ಮಂಗಗಳನ್ನು ಕೊಂದು ಮರಕ್ಕೆ ನೇಣು ಹಾಕಿದ ದುಷ್ಕರ್ಮಿಗಳು
ಕೋತಿಗಳನ್ನು ಆಂಜನೇಯನ ಸ್ವರೂಪವೆಂದು ಪೂಜಿಸಲಾಗುತ್ತದೆ. ಪ್ರಾಣಿ ಪಕ್ಷಿಗಳಲ್ಲಿ ದೇವರನ್ನು ಕಾಣುವ ಪರಂಪರೆ ನಮ್ಮದು. ಆದರೆ ಇಲ್ಲೊಂದು ಕಡೆ ದುಷ್ಕರ್ಮಿಗಳು ಕೋತಿಗಳನ್ನು ಕೊಂದು ನೇಣು ಹಾಕಿದ್ದಾರೆ. ಬೀದರ್‌ನ ಭಾಲ್ಕಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ಬೀದರ್: ಕೋತಿಗಳನ್ನು ಆಂಜನೇಯನ ಸ್ವರೂಪವೆಂದು ಪೂಜಿಸಲಾಗುತ್ತದೆ. ಪ್ರಾಣಿ ಪಕ್ಷಿಗಳಲ್ಲಿ ದೇವರನ್ನು ಕಾಣುವ ಪರಂಪರೆ ನಮ್ಮದು. ಆದರೆ ಇಲ್ಲೊಂದು ಕಡೆ ದುಷ್ಕರ್ಮಿಗಳು ಕೋತಿಗಳನ್ನು ಕೊಂದು ನೇಣು ಹಾಕಿದ್ದಾರೆ. ಬೀದರ್‌ನ ಭಾಲ್ಕಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಮುರಾಳ ಗ್ರಾಮದ ಹೊರವಲಯದಲ್ಲಿರುವ ಹುಣಸೆ ಮರವೊಂದಕ್ಕೆ ಯಾರೋ ಪಾಪಿಗಳು ನಾಲ್ಕು ಕೋಡಂಗಿಗಳನ್ನು ಹೊಡೆದು ನೇಣು ಹಾಕಿದ ಅಮಾನವೀಯ ಘಟನೆ ನಡೆದಿದೆ. ನಾಲ್ಕು ಮಂಗಗಳಲ್ಲಿ ಎರಡು ಮೃತಪಟ್ಟರೆ, ಮತ್ತೆರಡರನ್ನು ಸ್ಥಳೀಯ ಯುವಕರು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಯಾರೋ ಪಾಪಿಗಳು ನಸುಕಿನ ಜಾವದಲ್ಲಿ ಈ ಕೃತ್ಯವೆಸಗಿದ್ದಾರೆ. ಈ ಪೈಕಿ ಎರಡು ಕೋತಿಗಳು ಬಚಾವಾಗಿದು ಎರಡು ಕೋತಿಗಳು ಬಲಿಯಾಗಿವೆ. ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ದುಷ್ಕೃತ್ಯದಲ್ಲಿ ಭಾಗಿಯಾದವರ ಪತ್ತೆಗೆ ಬಲೆ ಬೀಸಿದ್ದಾರೆ.
ಹೀಗೆ ಮಂಗಗಳನ್ನು ಹೊಡೆದು ಮರಕ್ಕೆ ನೇಣು ಹಾಕಿ ಅಮಾನವೀಯವಾಗಿ ವರ್ತಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಜರಂಗದಳ ಹಾಗೂ ವಿಶ್ವಹಿಂದು ಪರಿಷತ್‌ನವರು ಆಗ್ರಹಿಸಿದ್ದಾರೆ. ನಂತರ ಹತ್ಯೆಯಾದ ಮಂಗಗಳಿಗೆ ಗ್ರಾಮದ ಯುವಕರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.