Asianet Suvarna News Asianet Suvarna News

ಚಿತ್ರದುರ್ಗದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಪರದಾಟ: ಡೋಂಟ್ ಕೇರ್ ಎನ್ನುತ್ತಿರುವ ಅಧಿಕಾರಿಗಳು..!

ಚಿತ್ರದುರ್ಗ ಜಿಲ್ಲೆ ಹಿರಿಯೂರು‌ ಪಟ್ಟಣದ ಕೂದಲೆಳೆ ಅಂತರದಲ್ಲಿರುವ ಬಬ್ಬರೂ ಗ್ರಾಮದ ಬಳಿ. ಕಳೆದ ಐದಾರು ತಿಂಗಳು ಗಳಿಂದ ಗ್ರಾಮದಲ್ಲಿ ಇರುವ ಮೂರು ಶುದ್ದ ನೀರಿನ ಘಟಕಗಳು ಕೆಟ್ಟು ಹೋಗಿದ್ರು ಯಾವುದೇ ಅಧಿಕಾರಿಗಳು ತಲೆ ಕೆಡಿಸಿಕೊಳ್ತಿಲ್ಲ. ಈ ಕುರಿತು ಅನೇಕ ಬಾರಿ ಇಓ, ಸಿಇಓ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. 

People Faces Pure Drinking Water Problem in Chitradurga grg
Author
First Published Oct 24, 2023, 2:57 PM IST | Last Updated Oct 24, 2023, 2:57 PM IST

ವರದಿ: ಕಿರಣ್. ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಅ.24): ಒಂದತ್ತಿನ ಊಟ ಇಲ್ಲದಿದ್ರು ಪರವಾಗಿಲ್ಲ ಕುಡಿಯಲು ಶುದ್ದ ನೀರು ಸಿಕ್ರೆ ಸಾಕಪ್ಪ ಅನ್ನೋ ಮಾತೊಂದಿದೆ. ಆದ್ರೆ ಈ ಗ್ರಾಮದ ಜನರು ಕುಡಿಯುವ ನೀರಿಗಾಗಿ‌ ಕಿಲೋಮೀಟರ್ ಗಟ್ಟಲೇ ಹೋಗಿ ನೀರು ತರುವ ದುಸ್ಥಿತಿ ನಿರ್ಮಾಣವಾಗಿದೆ. ನೀರಿನ ಘಟಕಗಳು ಕೆಟ್ಟು ನಿಂತು ತಿಂಗಳುಗಳೇ ಕಳೆದು ಹೋಗಿದ್ರು ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಬಗೆಹರಿದಿಲ್ಲ ಕುಡಿಯುವ ನೀರಿನ ಸಮಸ್ಯೆ. ಈ ಕುರಿತು ಒಂದು ವರದಿ ಇಲ್ಲಿದೆ.....,

ಹೀಗೆ ಒಂದೇ ಊರಿನಲ್ಲಿ ಕೆಟ್ಟು ನಿಂತು ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿರುವ ಮೂರು ಶುದ್ದ ನೀರಿನ ಘಟಕಗಳು. ಕುಡಿಯುವ ಶುದ್ದ ನೀರು ಕೊಡಿ ಎಂದು ಆಕ್ರೋಶ ಹೊರ ಹಾಕ್ತಿರೋ ಗ್ರಾಮಸ್ಥರು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ಜಿಲ್ಲೆ ಹಿರಿಯೂರು‌ ಪಟ್ಟಣದ ಕೂದಲೆಳೆ ಅಂತರದಲ್ಲಿರುವ ಬಬ್ಬರೂ ಗ್ರಾಮದ ಬಳಿ. ಕಳೆದ ಐದಾರು ತಿಂಗಳು ಗಳಿಂದ ಗ್ರಾಮದಲ್ಲಿ ಇರುವ ಮೂರು ಶುದ್ದ ನೀರಿನ ಘಟಕಗಳು ಕೆಟ್ಟು ಹೋಗಿದ್ರು ಯಾವುದೇ ಅಧಿಕಾರಿಗಳು ತಲೆ ಕೆಡಿಸಿಕೊಳ್ತಿಲ್ಲ. ಈ ಕುರಿತು ಅನೇಕ ಬಾರಿ ಇಓ, ಸಿಇಓ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ಅವರ ಗಮನಕ್ಕೆ ತಂದರೂ ಇನ್ನೂ ಕ್ರಮ ಕೈಗೊಂಡಿಲ್ಲ. ಕುಡಿಯುವ ನೀರಿಗಾಗಿ ಕಿಲೋಮೀಟರ್ ಗಟ್ಟಲೇ ಹೋಗಿ ಐಬಿ ನಳಿ ತರಬೇಕು. ವಾಹನ ಇದ್ದಂತವರು ಬೇಗ ತರ್ತಾರೆ, ಗ್ರಾಮದಲ್ಲಿರುವ ಅನೇಕ ಬಡ ಕುಟುಂಬಗಳಿಗೆ ತುಂಬಾ ಸಮಸ್ಯೆ ಆಗ್ತಿದೆ. ಇನ್ನಾದ್ರು ಸಚಿವರು ಇತ್ತ ಗಮನ ಹರಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಿ ಎಂಬುದು ಗ್ರಾಮಸ್ಥರ ಆಗ್ರಹ.

CHITRADURGA: ಚಿಕ್ಕಗೊಂಡನಹಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ: ಜನರಲ್ಲಿ ಮೂಡಿದ ಆತಂಕ!

ನಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆ ಎದ್ದು ಕಾಣ್ತಿದೆ. ಅದ್ರಲ್ಲಂತೂ ಒಂದು ಕ್ಯಾನ್ ಕುಡಿಯುವ ನೀರು ತರಲು ೫೦ ರೂ ಖರ್ಚಾಗ್ತಿದೆ. ಖಾಸಗಿ ಒಡೆತನದ ಶುದ್ದ ನೀರಿನ ಘಟಕಗಳು ಬಡ ಜನರ ಜೀವ ಹಿಂಡುತ್ತಿವೆ. ಎಷ್ಟೋ ಮಂದಿ ವಾಹನ ಇಲ್ಲದವರು ಆಟೋ ಅವಲಂಬಿಸಿ ಬಾಡಿಗೆ ಕೊಟ್ಟು ಕುಡಿಯುವ ನೀರುವ ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವ ಮೂರು ಫಿಲ್ಟರ್ ಗಳನ್ನು ಯಾವಗೋ ವರ್ಷಕ್ಕೆ ಒಮ್ಮೆ ರೆಡಿ ಮಾಡ್ತಾರೆ. ಅದು ಕೇವಲ ಒಂದು ವಾರದೊಳಗೆ ಮತ್ತದೆ ಕೆಟ್ಟು ಹಾಳಾಗ್ತದೆ. ಇದರ ಬಗ್ಗೆ ಅಧಿಕಾರಿಗಳ ಬಳಿ ಹೋಗಿ ದೂರು ಸಲ್ಲಿಸಿದ್ರು ಕ್ರಮ ಕೈಗೊಳ್ತಿಲ್ಲ ಎಂದು ಗ್ರಾಮದ ಹಿರಿಯರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಗಳು ಜನರಿಗೆ ಕುಡಿಯುವ ನೀರಿಗೆ ಯಾವುದೇ ಅಭಾವ ಆಗಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸಹ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಬಬ್ಬೂರು ಅಂತ ಸುಮಾರು ಗ್ರಾಮಗಳಲ್ಲಿ ಇಂದಿಗೂ ಮೂಲಭೂತ ಸೌಲಭ್ಯಗಳ ಸಮಸ್ಯೆ ಹೆಮ್ಮರವಾಗಿ ಬಿಟ್ಟಿದೆ. ಇನ್ನಾದ್ರು ಅಧಿಕಾರಿಗಳಿ ನಿದ್ದೆಯಿಂದ ಮೇಲೇಳಲಿ ಎಂಬುದು ಸಾರ್ವಜನಿಕರ ಬಯಕೆ...

Latest Videos
Follow Us:
Download App:
  • android
  • ios