ಮಡಿಕೇರಿ: ಮೀನುಗಳನ್ನು ಕೊಳ್ಳಲು ಮುಗಿಬಿದ್ದ ಜನ

ಭಾರೀ ಮಳೆಯಿಂದ ಗಗನಕ್ಕೇರಿದ ಮೀನಿನ ಬೆಲೆ ಕಡಿಮೆಯಾಗಿದ್ದು, ಮಡಿಕೇರಿಯಲ್ಲಿ ಜನ ಮೀನು ಕೊಳ್ಳಲು ಮುಗಿಬಿದ್ದರು. ನಾಪೋಕ್ಲು ವ್ಯಾಪ್ತಿಯಲ್ಲಿ ಶನಿವಾರ ಸಮುದ್ರದ ಮೀನುಗಳ ಮಾರಾಟದಲ್ಲಿ ಇಳಿಕೆಯಾಗಿತ್ತು. ಮೀನುಗಳ ದರ ಕೆ.ಜಿ.ಯೊಂದಕ್ಕೆ 80-100 ರುಪಾಯಿಗಳ ಒಳಗೆ ಇತ್ತು. ಇದರಿಂದಾಗಿ ಹಸಿ ಮೀನು ಕೊಳ್ಳಲು ಗ್ರಾಹಕರು ಮುಗಿಬಿದ್ದರು.

People in Madikeri rushes to buy fish as price decreases

ಮಡಿಕೇರಿ(ಆ.25): ನಾಪೋಕ್ಲುಪಟ್ಟಣ ವ್ಯಾಪ್ತಿಯಲ್ಲಿ ವಿವಿಧ ಬಗೆಯ ಸಮುದ್ರದ ಮೀನುಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಮೀನನ್ನು ಕೊಳ್ಳಲು ಗ್ರಾಹಕರು ಮುಗಿಬಿದ್ದರು.

ಮುಂಗಾರು ಮಳೆಯ ಆರಂಭದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ನಿರ್ಬಂಧ ಹೇರಲಾಗಿದ್ದ ಹಿನ್ನೆಲೆಯಲ್ಲಿ ಸಮುದ್ರ ಮೀನು ಮಾರುಕಟ್ಟೆಗೆ ಬಾರದ ಕಾರಣ ಮೀನುಗಳ ದರ ಕೆ.ಜಿ.ಯೊಂದಕ್ಕೆ 200-250 ತನಕ ತಲುಪಿತ್ತು.

ಮಳೆ ರಜೆ ಸರಿದೂಗಿಸಲು ಶನಿವಾರ ಇಡೀ ದಿನ ತರಗತಿ

ಕೈಗೆಟುಕದ ಮೀನುಗಳ ಬೆಲೆಯಿಂದಾಗಿ ಸಹಜವಾಗಿ ಮಾಂಸಹಾರಿಗಳು ಬೇಸರಗೊಂಡಿದ್ದರು. ಆದರೆ ನಾಪೋಕ್ಲು ವ್ಯಾಪ್ತಿಯಲ್ಲಿ ಶನಿವಾರ ಸಮುದ್ರದ ಮೀನುಗಳ ಮಾರಾಟದಲ್ಲಿ ಇಳಿಕೆಯಾಗಿತ್ತು. ಮೀನುಗಳ ದರ ಕೆ.ಜಿ.ಯೊಂದಕ್ಕೆ 80-100 ರುಪಾಯಿಗಳ ಒಳಗೆ ಇತ್ತು. ಇದರಿಂದಾಗಿ ಹಸಿ ಮೀನು ಕೊಳ್ಳಲು ಗ್ರಾಹಕರು ಮುಗಿಬಿದ್ದರು. ಮೀನುಗಳ ಮಾರಾಟವು ಭರ್ಜರಿಯಾಗಿ ನಡೆಯಿತು.

ದಸರಾ: ವೀರನಹೊಸಳ್ಳಿ ಶಿಬಿರಕ್ಕೆ ದುಬಾರೆ ಗಜಪಡೆ

Latest Videos
Follow Us:
Download App:
  • android
  • ios