ಕಾಂಗ್ರೆಸ್ ಗ್ಯಾರಂಟಿಗಳಿದ್ರೂ ಕೂಲಿಗಾಗಿ ಕೇರಳಕ್ಕೆ ಆದಿವಾಸಿಗಳ ಗುಳೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸುತ್ತಿದೆ. ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿ ಜಾರಿ ಮಾಡಿದೆ. ಆದರೂ ತಾಲೂಕಿನ ಜನರು ಗುಳೆ ಹೋಗುತ್ತಿದ್ದಾರೆ. ರೈತರು, ಬಡವರು ಕೂಲಿ ಕಾರ್ಮಿಕರು ಹಾಗೂ ಮಹಿಳೆಯರಿಗೆ ಸಣ್ಣ ಪ್ರಮಾಣದಲ್ಲಿ ನೆರವು ನೀಡುವಲ್ಲಿ ಸರ್ಕಾರದ ಈ ಗ್ಯಾರಂಟಿ ಯೋಜನೆಗಳು ಸ್ವಲ್ಪ ಪ್ರಮಾಣದಲ್ಲಿ ಆಸರೆಯಾದಂತೆ ಕಂಡು ಬಂದರೂ ಜನರು ಗುಳೆ ಹೋಗುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ.
ರಂಗೂಪುರ ಶಿವಕುಮಾರ್
ಗುಂಡ್ಲುಪೇಟೆ(ಡಿ.16): ರಾಜ್ಯದಲ್ಲಿ ಸದ್ಯ ಬರ ಎದುರಾಗಿದೆ. ರಾಜ್ಯ ಸರ್ಕಾರ ಈಗಾಗಲೇ ನಾಲ್ಕು ಗ್ಯಾರಂಟಿಯನ್ನೂ ರಾಜ್ಯದ ಜನತೆಗೆ ಕೊಟ್ಟಿದೆ. ಜತೆಗೆ ಉದ್ಯೋಗ ಖಾತ್ರಿ ಯೋಜನೆ ಇದ್ದರೂ ತಾಲೂಕಿನ ಕಾಡಂಚಿನ ಆದಿವಾಸಿಗಳು ಸೇರಿದಂತೆ, ಗುಂಡ್ಲುಪೇಟೆ ಸುತ್ತಮುತ್ತಲಿನ ಹಳ್ಳಿಯ ಜನರು ನೆರೆಯ ಕೇರಳ ರಾಜ್ಯಕ್ಕೆ ಕೂಲಿಗಾಗಿ ಗುಳೆ ಹೊರಟಿದ್ದಾರೆ. ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ಕೇರಳ ಬಸ್‌ಗಾಗಿ ಕಾದು ಕುಳಿತವರಲ್ಲಿ ಮಕ್ಕಳು, ವೃದ್ಧರು ಜೊತೆಗೆ ಪುರುಷರ ಜೊತೆ ಹೆಂಗಸರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದು ವಲಸೆ ಕೂಲಿ ಕಾರ್ಮಿಕರ ಬದುಕಿನ ಚಿತ್ರಣ ದೃಗ್ಗೋಚರವಾದಂತಿತ್ತು.
‘ಈಗಾಗಲೇ ಜಿಲ್ಲೆಯ ಸಾವಿರಾರು ಮಂದಿ ಕೂಲಿ ಅರಸಿ ಕೇರಳಕ್ಕೆ ಗುಳೆ ಹೋಗಿದ್ದಾರೆ. ಅಲ್ಲದೆ, ನಿತ್ಯವೂ ಸುಮಾರು 300-400 ಮಂದಿಗೂ ಹೆಚ್ಚು ಜನ ಕೂಲಿಗಾಗಿ ಹೀಗೆ ಗುಳೆ ಹೋಗುತ್ತಿದ್ದಾರೆ’ ಎಂದು ಕೆಲ ಗ್ರಾಮಸ್ಥರು ಹೇಳುತ್ತಾರೆ.
ಚಾಮರಾಜನಗರ: ಮಾಡಹಳ್ಳಿ ಗುಡ್ಡದಲ್ಲಿ ಪಟ್ಟಾ ಜಮೀನು ಹೆಸರಲ್ಲಿ ಕಲ್ಲು ಗಣಿಗಾರಿಕೆ?
ಗ್ಯಾರಂಟಿಗೆ ಕಿಮ್ಮತ್ತಿಲ್ಲ :
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸುತ್ತಿದೆ. ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿ ಜಾರಿ ಮಾಡಿದೆ. ಆದರೂ ತಾಲೂಕಿನ ಜನರು ಗುಳೆ ಹೋಗುತ್ತಿದ್ದಾರೆ. ರೈತರು, ಬಡವರು ಕೂಲಿ ಕಾರ್ಮಿಕರು ಹಾಗೂ ಮಹಿಳೆಯರಿಗೆ ಸಣ್ಣ ಪ್ರಮಾಣದಲ್ಲಿ ನೆರವು ನೀಡುವಲ್ಲಿ ಸರ್ಕಾರದ ಈ ಗ್ಯಾರಂಟಿ ಯೋಜನೆಗಳು ಸ್ವಲ್ಪ ಪ್ರಮಾಣದಲ್ಲಿ ಆಸರೆಯಾದಂತೆ ಕಂಡು ಬಂದರೂ ಜನರು ಗುಳೆ ಹೋಗುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ.
ಶಾಲೆಯಿಂದ ಹೊರಗುಳಿವ ಮಕ್ಕಳು
ಕೇರಳಕ್ಕೆ ಗುಳೆ ಹೊರಟ ತಂದೆ, ತಾಯಿಯ ಜೊತೆ ಮಕ್ಕಳು ತೆರಳುತ್ತಿರುವುದನ್ನು ಕಂಡರೆ ಶಾಲೆಗೆ ತೆರಳದೆ ಮಕ್ಕಳ ಶಾಲೆಯಿಂದ ಹೊರಗುಳಿಯುವುದು ಬಹುತೇಕ ಖಚಿತ. ತಾಲೂಕಿನ ಆದಿವಾಸಿ ಜನರ ಮಕ್ಕಳು ಶಾಲೆಯಿಂದ ಹೊರಗುಳಿದರೆ ಆ ಮಕ್ಕಳು ಶಿಕ್ಷಣ ಸಿಗಲ್ಲ. ಇನ್ನೇಲ್ಲಿ ಆದಿವಾಸಿಗಳು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಂದೆ ಬರಲು ಸಾಧ್ಯವಿಲ್ಲ ಎಂದು ಜಿಲ್ಲಾ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಬೇಸರ ವ್ಯಕ್ತಪಡಿಸಿದ್ದಾರೆ.
ಇಲ್ಲಿ 300 ರು. ಕೂಲಿ, ಅಲ್ಲಿ 700 ರು.
ಉದ್ಯೋಗ ಖಾತ್ರಿಯಲ್ಲಿ ದಿನಕ್ಕೆ 306 ರು. ಕೂಲಿ ಸಿಗುತ್ತೆ, ಕೇರಳದಲ್ಲಿ ದಿನಕ್ಕೆ ಕನಿಷ್ಠ 700ರಿಂದ 1000 ರು.ತನಕ ಕೂಲಿ ಸಿಗುತ್ತೆ, ಅಲ್ಲದೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟವನ್ನೂ ಕೊಡುತ್ತಾರೆ. ರಾತ್ರಿ ಊಟ ಮಾತ್ರ ನಮ್ಮ ಖರ್ಚು. ಇದರಿಂದ ಅಧಿಕ ಕೂಲಿಯೂ ಲಭಿಸಿ, ಉಳಿತಾಯವೂ ಆಗುತ್ತದೆ. ಹಾಗಾಗಿ ಕೇರಳಕ್ಕೆ ಹೊರಟಿದ್ದೇವೆ ಎಂದು ಮಾದಶೆಟ್ಟಿ, ಕೂತನೂರು, ಗುಳೆ ಹೋದ ವ್ಯಕ್ತಿ ತಿಳಿಸಿದ್ದಾರೆ.
ಚಾಮರಾಜನಗರ: ರೈತ ಸಂಪರ್ಕ ಕೇಂದ್ರದಲ್ಲಿ ಟಾರ್ಪಾಲ್ ಗೋಲ್‌ಮಾಲ್, ರೈತರಿಂದ ಹೆಚ್ಚುವರಿ ಹಣ ಪಡೆದು ವಂಚನೆ
ಅಗತ್ಯವಿದ್ರೆ ನಾನೇ ತೆರಳುವೆ
ಆದಿವಾಸಿಗಳ ಮಕ್ಕಳಿರಲಿ ಅಥವಾ ಬೇರೆ ಮಕ್ಕಳೇ ಶಾಲೆಗೆ ಗೈರಾಗಿದ್ದರೆ, ತಂದೆ, ತಾಯಿಯೊಂದಿಗೆ ಗುಳೆ ಹೋಗಿದ್ದರೆ ಆಯಾಯ ಶಾಲೆಯ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದ ಬಳಿಕ ಕೇರಳಕ್ಕೆ ಮಕ್ಕಳು ಹೋಗಿದ್ದರೆ ಅಲ್ಲಿನ ಜಿಲ್ಲಾಧಿಕಾರಿ ಹಾಗೂ ಕಾರ್ಮಿಕ ಅಧಿಕಾರಿಗೆ ಪತ್ರ ಬರೆಯಲಾಗುವುದು. ಅಗತ್ಯ ಬಿದ್ದರೆ ನಾನೇ ಅಲ್ಲಿಗೆ ಭೇಟಿ ನೀಡಿ ಮಕ್ಕಳನ್ನು ವಾಪಸ್ ಕರೆತರುವ ಯೋಚನೆಯಿದೆ ಎಂದು ಗುಂಡ್ಲುಪೇಟೆ ಬಿಇಒ ರಾಜಶೇಖರ್ ಹೇಳಿದ್ದಾರೆ.
ಮಾಹಿತಿ ಕಲೆ ಹಾಕಿ ಕ್ರಮ
ಆದಿವಾಸಿಗಳ ಮಕ್ಕಳೋ ಅಥವಾ ಗ್ರಾಮೀಣ ಮಕ್ಕಳೋ ತಂದೆ, ತಾಯಿಯೊಂದಿಗೆ ಗುಳೆ ಹೋಗಿರುವ ಬಗ್ಗೆ ಗ್ರಾಪಂ ಪಿಡಿಒಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿ ದ್ದೇನೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡಲಾಗುತ್ತಿದೆ. ಆದರೂ ಜನರು ಕೇರಳಕ್ಕೆ ಹೋಗುತ್ತಾರೆ ಎನ್ನುವ ಬಗ್ಗೆಯೂ ಮಾಹಿತಿ ಕಲೆ ಹಾಕಿ ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆದಿದೆ ಎಂದು ತಾಪಂ ಇಒ ರಾಮಲಿಂಗಯ್ಯ ತಿಳಿಸಿದ್ದಾರೆ.