ಕೋಲಾರ(ಮೇ 13): ಆಂಧ್ರದ ವಿಕೋಟ ಸೋಂಕಿತ ಸಂಪರ್ಕಿಸಿದ್ದ 25 ಮಂದಿಗೆ ಕ್ವಾರೆಂಟೈನ್‌ನಲ್ಲಿದ್ದು ಇವರಿಗೆ ಮನೆ ಊಟ ಬೇಕೆಂದು ಒತ್ತಾಯಿಸಿದರಲ್ಲದೆ ಕ್ವಾರೆಂಟೈನ್‌ ಮಾಡಿರೊ ಹಾಸ್ಟೆಲ್‌ ವಾತಾವರಣ ಸರಿಯಿಲ್ಲ ಮನೆಗೆ ಕಳಿಸಿ ಎಂದು ಗಲಾಟೆ ಮಾಡಿದರು.

ವಿ.ಕೋಟ ಸೋಂಕಿತನು ಕೋಲಾರದ ಎಪಿಎಂಸಿ ಮಾರುಕಟ್ಟೆಯ ಮಾರುಕಟ್ಟೆಗೆ ಆಗಮಿಸಿದ್ದದ್ದರ ಹಿನ್ನೆಲೆಯಲ್ಲಿ ಇವರೆಲ್ಲರನ್ನು ಕ್ವಾರೆಂಟೈನ್‌ ನಲ್ಲಿ ಇಡಲಾಗಿದೆ. ಮಂಡಿ ಮಾಲೀಕ, ರೈಟರ್ಸ್‌, ಕಾರ್ಮಿಕರು, ಹೋಟೆಲ್‌ ಸಿಬ್ಬಂದಿಗೆ ಕ್ವಾರೆಂಟೈನ್‌ನಲ್ಲಿ ಇಡಲಾಗಿದೆ.ನಮ್ಮನ್ನು ಮನೆಯಲ್ಲೆ ಕ್ವಾರೆಂಟೈನ್‌ ಮಾಡಿ ಎಂದು ಆಗ್ರಹ ಪಡಿಸಿದರು.

ಅಟ್ಯಾಚ್‌ ಬಾತ್‌ ರೂಂ, ವೈಫೈಗೆ ಡಿಮ್ಯಾಂಡ್‌; ಕ್ವಾರಂಟೈನಲ್ಲಿರುವವರ ಕಾಟ

ಪಿಜಿ ಹಾಸ್ಟೆಲ್‌ ನಲ್ಲಿರುವ ಇವರೆಲ್ಲರ ಕೊರೊನಾ ವರದಿ ಬುಧವಾರ ಬರುವ ಸಾಧ್ಯತೆ ಇದ್ದು ಇವರ ವರದಿ ಏನಾಗುವುದೋ ಎನ್ನುವ ಭೀತಿ ಜಿಲ್ಲೆಯಲ್ಲಿ ಆವರಿಸಿದೆ. ಜಿಲ್ಲಾಡಳಿತ ಕ್ವಾರೆಂಟೈನ್ ವ್ಯವಸ್ಥೆ ಮಾಡುವುದಕ್ಕೆ ಹೆಣಗಾಡುತ್ತಿರುವಾಗ ಜನ ಉದ್ಧಟತನ ತೋರಿಸಿದ್ದಾರೆ.