Asianet Suvarna News Asianet Suvarna News

ಕಲಬುರಗಿ: ಕೊಡ ನೀರಿಗಾಗಿ ರಾತ್ರಿಪೂರಾ ನಿದ್ದೆಗೆಡುವ ಜನರು..!

ರಾಮನಗರ ಗ್ರಾಮದಲ್ಲಿ ಕುಡಿವ ನೀರಿಗಾಗಿ ಜನತೆ ರಾತ್ರಿ ಹೊತ್ತು ಕೊಡಗಳ ಪಾಳೆಯಿಟ್ಟು ನಿದ್ದೆಗೆಟ್ಟು ಕೂಡುವ ಪರಿಸ್ಥಿತಿ ಎದುರಾಗಿದೆ.
 

People Faces Drinking Water Problem in Kalaburagi grg
Author
First Published Feb 23, 2024, 10:00 PM IST

ಕಲಬುರಗಿಫೆ.23): ಬೇಸಿಗೆ ಪ್ರಾರಂಭವಾಗುತ್ತಿದ್ದಂತೆಯೇ ರಾಮನಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಮನಗರ, ಶಿವಬಾಳ ನಗರ, ದೇವಪ್ಪ ನಗರ, ಉಪ್ಪರವಾಡಿ, ಗಡಿ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಉದ್ಭವಿಸುವುದು ಸರ್ವೇಸಾಮಾನ್ಯ. ಪ್ರತಿ ವರ್ಷವೂ ಭರವಸೆ ನೀಡುವುದೇ ಅಧಿಕಾರಿಗಳ ಕೆಲಸವಾಗಿದೆ. ರಾಮನಗರ ಗ್ರಾಮದಲ್ಲಿ ಕುಡಿವ ನೀರಿಗಾಗಿ ಜನತೆ ರಾತ್ರಿ ಹೊತ್ತು ಕೊಡಗಳ ಪಾಳೆಯಿಟ್ಟು ನಿದ್ದೆಗೆಟ್ಟು ಕೂಡುವ ಪರಿಸ್ಥಿತಿ ಎದುರಾಗಿದೆ.

ಅಫಜಲ್ಪುರ ತಾಲೂಕಿ ರಾಮನಗರ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರವಾಗಿದ್ದು, ನೀರಿಗಾಗಿ ಸರ್ಕಾರ ಎಷ್ಟೋ ಖರ್ಚು ಮಾಡಿದರೂ ರಾಮನಗರ ಗ್ರಾಮದಲ್ಲಿ ಶಾಶ್ವತ ಪರಿಹಾರ ಇನ್ನೂವರೆಗೆ ಸಿಕ್ಕಿಲ್ಲ. ಗ್ರಾ.ಪಂ. ವ್ಯಾಪ್ತಿಯಿಂದ 4 ಬೋರ್‌ವೇಲ್‌ ಕೊರೆಸಿದರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕುಡಿವ ನೀರಿಗಾಗಿ ಸಾರ್ವಜನಿಕರು ಪಡುತ್ತಿರುವ ಕಷ್ಟಕ್ಕೆ ಕೊನೆ ಇಲ್ಲದಂತಾಗಿದೆ. ಜಿಲ್ಲಾಡಳಿತ ಹಾಗೂ ತಾಲೂಕು ಆಡಾಳಿತ ಅಧಿಕಾರಿಗಳು ನೀರಿನ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ರಾಮನಗರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಲಬುರಗಿಯಲ್ಲಿ ಅಪ್ರಾಪ್ತರ ಲವ್, ಪ್ರೀತಿ ನಿರಾಕರಿಸಿದ್ದಕ್ಕೆ 10ನೇ ತರಗತಿ ಬಾಲಕಿ ಕತ್ತು ಕೊಯ್ದ 9ನೇ ಕ್ಲಾಸ್‌ ಹುಡುಗ!

ಇದು ಒಂದು ತಿಂಗಳಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಗೋಳು ತೋಡಿಕೊಳ್ಳುತ್ತಾರೆ. ಜಿಲ್ಲಾ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ವಾರದಲ್ಲಿ ಎರಡು ಮೂರು ಸಭೆ ನಡೆಸಿ ಕುಡಿವ ನೀರಿಗೆ ಪ್ರಥಮ ಆದ್ಯತೆ ಎಂದು ಹೇಳುತ್ತಾರೆ. ಆದರೆ, ವಾಸ್ತವದಲ್ಲಿ ಗ್ರಾಮೀಣರ ಪ್ರದೇಶದ ಜನರ ನೀರಿನ ಸಮಸ್ಯೆಗೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ ಎಂದು ರಾಮನಗರ ಗ್ರಾಮದ ಯುವಕರಾದ ಮಾಳಪ್ಪ ಶೇಜುಳೆ ಅಧಿಕಾರಿಗಳ ಕಾರ್ಯವೈಖರಿಯ ಲೋಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಗ್ರಾಮದಲ್ಲಿ ಇದ್ದ ಕೊಳವೆ ಬಾವಿ ಕೂಡ ಅಂತರ್‌ ಜಲ ಬತ್ತಿ ಹೋಗಿದೆ, ತಾಸಿಗೆ ಒಂದು ಕೊಡ ನೀರು ಬರುತ್ತವೆ, ನೀರಿಗಾಗಿ ನಿತ್ಯವೂ ಇಲ್ಲಿ ಜಗಳ ತಪ್ಪಿದ್ದಲ್ಲ. ಅನ್ನ ಬಟ್ಟೆ ಇಲ್ಲದಿದ್ದರೂ ನಡೆಯುತ್ತ, ಕುಡ್ಯಾಕ ನೀರಿಲ್ಲಂದ್ರ ನಾವು ಎಲ್ಲಿ ಹೋಗಮ್ರಿ ನಮ್ ಗತಿನೆ ಹಿಂಗಾದ್ರಿ ಇನ್ನ್ ದನಕರಗಳ ಪಾಡ ಬ್ಯಾಡ್ರಿ ಎಪ್ಪ, ದೊಡ್ಡವ್ರ ಓಟ ಕೆಳಾಕ ಬಂದವ್ರ ಮತ್ತ ನಮ್ಮ ಕೇರಿಗ ಯಾರೂ ಬಂದಿಲ್ರಿ ಮನಿಗಿ ಎರಡ ಬ್ಯಾರಲ್ ಇಟ್ಟಕೊಂಡಿವ್ರಿ ರಾತ್ರಿ ಎಲ್ಲರೂ ಗ್ರಾಮದವರು ಕೊಡಗಳ ಪಾಳಿ ಹಚ್ಚಿ ಕುಡುವ ಪರಸ್ಥಿತಿ ನಮದು ರೀ ಎಂದು ತನ್ನ ಅಳಲನ್ನು ತೋಡಿಕೊಂಡಳು.

ತೋಟದಲ್ಲಿರುವ ರೈತರ ಜಾನುಕರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಯಾಗುತ್ತಿದ್ದು ರಾಮನಗರ ಗ್ರಾಮದ ಅಭಿಮಾನ ಶ್ರೀರಾಮ, ದುಂಡಪ್ಪ ಗಂಗನಳ್ಳಿ, ಖಂಡು ಕೋಕರೆ, ಶರಣು ಗಂಗನಳ್ಳಿ, ಇವರ ತೋಟದಲ್ಲಿನ ನೀರು ಜಾನುವಾರುಗಳಿಗೆ ಪ್ರೀಯಾಗಿ ಕೊಡುತ್ತಿದ್ದಾರೆ ಆದರೆ ರೈತರು ಒಂದು ಟ್ಯಾಂಕರಿಗೆ 600 ರಿಂದ 800 ರು. ಕೊಟ್ಟು ಪ್ರತಿ ದಿನ ನೀರು ಹಾಕಿಸಿಕೊಳ್ಳುವ ಪರಸ್ಥಿತಿ ಎದುರಾಗಿದೆ.

ಸದ್ಯಕ್ಕೆ ಜಿಲ್ಲಾಡಳಿತ ಪ್ರತಿದಿನ ಟ್ಯಾಂಕರ್‌ ಮೂಲಕವಾದರು ನೀರು ಕೊಡಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆಯಾಗಿದೆ. ಈ ಬಗ್ಗೆ ಕ್ಷೇತ್ರದ ಶಾಸಕರು ಲಕ್ಷವಹಿಸಿ ಈ ಬಾಗದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರೆಸಲು ಮುದಾಗಬೇಕು ಎನ್ನುವುದು ಜನರ ಬೇಡಿಕೆಯಾಗಿದೆ.

ಪಿಎಂ-ಉಷಾ ಯೋಜನೆಯಡಿ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ 20 ಕೋಟಿ ಅನುದಾನ

ಮುಂದಿನ ದಿನಗಳಲ್ಲಿ ರಾಮನಗರ ಗ್ರಾ.ಪಂ. ಎಲ್ಲ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳು ಬಗಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹಿರೇಕುರಬರ ಗ್ರಾಮದ ಹಿರಿಯ ಮುಂಖಡ ಸಿದ್ರಾಮಪ್ಪ ತಿಳಿಸಿದ್ದಾರೆ. 

ಅಧಿಕಾರಿಗಳು ಬರಿ ಕಾಗದ ಪತ್ರದಲ್ಲೆ ನೀರಿನ ಸಮಸ್ಯೆ ಕೇಳುತ್ತಿದ್ದಾರೆ ಒಮ್ಮೆ ನಮ್ಮ ಗ್ರಾಮಕ್ಕೆ ಬಂದು ಬೇಟಿ ಕೊಟ್ಟು ನೋಡಿದರೆ ಮಾತ್ರ ಇಲ್ಲಿಯ ಪರಸ್ಥಿತಿ ಗ್ರಾಮದ ಜನರ ಪರಸ್ಥಿತಿ ಎನೆಂದು ಗೊತ್ತಾಗುತ್ತೆ ಹಿಗೆ ಮುಂದುವರೆದರೆ ಮುಂಬರುವ ದಿನಗಳಲ್ಲಿ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತೆ ಎಂದು ಯುವ ಮುಂಖಡರಾದ ಯಲ್ಲಾಲಿಂಗ ಬಂಡಗಾರ, ಮಾಳಪ್ಪ ಶೇಜುಳೆ ತಿಳಿಸಿದ್ದಾರೆ. 

Follow Us:
Download App:
  • android
  • ios