ಬ್ರ್ಯಾಂಡ್ ಬೆಂಗ್ಳೂರು ಅಂದ್ರೆ ಇದೇನಾ?: ಭಾರೀ ಮಳೆಗೆ ರಸ್ತೆ ತುಂಬ ಗುಂಡಿಗಳದ್ದೇ ದರ್ಬಾರ್‌!

ಮೆಜೆಸ್ಟಿಕ್ ‌ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುಂಡಿಗಳ ದರ್ಶನವಾಗಿದೆ. ಎರಡು ದಿನಗಳ ಮಳೆಗೆ ಬೆಂಗಳೂರು ‌ನಗರ ರಸ್ತೆಗಳೆಲ್ಲಾ ಅಯೋಮಯವಾಗಿವೆ.  ಕಳೆದ ಒಂದು ವಾರದ ಹಿಂದೆ ಅಧಿಕಾರಿಗಳು ರಸ್ತೆ ಗುಂಡಿಗಳನ್ನ ಮುಚ್ಚಿಸಿದ್ದರು. ನಿರಂತರವಾಗಿ ಸುರಿದ ಭಾರೀ ಮಳೆಗೆ ಮೆಜೆಸ್ಟಿಕ್ ಬಸ್ ನಿಲ್ದಾಣ ರಸ್ತೆ ಸಂಪೂರ್ಣ ಗುಂಡಿ‌ಮಯವಾಗಿದೆ. 

People Faces Problems Road pothole Due to Heavy Rain in Bengaluru grg

ಬೆಂಗಳೂರು(ಅ.16): ಬ್ರ್ಯಾಂಡ್ ಬೆಂಗಳೂರು ಅಂದ್ರೆ ಇದೇನಾ? ಎಂದು ಕೇಳುವಷ್ಟರ ಮಟ್ಟಿಗೆ ನಗರದಲ್ಲಿ ಗುಂಡಿಗಳು ಕಾಣಸಿಗುತ್ತಿವೆ.  ಸಾರಿಗೆ ಸಚಿವರೇ ಇದು‌ ನಿಮಗೆ ಕಾಣಿಸುತ್ತಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಹೌದು, ಮೆಜೆಸ್ಟಿಕ್ ‌ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುಂಡಿಗಳ ದರ್ಶನವಾಗಿದೆ. ಎರಡು ದಿನಗಳ ಮಳೆಗೆ ಬೆಂಗಳೂರು ‌ನಗರ ರಸ್ತೆಗಳೆಲ್ಲಾ ಅಯೋಮಯವಾಗಿವೆ.  ಕಳೆದ ಒಂದು ವಾರದ ಹಿಂದೆ ಅಧಿಕಾರಿಗಳು ರಸ್ತೆ ಗುಂಡಿಗಳನ್ನ ಮುಚ್ಚಿಸಿದ್ದರು. ನಿರಂತರವಾಗಿ ಸುರಿದ ಭಾರೀ ಮಳೆಗೆ ಮೆಜೆಸ್ಟಿಕ್ ಬಸ್ ನಿಲ್ದಾಣ ರಸ್ತೆ ಸಂಪೂರ್ಣ ಗುಂಡಿ‌ಮಯವಾಗಿದೆ. 

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆ ತುಂಬ ಗುಂಡಿಗಳು ಬಿದ್ದಿವೆ.  ಇದರಿಂದ ರಸ್ತೆ ದಾಟಲು ಪ್ರಯಾಣಿಕರು ಹರಸಾಹಸ ಪಡುತ್ತಿದ್ದಾರೆ. ಗುಂಡಿಗಳ ರಸ್ತೆಯಲ್ಲಿ ‌ವಾಹನ ಚಲಾಯಿಸೋದು ಹೇಗೆ ಅನ್ನೋದು ಚಾಲಕರ ಪರಿಸ್ಥಿತಿಯಾಗಿದೆ. ಬಸ್ ನಿಲ್ದಾಣದ ರಸ್ತೆಯೇ ಈ ಪರಿಸ್ಥಿತಿ ‌ಅದ್ರೆ, ಉಳಿದ ರಸ್ತೆಗಳ ಕಥೆ ಏನು ಅನ್ನುವಂತಾಗಿದೆ. 

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರ್ನಾಟಕದಲ್ಲಿ ಇನ್ನೂ 5 ದಿನ ಭಾರೀ ಮಳೆ!

ಬೆಂಗಳೂರು ನಗರದಲ್ಲಿ ವರುಣನ ಆರ್ಭಟದಿಂದ ಮನೆ, ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ.  ಟಿ.ದಾಸರಹಳ್ಳಿಯ ಗಾಣಿಗರಹಳ್ಳಿ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ. ಕೆರೆ ತುಂಬಿ ನೀರು ಹೊರ ಬರುತ್ತಿದೆ. ಹೀಗಾಗಿ ರಾತ್ರಿಯಿಂದ ಗಾಣಿಗರಹಳ್ಳಿ ಕೆರೆ ಸುತ್ತ ಜನರು ರಾತ್ರಿಯಿಂದ ಜಾಗರಣೆಯಲ್ಲಿದ್ದಾರೆ. 

ಸುಮಾರು 15 ರಿಂದ 20 ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.  ಚಿಕ್ಕಬಾಣಾವಾರದ ಮಾರುತಿನಗರ ಸಂಪೂರ್ಣವಾಗಿ ಜಲಾವೃತವಾಗಿದ್ದರಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮಾರುತಿ ನಗರದ 15ಕ್ಕೂ ಹೆಚ್ಚು ಮನೆಗಳು ಹಾಗೂ ಅಂಗಡಿಗಳಿಗೆ ನೀರು ನುಗ್ಗಿದೆ. 

ಘಟನೆ ಆದ ಬಳಿಕ ಚಿಕ್ಕಬಾಣಾವಾರ ಪುರಸಭಾ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ಸ್ಥಳೀಯ ಜನರು ಹಾಗೂ ಪುರಸಭಾ ಸಿಬ್ಬಂದಿ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. 

Latest Videos
Follow Us:
Download App:
  • android
  • ios