Asianet Suvarna News Asianet Suvarna News

ಲಕ್ಷಣ ಇಲ್ಲದಿದ್ರೂ ಕೊರೋನಾ ಪಾಸಿಟಿವ್‌: ಬೆಚ್ಚಿ​ಬಿದ್ದ ನಾಗ​ರಿ​ಕರು!

ರೋಗ ಲಕ್ಷಣಗಳು ಕಾಣದಿ​ದ್ದರೂ ಕೊರೋನಾ ಸೋಂಕು ಹರಡಿರುವುದು ಆತಂಕಕ್ಕೆ ಕಾರಣ| ಬಾಗಲಕೋಟೆಯ ನಾಲ್ಕು ಸೋಂಕಿತರಲ್ಲಿ ಅದರಲ್ಲೂ ಮೃತ ಸೋಂಕಿತನ ವೃದ್ಧನ ಪತ್ನಿ ಮತ್ತು ಸಹೋದರನಿಗೆ ಕೊರೋನಾ ಸೋಂಕಿದ್ದರೂ ಲಕ್ಷಣಗಳು ಕಾಣಸಿಗುತ್ತಿಲ್ಲ| ಜನತೆ ಮನೆಯಿಂದ ಹೊರಬರದಂತೆ ಎಚ್ಚರಿಕೆ ವಹಿಸುವುದು ಅಗತ್ಯ|
 

People in Anxiety for Coronavirus in Bagalkot district
Author
Bengaluru, First Published Apr 9, 2020, 3:24 PM IST

ಈಶ್ವರ ಶೆಟ್ಟರ 

ಬಾಗಲಕೋಟೆ(ಏ.09): ಕೊರೋನಾ ವೈರಸ್‌ಗೆ ಸಂಬಂಧಿಸಿದ ಯಾವ ಲಕ್ಷಣಗಳು ಕಾಣದಿದ್ದರೂ ಪರೀಕ್ಷೆಗೆ ಕಳಿಸಿದ ಮಾದರಿಗಳಲ್ಲಿ ಕೊರೋನಾ ವೈರಸ್‌ ಸೋಂಕು ತಗುಲಿರುವ ವರದಿ ಬಂದಿರುವುದು ಬಾಗಲಕೋಟೆ ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಜೊತೆಗೆ ಕೊರೋನಾ ಸೋಂಕು ಲಕ್ಷಣಗಳಿಲ್ಲದ್ದವರಲ್ಲಿ ಪಾ​ಸಿ​ಟಿವ್‌ ಬಂದರೆ ಅಂತಹವರನ್ನು ಗುರುತಿಸುವುದಾದರೂ ಹೇಗೆ ಎಂಬ ಪ್ರಶ್ನೆ ಆರಂಭಗೊಂಡಿದೆ.

ನ್ಯೂಮೋನಿಯಾದಿಂದ ಬಳಲುತ್ತಿದ್ದ ಹಾಗೂ ಇತರ ರೋಗಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧನಿಗೆ ಸಹೋದರನಿಂದ ಸೋಂಕು ತಗಲಿರುವ ಸಾಧ್ಯತೆ ಒಪ್ಪಿಕೊಂಡಿರುವ ಜನತೆ ಇದೀಗ .ಯಾವುದೇ ರೋಗ ಲಕ್ಷಣಗಳು ಕಾಣದಿ​ದ್ದರೂ ಕೊರೋನಾ ಸೋಂಕು ಹರಡಿರುವುದು ಸಹಜವಾಗಿ ಆತಂಕಕ್ಕೆ ಕಾರಣವಾಗಿದೆ

ಕೊರೋನಾ ಲಕ್ಷಣಗಳಿಲ್ಲ:

ಜಿಲ್ಲೆಯಲ್ಲಿನ ಐದು ಕೊರೋನಾ ಸೋಂಕಿತರಲ್ಲಿ ವೃದ್ಧ ಮೃತಪಟ್ಟ ನಂತರ ಕಾಣಿಸಿಕೊಂಡ ನಾಲ್ವರಲ್ಲಿನ ಕೊರೋನಾ ಸೋಂಕು ಪರೀಕ್ಷಾ ವರದಿ ಬಂದ ನಂತರ ವೈದ್ಯಕೀಯ ವಲಯ ಸೇರಿದಂತೆ ತಜ್ಞ ವಲಯದಲ್ಲಿ ಚರ್ಚೆ ಆರಂಭಗೊಂಡಿದ್ದು ಈ ನಾಲ್ವರಲ್ಲಿ ರೋಗ ಲಕ್ಷಣಗಳು ಅಷ್ಟಾಗಿ ಕಾಣದೆ ಇರುವುದನ್ನು ಗಮನಿಸಿರುವ ವೈದ್ಯರು ಇಂತಹ ಪ್ರಕರಣಗಳ ಕುರಿತು ಸೂಕ್ಷ್ಮವಾಗಿ ಯೋಚಿಸಲು ಆರಂಭಿಸಿದ್ದಾರೆ.

ಲಾಕ್‌ಡೌನ್‌: '2 ತಿಂಗಳ ರೇಷನ್ ವಿತರಣೆ, ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆವರೆಗೆ ಪಡೆಯಲು ಅವಕಾಶ'

ಕೊರೋನಾ ವೈರಸ್‌ನ ಪ್ರಾಥಮಿಕ ಹಂತದಲ್ಲಿನ ರೋಗ ಲಕ್ಷಣಗಳಾದ ಕೆಮ್ಮು, ಕಫ, ಜ್ವರ ಕಾಣುವುದು ಸಾಮಾನ್ಯವೆಂದು ಭಾವಿಸಲಾಗಿತ್ತು. ಆದರೆ ಸದ್ಯ ಬಾಗಲಕೋಟೆಯ ನಾಲ್ಕು ಸೋಂಕಿತರಲ್ಲಿ ಅದರಲ್ಲೂ ಮೃತ ಸೋಂಕಿತನ ವೃದ್ಧನ ಪತ್ನಿ ಮತ್ತು ಸಹೋದರನಿಗೆ ಕೊರೋನಾ ಸೋಂಕಿದ್ದರೂ ಲಕ್ಷಣಗಳು ಕಾಣಸಿಗುತ್ತಿಲ್ಲ. ಇನ್ನೂ ಮುಧೋಳದ ಮದರಸಾದಲ್ಲಿ ಪತ್ತೆಯಾಗಿದ್ದ ಗುಜರಾತನಿಂದ ಬಂದ ವ್ಯಕ್ತಿಗೂ ರೋಗ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಸೋಂಕಿತರನ್ನು ಹಾಗೂ ಸೋಂಕಿತರ ಮೂಲವನ್ನು ಪತ್ತೆ ಹಚ್ಚುವುದೆ ಜಿಲ್ಲಾಡಳಿತಕ್ಕೆ ಬಹುದೊಡ್ಡ ಸವಾಲಾಗಿದೆ.

ಜಾಗತಿಕವಾಗಿ ಹರಡಿಕೊಂಡಿರುವ ಕೊರೋನಾ ವೈರಸ್‌ನ ಸೋಂಕು ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದೇ ಸವಾಲಾಗಿರುವ ಈ ಸಂದರ್ಭದಲ್ಲಿ ರೋಗ ಲಕ್ಷಣಗಳು ಇರದೆ ಸೋಂಕಿತರಾಗುತ್ತಿರುವವರ ಆರೋಗ್ಯ ತಪಾಸಣೆ ಹಾಗೂ ಇನ್ನಿತರರನ್ನು ಕಂಡು ಹಿಡಿಯುವ ಬಗೆ ಹೇಗೆ ಎಂಬುದು ಆರೋಗ್ಯ ಇಲಾಖೆಗೆ ಸವಾಲಾಗಿದೆ.

ಒಟ್ಟಾರೆ ಬಾಗಲಕೋಟೆ ಜಿಲ್ಲೆಯನ್ನು ಬೆಂಬಿಡದಂತೆ ಕಾಡುತ್ತಿರುವ ಕೊರೋನಾ ಎಂಬ ಮಹಾಮಾರಿ ಬರಲಿರುವ ದಿನಗಳಲ್ಲಿ ಜಿಲ್ಲೆಯನ್ನು ರೋಗ ಮುಕ್ತವನ್ನಾಗಿ ಮಾಡಲು ಮತ್ತಷ್ಟುಸಿದ್ಧತೆ​ಗ​ಳಂತೂ ಅಗತ್ಯವಾಗಿದೆ.

ರೋಗ ಲಕ್ಷಣಗಳಿಲ್ಲದೆ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮುನ್ನಚ್ಚರಿಕೆ ವಹಿಸುವುದು, ಸ್ವಚ್ಛತೆ ಕಾಪಾಡಿಕೊಳ್ಳುವ ಜೊತೆಗೆ ಜನತೆ ಮನೆಯಿಂದ ಹೊರಬರದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
 

Follow Us:
Download App:
  • android
  • ios