ ವಿಸ್ತರಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. ಇದರಿಂದ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ.

ತೋಟಗಾರಿಕೆ ವಿವಿ ಅಧ್ಯಯನ ಕೇಂದ್ರ ಸ್ಥಾಪನೆಯಾಗಲಿ

ಕ್ಷೇತ್ರದಲ್ಲಿ ರೈತರ ಮಕ್ಕಳೆ ಹೆಚ್ಚಾಗಿದ್ದಾರೆ. ಇಲ್ಲಿರುವ ಅವರ ಮಕ್ಕಳು ತೋಟಗಾರಿಕೆ, ಹೈನುಗಾರಿಕೆ ಕುರಿತು ಅಧ್ಯಯನ ಮಾಡಬೇಕಾದರೆ, ಅವರು ಬೆಳಗಾವಿಗೆ ತರಬೇತಿಗೆ ಹೋಗಬೇಕು. ಇಲ್ಲವೆ ಬಾಗಲಕೋಟೆ ವಿವಿಗೆ ಹೋಗಬೇಕು. ಆದರೆ, ಇವುಗಳ ವೆಚ್ಚ ಹೆಚ್ಚು. ಹೀಗಾಗಿ ಗೋಕಾಕನಲ್ಲಿಯೇ ತೋಟಗಾರಿಕೆ ವಿವಿಯ ಅಧ್ಯಯನ ಕೇಂದ್ರ ತೆರೆದರೆ ಇಲ್ಲಿರುವ ಸಾಕಷ್ಟು ವಿದ್ಯಾರ್ಥಿಗಳು ಅನುಕೂಲವಾಗುತ್ತದೆ.

ಜಿಲ್ಲೆಯಾಗುವ ಮುನ್ನ ವೈದ್ಯಕೀಯ ಕಾಲೇಜಾಗುತ್ತಾ?

ಅನೇಕ ಅಭಿವೃದ್ಧಿ ಯೋಜನೆಗಳು ಮಾತ್ರವಲ್ಲ, ಒಂದು ವೇಳೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿದರೆ ಅದಕ್ಕೆ ಮೊದಲಾದ್ಯತೆಯಾಗಿ ಚಿಕ್ಕೋಡಿ ಮತ್ತು ಗೋಕಾಕ ಅನ್ನೇ ಪರಿಗಣಿಸಬಹುದು. ಆದರೆ, ಈ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಈಗಿನಿಂದಲೇ ಗೋಕಾಕನಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಿದರೆ ಸೂಕ್ತ ಎಂಬುವು ದರಲ್ಲಿ ಎರಡು ಮಾತಿಲ್ಲ. ಆದರೆ, ತಾಲೂಕು ಕೇಂದ್ರಕ್ಕೆ ವೈದ್ಯಕೀಯ ಕಾಲೇಜು ಸಿಗುವುದು ತೀರಾ ವಿರಳ. ಆದರೆ, ಒಂದು ವೇಳೆ ಮುಂದೊಂದು ದಿನ ಜಿಲ್ಲಾ ಕೇಂದ್ರದ ಅಭಿಲಾಷೆ ಇದ್ದಲ್ಲಿ ಈಗಲೇ ವೈದ್ಯಕೀಯ ಕಾಲೇಜು ಸಿಕ್ಕಲ್ಲಿ ಇಲ್ಲಿನ ಜನರ ಆಶೋತ್ತರಗಳಲ್ಲಿ ಒಂದು ದೊಡ್ಡ ಬಯಕೆ ಈಡೇರಿದಂತಾಗುತ್ತದೆ.

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಬೇಕು ಚುರುಕು

ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಆಕರ್ಷಣೆ ಕೇಂದ್ರವಾಗಿರು ವುದು ಗೋಕಾಕ ಫಾಲ್ಸ್. ಇದುವರೆಗೆ ರಾಜ್ಯದ ನಾನಾ ಭಾಗಗಳ ಜನರು ಜತೆಗೆ ಪಕ್ಕದ ಗೋವಾ ಮತ್ತು ಮಹಾರಾಷ್ಟ್ರದ ಪ್ರವಾಸಿಗ ರು ಈ ಪ್ರಕೃತಿಯ ಸೊಬಗನ್ನು ಸವಿದಿದ್ದಾರೆ. ಇವರೊಟ್ಟಿಗೆ ಇನ್ನೂ ಅನೇಕ ರಾಜ್ಯಗಳು ಜನರು ಇಲ್ಲಿಗೆ ಬರುವಂತಾಗಬೇಕಿದೆ. ಇದಕ್ಕಾಗಿ ಪ್ರವಾಸಿಗರು ಇಲ್ಲಿ ಉಳಿದುಕೊ ಳ್ಳಲು ಪ್ರವಾಸೋದ್ಯಮ ಇಲಾಖೆಯಿಂದ ಉತ್ಕೃಷ್ಠ ದರ್ಜೆಯ ಹೋಟೆಲ್‌ಗಳ ನಿರ್ಮಾಣವಾಗಬೇಕಿದೆ. ಗೊಡಚನಮಿಲ್ಕಿ ಸೇರಿದಂತೆ ಕ್ಷೇತ್ರದ ಸುತ್ತಮುತ್ತಲಿರುವ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಬೇಕಿದೆ.

Follow Us:
Download App:
  • android
  • ios