ಮಂಗಳೂರು [ಆ.24]: ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ಸುರಿದ ಮಹಾಮಳೆ ಹಾಗೂ ಪ್ರವಾಹದ ಹಿನ್ನೆಲೆಯಲ್ಲಿ ಶಾಲೆಗೆ ನೀಡಲಾಗಿದ್ದ ರಜೆಯ ತರಗತಿ ಅವಧಿಯನ್ನು ಸರಿದೂಗಿಸಲು ಶನಿವಾರ ಇಡೀ ದಿನ ತರಗತಿ ನಡೆಸಲು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. 

ಈ ವಾರ ಮಾತ್ರ ಅಷ್ಟಮಿ ಹಿನ್ನೆಲೆಯಲ್ಲಿ ಪೂರ್ವ ನಿರ್ಧರಿತ ಅರ್ಧದಿನ ತರಗತಿ ನಡೆಯಲಿದೆ.

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಂದಿನ ವಾರದಿಂದ ಬಹುತೇಕ ನವೆಂಬರ್‌ವರೆಗೆ ಇಡೀ ದಿನ ತರಗತಿ ನಡೆಸಲು ಶಾಲಾ ಮುಖ್ಯ ಶಿಕ್ಷಕರಿಗೆ ಎರಡೂ ಜಿಲ್ಲೆಯ ಡಿಡಿಪಿಐಗಳು ಸೂಚನೆ ನೀಡಿದ್ದಾರೆ.