ಮಂಗಳೂರು(ಮೇ 21): ಮಂಬೈ ಕೊರೋನಾ ಕಾಟ ಮಂಡ್ಯ ಮಾತ್ರವಲ್ಲದೆ ಈಗ ಮೈಸೂರಿಗೂ ವ್ಯಾಪಿಸಿದೆ. 3500ಕ್ಕೂ ಹೆಚ್ಚು ವಲಸಿಗರು ಮೈಸೂರಿಗೆ ಬರಲಿದ್ದು ಆತಂಕ ಸೃಷ್ಟಿಯಾಗಿದೆ.

ಮಂಡ್ಯಕ್ಕೆ ಮಾತ್ರವಲ್ಲ, ಮೈಸೂರಿಗೂ ಮುಂಬೈ ಕೊರೋನಾ ಬಾಂಬ್ ಭೀತಿ ಎದುರಾಗಿದ್ದು, 3,500ಕ್ಕೂ ಹೆಚ್ಚು ವಲಸಿಗರು ಮಹಾರಾಷ್ಟ್ರದಿಂದ ಮೈಸೂರಿಗೆ ಬರಲಿದ್ದಾರೆ. ಕೂಲಿ, ವಿವಿಧ ಕೆಲಸಗಳಿಗಾಗಿ ಮುಂಬೈನಲ್ಲಿ ನೆಲೆಸಿರುವ ಮೈಸೂರಿಗರು ಇದೀಗ ಮೈಸೂರಿಗೆ ಮರಳಲಿದ್ದು ಇನ್ನಚ್ಟು ಆತಂಕ ಸೃಷ್ಟಿಯಾಗಿದೆ.

ಇವು ಜಿಗಿಯುವ ಕಪ್ಪೆಗಳಲ್ಲ, ತೇಲೋ ಕಪ್ಪೆಗಳು..! ಇಲ್ಲಿವೆ ಫೋಟೋಸ್

ಈಗಾಗಲೇ 300ಕ್ಕೂ ಹೆಚ್ಚು ವಲಸಿಗರು ಆಗಮಿಸಿದ್ದು, ಇನ್ನೂ ಸಾವಿರಾರು ಸಂಖ್ಯೆಯಲ್ಲಿ ಮುಂಬೈನಿಂದ ವಲಸಿಗರು ಬರಲಿದ್ದಾರೆ. ಮುಂಬೈನಿಂದ ಬಂದರೆ ಪಾಸಿಟಿವ್ ಕಟ್ಟಿಟ್ಟಬುತ್ತಿ ಎಂಬ ಭಯ ಜನರಲ್ಲಿ ಮೂಡಿದೆ.

ಮಂಡ್ಯ ಮಾದರಿಯಲ್ಲೇ ಕೊರೊನಾ ಕೇಸ್‌ಗಳು ಏರಿಕೆ ಭಯ ಆವರಿಸಿದ್ದು, ದೇಶದ ವಿವಿಧ ರಾಜ್ಯಗಳಿಂದ 10 ಸಾವಿರಕ್ಕೂ ಅಧಿಕ ಮಂದಿ ಬರಲಿದ್ದಾರೆ. ಜಿಲ್ಲಾಡಳಿತಕ್ಕೆ ಈಗ ಹೊರ ರಾಜ್ಯದಿಂದ ಬರುವ ಜನರ ನಿಯಂತ್ರಣದ ತಲೆಬಿಸಿಯಾಗಿದೆ.