ವಿಜಯಪುರ: ಕೈಗೂಡುತ್ತಾ ಜನರ ದೋಣಿ ವಿಹಾರದ ನಿರೀಕ್ಷೆ?

ವಿಶ್ವ ವಿಖ್ಯಾತ ಗೋಳಗುಮ್ಮಟ ಖ್ಯಾತಿಯ ಐತಿಹಾಸಿಕ ಪ್ರಸಿದ್ಧಿ ಪಡೆದ ನಗರ. ಈ ಗುಮ್ಮಟ ನಗರಿಗೆ ದೇಶ, ವಿದೇಶದಿಂದ ಗೋಳಗುಮ್ಮಟ, ಇಬ್ರಾಹಿಂರೋಜಾ, ಬಾರಾಕಮಾನ, ಉಪ್ಪಲಿ ಬುರುಜ್‌, ಮುಲಿಕ್‌ ಮೈದಾನ ತೋಪು, ಗಗನಮಹಲ್‌, ಆನಂದಮಹಲ್‌ ಮುಂತಾದ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಲು ಬರುತ್ತಾರೆ. ಇಂಥ ಐತಿಹಾಸಿಕ ಪ್ರಸಿದ್ಧಿ ಪಡೆದ ಗುಮ್ಮಟನಗರಿ ವಿಜಯಪುರ ನಗರದ ನರಸಿಂಹ ದೇವಸ್ಥಾನದ ಪಕ್ಕದ ಕಂದಕದಲ್ಲಿ ದೋಣಿ ವಿಹಾರ ಆರಂಭಿಸಿದರೆ ನಗರ ಸೌಂದರ್ಯೀಕರಣಕ್ಕೆ ಹೊಸ ಕಾಯಕಲ್ಪ ದೊರೆತಂತಾಗುತ್ತದೆ.

People Looking to the Boat Ride in Vijayapura grg

ರುದ್ರಪ್ಪ ಆಸಂಗಿ

ವಿಜಯಪುರ(ಜು.12): ಐತಿಹಾಸಿಕ ಗೋಳಗುಮ್ಮಟ ನಗರಿ ವಿಜಯಪುರ ಸೌಂದರ್ಯೀಕರಣಕ್ಕೆ ಪೂರಕವಾಗಿ ನಗರದ ನರಸಿಂಹ ದೇವಸ್ಥಾನ ಪಕ್ಕದಲ್ಲಿನ ಕಂದಕದಲ್ಲಿ ದೋಣಿ ವಿಹಾರ ಆರಂಭಿಸುವ ಜನರ ಹಲವಾರು ದಶಕಗಳ ಕನಸು ನನಸಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಇನ್ನಾದರೂ ಕಾರ್ಯ ಪ್ರವೃತ್ತರಾಗುವರೆ? ಎಂಬುವುದು ಜನರ ಪಾಲಿಗೆ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

ವಿಶ್ವ ವಿಖ್ಯಾತ ಗೋಳಗುಮ್ಮಟ ಖ್ಯಾತಿಯ ಐತಿಹಾಸಿಕ ಪ್ರಸಿದ್ಧಿ ಪಡೆದ ನಗರ. ಈ ಗುಮ್ಮಟ ನಗರಿಗೆ ದೇಶ, ವಿದೇಶದಿಂದ ಗೋಳಗುಮ್ಮಟ, ಇಬ್ರಾಹಿಂರೋಜಾ, ಬಾರಾಕಮಾನ, ಉಪ್ಪಲಿ ಬುರುಜ್‌, ಮುಲಿಕ್‌ ಮೈದಾನ ತೋಪು, ಗಗನಮಹಲ್‌, ಆನಂದಮಹಲ್‌ ಮುಂತಾದ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಲು ಬರುತ್ತಾರೆ. ಇಂಥ ಐತಿಹಾಸಿಕ ಪ್ರಸಿದ್ಧಿ ಪಡೆದ ಗುಮ್ಮಟನಗರಿ ವಿಜಯಪುರ ನಗರದ ನರಸಿಂಹ ದೇವಸ್ಥಾನದ ಪಕ್ಕದ ಕಂದಕದಲ್ಲಿ ದೋಣಿ ವಿಹಾರ ಆರಂಭಿಸಿದರೆ ನಗರ ಸೌಂದರ್ಯೀಕರಣಕ್ಕೆ ಹೊಸ ಕಾಯಕಲ್ಪ ದೊರೆತಂತಾಗುತ್ತದೆ.

BHIMATIRA ROWDY SHEETER MURDER: ಬಡ್ಡಿ ದಂಧೆಗೆ ಹಾಡಹಗಲೇ ಭೀಮಾತೀರದಲ್ಲಿ ಬಿತ್ತು ರೌಡಿಶೀಟರ್‌ ಹೆಣ!

ನರಸಿಂಹ ದೇವಸ್ಥಾನದ ಪಕ್ಕದಲ್ಲಿನ ಕಂದಕದಲ್ಲಿ ಸರ್ವಋುತುಗಳಲ್ಲಿ ಸಾಕಷ್ಟುನೀರು ಇರುತ್ತದೆ. ವರ್ಷದ 12 ತಿಂಗಳು ಈ ಕಂದಕದ ನೀರಿನಲ್ಲಿ ದೋಣಿ ವಿಹಾರ ಆರಂಭಿಸುವ ಮೂಲಕ ಇದನ್ನು ಪ್ರೇಕ್ಷಣೀಯ ಸ್ಥಳವಾಗಿ ಪರಿವರ್ತಿಸಬಹುದು. ಇದು ಸರ್ಕಾರಕ್ಕೆ ಆದಾಯದ ಮೂಲವೂ ಕೂಡಾ ಆಗುತ್ತದೆ. ಆದರೆ, ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ, ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸೂಕ್ತ ಗಮನಹರಿಸಬೇಕಿದೆ. ಆದರೆ, ಜಿಲಾಡಳಿತವಾಗಲಿ, ಮಹಾನಗರಪಾಲಿಕೆ ಹಾಗೂ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ಈ ನಿಟ್ಟಿನಲ್ಲಿ ಇಲ್ಲಿಯವರೆಗೆ ಯೋಚಿಸದೇ ಇರುವುದರಿಂದ ನರಸಿಂಹ ದೇವಸ್ಥಾನದ ಪಕ್ಕದ ಕಂದಕದಲ್ಲಿನ ನೀರಿನಲ್ಲಿ ದೋಣಿ ವಿಹಾರ ನಡೆಸಬೇಕು ಎಂಬ ಜನರ ನಿರೀಕ್ಷೆ ಇನ್ನೂ ನಿರೀಕ್ಷೆಯಾಗಿಯೇ ಉಳಿದಿದೆ.

ದೋಣಿ ವಿಹಾರಕ್ಕೆ ಏನದು ತೊಡಕು?:

ನರಸಿಂಹ ದೇವಸ್ಥಾನದ ಪಕ್ಕದಲ್ಲಿನ ಕಂದಕದ ನೀರಿನಲ್ಲಿ ದೋಣಿ ವಿಹಾರ ಸ್ಥಾಪಿಸಲು ವಿಫುಲವಾದ ಆವಕಾಶಗಳಿವೆ. ಆದರೆ ಈ ದೋಣಿ ವಿಹಾರ ಸ್ಥಾಪನೆ ವಿಚಾರ ಕೆಲ ಅಡ್ಡಿ ಅತಂಕಗಳು ಎದುರಾಗಿವೆ. ಹೀಗಾಗಿ, ವಿಜಯಪುರ ನಗರದ ನಿವಾಸಿಗಳ ದೋಣಿ ವಿಹಾರ ಕನಸು ನನಸಾಗದೇ ನನೆಗುದಿಗೆ ಬಿದ್ದಿದೆ. ಈ ಜಾಗೆ ಪುರಾತತ್ವ ಹಾಗೂ ಪ್ರಾಚ್ಯವಸ್ತು ಇಲಾಖೆಗೆ ಸೇರಿದೆ. ಅಲ್ಲದೆ, ಈ ಜಾಗೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಇದೆ. ಇದಕ್ಕೂ ಮೇಲಾಗಿ ಜಿಲ್ಲಾಡಳಿತ ವ್ಯಾಪ್ತಿಗೂ ಈ ಜಾಗೆ ಬರುತ್ತದೆ. ಜಿಲ್ಲಾ ಆಡಳಿತ, ಮಹಾನಗರ ಪಾಲಿಕೆ ಹಾಗೂ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ಸಮನ್ವಯದಿಂದ ಕೆಲಸ ಮಾಡಿದರೆ ನರಸಿಂಹ ದೇವಸ್ಥಾನದ ಪಕ್ಕದ ಕಂದಕದಲ್ಲಿ ದೋಣಿ ವಿಹಾರ ಆರಂಭಿಸುವುದು ಕಷ್ಟದ ಕೆಲಸವೇನಲ್ಲ. ಆದರೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.

ಪುರಾತತ್ವ ಹಾಗೂ ಪ್ರಾಚ್ಯವಸ್ತು ಇಲಾಖೆ ಈ ಜಾಗೆಯಲ್ಲಿ ಉದ್ಯಾನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಉತ್ಸುಕವಾಗಿದೆ. ಈ ಜಾಗೆಯಲ್ಲಿ ಮಹಾನಗರಪಾಲಿಕೆ ಚರಂಡಿ ನೀರು ಹರಿಬಿಡುತ್ತಿದೆ. ಇದನ್ನು ಬಂದ್‌ ಮಾಡಿದರೆ ನಗರ ಸೌಂದರ್ಯಕ್ಕೆ ಪೂರಕವಾಗುವಂತೆ ಉದ್ಯಾನ ಸ್ಥಾಪಿಸಲು ಕ್ರಮ ವಹಿಸುವ ಇರಾದೆ ಹೊಂದಿದೆ. ಆದರೆ, ಒಂದು ಕಡೆ ಚರಂಡಿ ನೀರು ಅವ್ಯಾಹತವಾಗಿ ಈ ಜಾಗೆಗೆ ಹರಿದು ಬರುತ್ತಿರುವುದರಿಂದ ಕೊಳಚೆ ನೀರು ಭಾರಿ ಪ್ರಮಾಣದಲ್ಲಿ ಗಬ್ಬುವಾಸನೆ ಹರಡುತ್ತಿದೆ. ಆದರೆ ಇನ್ನೊಂದು ದಡಕ್ಕೆ ನರಸಿಂಹ ದೇವಸ್ಥಾನದ ಪಕ್ಕದ ಕಂದಕದಲ್ಲಿ ಸ್ವಚ್ಛ ನೀರು ಇದೆ. ಆದಾಗ್ಯೂ ಭೂಮಿ ತಳಮಟ್ಟದಿಂದ ಕೊಳಚೆ ನೀರು ಸ್ವಚ್ಛ ನೀರಿನ ಕಂದಕಕ್ಕೂ ಹರಿದು ಬರುತ್ತಿದೆ. ಹೀಗಾಗಿ, ದೋಣಿ ವಿಹಾರ ಸ್ಥಾಪನೆ ಕನಸಿಗೆ ಮತ್ತೊಂದು ಅಡ್ಡಿಯಾದಂತಾಗಿದೆ.

ಈ ಎರಡು ಅಡೆತಡೆಗಳನ್ನು ನಿವಾರಿಸಿಕೊಂಡು ಜಿಲ್ಲಾಡಳಿತ ಹಾಗೂ ಇತರ ಇಲಾಖೆಗಳು ಸಮನ್ವಯದಿಂದ ಮುನ್ನುಗ್ಗಿದರೆ ವಿಜಯಪುರದಲ್ಲಿ ದೋಣಿ ವಿಹಾರ ಕನಸು ನನಸಾಗುವ ಕಾಲ ದೂರವಿಲ್ಲ. ಇನ್ನಾದರೂ ಜಿಲ್ಲಾ ಆಡಳಿತ, ಮಹಾನಗರಪಾಲಿಕೆ ಹಾಗೂ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆಗಳು ಸಮನ್ವಯದಿಂದ ಕೈಜೋಡಿಸಿ ವಿಜಯಪುರ ಜನರ ಬಹುದಿನಗಳ ದೋಣಿ ವಿಹಾರ ಸ್ಥಾಪನೆ ಕನಸು ಸಾಕಾರಗೊಳಿಸಬೇಕು ಎಂಬುದು ನಾಗರಿಕರ ನಿರೀಕ್ಷೆಯಾಗಿದೆ.

ಹೆಚ್‌ಡಿಕೆ ಪೆನ್‌ಡ್ರೈವ್ ಸತ್ಯಾಸತ್ಯತೆ ತನಿಖೆ ಮಾಡ್ತೇವೆ: ಸಚಿವ ಎಂ ಬಿ ಪಾಟೀಲ್

ವಿಜಯಪುರ ನಗರದ ನರಸಿಂಹ ದೇವಸ್ಥಾನದ ಪಕ್ಕದಲ್ಲಿನ ಕಂದಕದಲ್ಲಿ ದೋಣಿ ವಿಹಾರ ಸ್ಥಾಪನೆ ಕುರಿತು ಜನರ ಬಹುದಿನಗಳ ಬೇಡಿಕೆ ಕುರಿತು ನೂತನ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಅಂತ ವಿಜಯಪುರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದ್ದಾರೆ.  

ವಿಜಯಪುರದ ನರಸಿಂಹ ದೇವಸ್ಥಾನದ ಪಕ್ಕದಲ್ಲಿನ ಕಂದಕದಲ್ಲಿ ದೋಣಿ ವಿಹಾರ ಸ್ಥಾಪಿಸುವ ಕುರಿತು ಜಿಲ್ಲಾಧಿಕಾರಿ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಅಂತ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಬದರುದ್ದೀನ್‌ ಸೌದಾಗರ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios