ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಲಾರಿಯಲ್ಲಿ ಬಂದಿದ್ದ ಹೋಂ ಕ್ವಾರೈಂಟೈನಲ್ಲಿದ್ದ ವ್ಯಕ್ತಿ|  ಏ.28ರ ವರೆಗೆ ಕ್ವಾರೈಂಟೈನಲ್ಲಿರುವಂತೆ ಸೂಚಿಸಿದ್ದ ವೈದ್ಯಕೀಯ ಸಿಬ್ಬಂದಿ| ವೈದ್ಯರ ಸಲಹೆ ಧಿಕ್ಕರಿಸಿ ಮತ್ತೆ 8 ಜನ ರೈತರೊಂದಿಗೆ  ಪಟ್ಟಣಕ್ಕೆ ಬಂದಿದ್ದ|

ಬ್ಯಾಡಗಿ(ಏ.23): ಹೋಂ ಕ್ವಾರೈಂಟೈನಲ್ಲಿದ್ದ ಕೊರೋನಾ ಶಂಕಿತ ಲಾರಿ ಚಾಲಕ ಬುಧವಾರ ಮೆಣಸಿನಕಾಯಿ ಲಾರಿಯೊಂದಿಗೆ ಪಟ್ಟಣಕ್ಕೆ ಆಗಮಿಸಿದ್ದು ಬೆಳ್ಳಂಬೆಳಗ್ಗೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. 

ಏ.16ರಂದು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಲಾರಿಯಲ್ಲಿ ಬಂದಿದ್ದ ಬಳ್ಳಾರಿಯ ಚಾಲಕನ್ನು ಸ್ಕ್ರೀನಿಂಗ್‌ ಮಾಡಿದ ವೈದ್ಯಕೀಯ ಸಿಬ್ಬಂದಿ ಏ.28ರ ವರೆಗೆ ಕ್ವಾರೈಂಟೈನಲ್ಲಿರುವಂತೆ ಸೂಚಿಸಿದ್ದರು. ಆದರೆ ವೈದ್ಯರ ಸಲಹೆ ಧಿಕ್ಕರಿಸಿದ ಲಾರಿ ಚಾಲಕ ಬುಧವಾರ ಮತ್ತೆ 8 ಜನ ರೈತರೊಂದಿಗೆ ಬುಧವಾರ ಪಟ್ಟಣಕ್ಕೆ ಬಂದಿದ್ದ. 

ಕೊರೋನಾ ಆತಂಕ: KSRP ಪೇದೆಗೆ ಜ್ವರ, ಇಡೀ ತುಕಡಿ ಕ್ವಾರಂಟೈನ್‌

ಈತನ ಗುರುತು ಹಿಡಿದ ವೈದ್ಯಕೀಯ ಸಿಬ್ಬಂದಿ ತೀವ್ರ ತರಾಟೆಗೆ ತೆಗೆದುಕೊಂಡು ಲಾರಿ ಚಾಲಕ ಮತ್ತು 8 ಜನರ ತಪಾಸಣೆ ನಡೆಸಿ, ಬಳ್ಳಾರಿಗೆ ವಾಪಸ್‌ ಕಳುಹಿಸಿದ್ದಾರೆ.