ಅಥಣಿ: ಹುಲಿ ಮರಿ, ಕಾಡುಕೋಣ ಪ್ರತ್ಯಕ್ಷ, ಆತಂಕದಲ್ಲಿ ಜನತೆ

*  ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
*  ಹುಲಿ ಮರಿ ತರಹದ ಪ್ರಾಣಿ ಮತ್ತೊಂದು ಕಾಡುಕೋಣ ಪ್ರತ್ಯಕ್ಷ
*  ಕಾಡುಕೋಣ ನೋಡಲು ತಂಡೋಪ ತಂಡವಾಗಿ ಬಂದ ಜನರು 
 

People in Anxiety For Tiger cub, Wild Buffalo Came to Village at Athani in Belagavi grg

ಅಥಣಿ(ಸೆ.20):  ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಕೆರೆ ರಸ್ತೆಯ ತೋಟದಲ್ಲಿ ಹುಲಿ ಮರಿ ಹಾಗೂ ಮತ್ತೊಂದು ಕಾಡುಕೋಣ ಕಾಣಿಸಿಕೊಂಡಿದೆ ಎಂದು ಅಲ್ಲಿಯ ನಿವಾಸಿಗಳು ಭಯದ ವಾತಾವರಣದಲ್ಲಿ ರಾತ್ರಿಯಿಡೀ ಕಾಲ ಕಳೆದ ಘಟನೆ ನಡೆದಿದೆ.

ಗ್ರಾಮದ ಡಂಬಳಿಯವರ ತೋಟದಲ್ಲಿ ಶನಿವಾರ ಸಂಜೆ ಹುಲಿ ಮರಿ ತರಹದ ಪ್ರಾಣಿ ಮತ್ತೊಂದು ಕಾಡುಕೋಣ ಕಾಣಿಸಿಕೊಂಡಿದೆ. ದೂರದಲ್ಲಿ ನಿಂತು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ನಂತರ ಎಲ್ಲ ಗ್ರಾಮಸ್ಥರ ಗಮನಕ್ಕೆ ಬಂದಾಗ ಇದು ಹುಲಿ ಮರಿ ಹಾಗೂ ಕೇಸ್ಕರ ದಡ್ಡಿ ರಸ್ತೆಯ ಕಿನಾಲ್‌ ಕಾಲುವೆಯಲ್ಲಿ ಕಾಡುಕೋಣ ಕಾನಿಸಿಕೊಂಡಿದೆ ಎಂದು ಗಾಬರಿಗೊಂಡ ರೈತರು ರಾತ್ರಿಯೀಡಿ ನಿದ್ದೆ ಮಾಡದೇ ಕಾಲ ಕಳೆದ್ದಾರೆ.

ಭಾನುವಾರ ಬೆಳಗ್ಗೆ ಅಥಣಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಪ್ರಶಾಂತ ಗಾಣಿಗೇರ ನೇತೃತ್ವದ ತಂಡ ಆಗಮಿಸಿ ಪ್ರಾಣಿ ಹಾಯ್ದು ಹೋದ ಹೆಜ್ಜೆ ಗುರುತಿನ ಸ್ಥಳವನ್ನು ಪರಿಶೀಲಿಸಿದಾಗ ಅದು ಹುಲಿ ಮರಿ ಅಲ್ಲ, ಕಾಡು ಬೆಕ್ಕಿನ ಹೆಜ್ಜೆಯಿದೆ ಅದು ಹುಲಿಯ ಗುರುತು ಅಲ್ಲ, ಹುಲಿ ತರಹ ಅನೇಕ ಪ್ರಾಣಿಗಳು ಇರುತ್ತವೆ. ಯಾರು ಗಾಬರಿ ಪಡಬಾರದು ಎಂದು ಗ್ರಾಮಸ್ಥರಿಗೆ ತಿಳಿಸಿದರು.

ರೈಲು ಡಿಕ್ಕಿಯಾಗಿ ಕಾಡುಕೋಣ ಮೃತ, ಅರಣ್ಯ ಸಿಬ್ಬಂದಿಯಿಂದ ಅಂತ್ಯಸಂಸ್ಕಾರ

ವಿಡಿಯೋದಲ್ಲಿ ಕಾಣಿಸಿಕೊಂಡ ಪ್ರಾಣಿಯೂ ಕಾಡು ಬೆಕ್ಕು ತರಹ ಕಾಣಿಸುತ್ತಿದೆ. ಹೆಜ್ಜೆ ಗುರುತು ಸಹ ಹುಲಿ ಮರಿಯ ಹೆಜ್ಜೆ ಅಲ್ಲ, ಇಷ್ಟು ದೂರದಲ್ಲಿ ಹುಲಿ ಬರಲು ಸಾಧ್ಯವಿಲ್ಲ. ಮತ್ತೇ ಯಾರಿಗಾದರೂ ಕಾಣಿಸಿಕೊಂಡರೆ, ಎಲ್ಲಿಯಾದರೂ ಹಾನಿಯಾದ ಘಟನೆಗಳು ತಿಳಿದು ಬಂದರೇ ಕೂಡಲೇ ಅರಣ್ಯ ಅಧಿಕಾರಿಗಳ ಗಮನಕ್ಕೆ ತರಬೇಕು. ಹುಲಿ ಮರಿಯಿದೆ ಎಂದು ಯಾರು ಗಾಬರಿ ಪಡಬೇಡಿ. ಮತ್ತೊಂದು ಸ್ಥಳದಲ್ಲಿ ಕಾಣಿಸಿಕೊಂಡ ಕಾಡುಕೋಣವನ್ನು ಅರಣ್ಯ ಅಧಿಕಾರಿಗಳ ತಂಡದಿಂದ ಊರ ಆಚೆ ಹೊರಹಾಕಲಾಗುವುದು. ಇದರ ಬಗ್ಗೆ ಯಾರು ಆತಂಕ ಪಡಬಾರದು ಎಂದರು.

ಅಥಣಿ ಅರಣ್ಯ ಅಧಿಕಾರಿಗಳಾದ ಮಂಜುನಾಥ ಪಾಟೀಲ, ಸುರೇಶ ಬಾಗಿ, ಮಹಾಂತೇಶ ಚೌಗಲಾ, ಇಸ್ಮಾಯಿಲ್‌ ಪಠಾಣ, ಶಂಕರಯ್ಯ ಪೂಜಾರಿ, ನಾಗಪ್ಪ ಆಚಕಟ್ಟಿಇದ್ದರು. ಕಾಡುಕೋಣ ನೋಡಲು ಗ್ರಾಮದ ನೂರಾರು ಜನರು ತಂಡೋಪ ತಂಡವಾಗಿ ಬಂದರು.
 

Latest Videos
Follow Us:
Download App:
  • android
  • ios