Karnataka Assembly Election : ಜನಮೆಚ್ಚುಗೆ ಪಡೆದ ವ್ಯಕ್ತಿಗೆ ವಿಧಾನಸಭಾ ಟಿಕೆಟ್
- ಜನಮೆಚ್ಚುಗೆ ಪಡೆದವರಿಗೆ ಬಿಜೆಪಿ ಟಿಕೆಟ್: ಬಿಎಸ್‌ವೈ
- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆಯುವುದು ನಮ್ಮ ಉದ್ದೇಶ
ಶಿವಮೊಗ್ಗ (ಡಿ.20): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election ) ಪೂರ್ಣ ಬಹುಮತ ಪಡೆಯುವುದು ನಮ್ಮ ಉದ್ದೇಶವಾಗಿದೆ. ಹಾಗಾಗಿ ಜನರ ಮೆಚ್ಚುಗೆ ಪಡೆದವರಿಗೆ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಹೇಳಿದರು. ನಗರದ ಪೆಸಿಟ್ ಕಾಲೇಜಿನಲ್ಲಿರುವ ಪ್ರೇರಣಾ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಬಿಜೆಪಿಯಿಂದ ಆಯೋಜಿಸಿದ್ದ ವಿಧಾನ ಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ಡಿ.ಎಸ್.ಅರುಣ್ (DS Arun) ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಮನೆ ಸೇರುತ್ತೇನೆ ಎಂದುಕೊಂಡಿದ್ದರು. ಆದರೆ, ವಯಸ್ಸು 79 ಆದರೂ ಪಕ್ಷ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Election) ಪೂರ್ಣ ಬಹುಮತ ಪಡೆಯುವುದಕ್ಕಾಗಿ ರಾಜ್ಯ ಪ್ರವಾಸ ಮಾಡುತ್ತೇನೆ. ಪ್ರತಿಯೊಂದು ಜಿಲ್ಲೆಯಲ್ಲಿ ಒಂದೊಂದು ದಿನ ವಾಸ್ತವ್ಯ ಹೂಡಿ ಸ್ಥಳೀಯ ಮುಖಂಡರೊಂದಿಗ ಸಭೆ ಮಾಡಲಾಗುವುದು ಎಂದರು.
ವಿಧಾನ ಮಂಡಲದಲ್ಲಿ ಪ್ರತಿ ಪಕ್ಷದವರು ಆಡಳಿತರೂಢ ಪಕ್ಷದ ಮೇಲೆ ನಿರಂತರ ಆರೋಪಗಳನ್ನು ಮಾಡುತ್ತಲೇ ಇದೆ. ಅದೆಲ್ಲವನ್ನೂ ಮೌನವಾಗಿದ್ದು ಕೇಳುತ್ತಿದ್ದೇನೆ. ಅವರಿಗೆ ಚುನಾವಣೆಯಲ್ಲಿ (Election) ಉತ್ತರ ನೀಡಲಾಗುವುದು. ಜೊತೆಗೆ, ಹಣ, ಹೆಂಡ, ಜಾತಿ ಬಲದಿಂದ ಗೆಲ್ಲಲಾಗದು ಎನ್ನುವುದು ಪ್ರತಿಪಕ್ಷದರಿಗೆ ಮನವರಿಕೆಯಾಗಿದೆ ಎಂದರು.
ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೂ ಪೂರ್ಣ ಬಹುಮತವಿಲ್ಲದ ಕಾರಣ ಸಮಸ್ಯೆಗಳು ಎದುರಿಸಿದ್ದೇವೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಮತದಾರರು ಪೂರ್ಣ ಬಹುಮತ ನೀಡಬೇಕು ಎಂದರು.
ಸಂಸದ ಬಿ.ವೈ. ರಾಘವೇಂದ್ರ (BY Raghavendra) ಮಾತನಾಡಿ, ನಮ್ಮ ಸಂಘಟನೆ ಬಲದಿಂದ ನಾವು ಪ್ರತಿ ಚುನಾವಣೆಯಲ್ಲಿ (Election) ಉತ್ತಮ ಪ್ರಯತ್ನವನ್ನು ಮಾಡಿ ಹೆಚ್ಚಿನ ಗೆಲುವುವನ್ನು ಪಡೆದಿದ್ದೇವೆ. ಈ ಕ್ಷೇತ್ರದ ಜನರ ಆಶೀರ್ವಾದದಿಂದ ಈ ಬಾರಿಯ ಅಧಿವೇಶನದಲ್ಲಿ ರೈತರ ಸಮಸ್ಯೆಯನ್ನು ಸಂಸತ್‌ನಲ್ಲಿ ಗಮನ ತರುವ ಪ್ರಯತ್ನ ಮಾಡಿದ್ದೇನೆ. ಕಸ್ತೂರಿ ರಂಗನ್ ವರದಿಯ ವಿಚಾರವಾಗಿ ನಾವು ಕೇಂದ್ರದ ಮಂತ್ರಿಗಳಿಗೆ ಗಮನಕ್ಕೆ ತಂದು ಯಾವುದೇ ಕಾರಣಕ್ಕೂ ಇದನ್ನು ಜಾರಿಗೆ ತರಬಾರದು ಎಂದು ಕೇಳಿಕೊಂಡಿದ್ದೇವೆ ಎಂದರು.
ವಿಧಾನ ಪರಿಷತ್ (MLC) ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ರಾತ್ರೋ ರಾತ್ರಿ ಹುಟ್ಟಿಕೊಂಡ ಅಭಿಮಾನಿ ಬಳಗದ ಬಗ್ಗೆ ಡಿ.ಎಸ್.ಅರುಣ್ ಎಚ್ಚರ ವಹಿಸಿಕೊಂಡಿರಬೇಕು. ದಿಕ್ಕು ತಪ್ಪಿಸಬಹುದಾದ ಅಭಿಮಾನಿ ಬಳಗದಿಂದ ದೂರವಿದ್ದು ತಂದೆಯ ಹೆಸರಿಗೆ ಹೆಚ್ಚಿನ ಗೌರವ ತಂದುಕೊಡುವಂತೆ ನಡೆದುಕೊಳ್ಳಿ. ಅಭಿಮಾನಿ ಬಳಗ ಆಲದ ಮರಕ್ಕೆ ಹತ್ತಿಕೊಳ್ಳುವ ಕೆಟ್ಟು ಬಳ್ಳಿಗಳ ಹಾಗೆ. ಮರ ಬಿದ್ದರು ಅವು ಬದುಕಿರುತ್ತವೆ. ಇಂತಹ ಕೆಟ್ಟ ಬಳ್ಳಿಯಿಂದ ದೂರ ಇರುವಂತೆ ಹೇಳಿದರು.
ಶಾಸಕರಾದ ಕುಮಾರ್ ಬಂಗಾರಪ್ಪ, ಅಶೋಕ್ ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಸ್ಪೀಕರ್ ಡಿ.ಎಚ್. ಶಂಕರಮೂರ್ತಿ, ಶಾಸಕ ರೇಣುಕಾಚಾರ್ಯ, ವಿಧಾನ ಪರಿಷತ್ ಸದಸ್ಯೆ ಭಾರತಿಶೆಟ್ಟಿ, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ಪ್ರಮುಖರಾದ ಶಾಂತರಾಜ್ ಪಾಟೀಲ…, ಆರ್.ಕೆ.ಸಿದ್ದರಾಮಣ್ಣ, ಪುರುಷೋತ್ತಮ, ಎನ್.ಎಸ್.ಹೆಗಡೆ, ಎ.ಎನ್.ನಟರಾಜ್, ಚನ್ನವೀರಪ್ಪ, ಮಲ್ಲಿಕಾರ್ಜುನ್ ಸೇರಿದಂತೆ ಮತ್ತಿತರರು ಇದ್ದರು.
- ಜನಮೆಚ್ಚುಗೆ ಪಡೆದವರಿಗೆ ಬಿಜೆಪಿ ಟಿಕೆಟ್: ಬಿಎಸ್‌ವೈ
- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆಯುವುದು ನಮ್ಮ ಉದ್ದೇಶ
- ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಮನೆ ಸೇರುತ್ತೇನೆ ಎಂದುಕೊಂಡಿದ್ದರು
- ವಯಸ್ಸು 79 ಆದರೂ ಪಕ್ಷ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದೇನೆ.
- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆಯುವುದಕ್ಕಾಗಿ ರಾಜ್ಯ ಪ್ರವಾಸ ಮಾಡುತ್ತೇನೆ.