ರಾತ್ರೋ ರಾತ್ರಿ ಊರು ಸೇರ್ತಿದ್ದಾರೆ ಜನ: ಗುಪ್ ಚುಪ್ ಆಗಿರೋರ ಬಗ್ಗೆ ಅನುಮಾನ..!
ಹೊನ್ನಾವರದ ಉಪ್ರೋಣಿ, ಚಂದಾವರ, ಸರಳಗಿ, ಸಂಶಿ, ಮಂಕಿ, ಕುದ್ರಗಿ, ಗೇರಸೊಪ್ಪಾ, ವಲ್ಕಿ ವ್ಯಾಪ್ತಿಯಲ್ಲಿ ಹೊರಗಿನಿಂದ ಬಂದು ಉಳಿದುಕೊಂಡವರ ಸಂಖ್ಯೆ ಇದೀಗ ಅಧಿಕವಾಗಿದ್ದು, ಈ ಬಗ್ಗೆ ಹಳ್ಳಿಹಳ್ಳಿಗಳಲ್ಲಿ ಸರ್ವೇಕ್ಷಣೆ ನಡೆಯುತ್ತಿಲ್ಲ. ಇದರಿಂದ ಗ್ರಾಮೀಣರು ಭೀತಿಗೊಳಗಾಗುವಂತಾಗಿದೆ
ಉತ್ತರ ಕನ್ನಡ(ಮೇ 12): ಹೊನ್ನಾವರ ತಾಲೂಕೊಂದರಲ್ಲಿಯೇ ಬೆಂಗಳೂರು ಸೇರಿದಂತೆ ನಾನಾ ಕಡೆಯಿಂದ 269 ಮಂದಿ ಆಗಮಿಸಿರುವ ಮಾಹಿತಿ ಇದೆ. 4 ಮಂದಿ ಕೂಲಿ ಕಾರ್ಮಿಕರು ತೆಲಂಗಾಣ ರಾಜ್ಯದಿಂದ ಪಟ್ಟಣಕ್ಕೆ ಬಂದಿದ್ದಾರೆ.
ತಾಲೂಕಿನ ಉಪ್ರೋಣಿ, ಚಂದಾವರ, ಸರಳಗಿ, ಸಂಶಿ, ಮಂಕಿ, ಕುದ್ರಗಿ, ಗೇರಸೊಪ್ಪಾ, ವಲ್ಕಿ ವ್ಯಾಪ್ತಿಯಲ್ಲಿ ಹೊರಗಿನಿಂದ ಬಂದು ಉಳಿದುಕೊಂಡವರ ಸಂಖ್ಯೆ ಇದೀಗ ಅಧಿಕವಾಗಿದ್ದು, ಈ ಬಗ್ಗೆ ಹಳ್ಳಿಹಳ್ಳಿಗಳಲ್ಲಿ ಸರ್ವೇಕ್ಷಣೆ ನಡೆಯುತ್ತಿಲ್ಲ. ಇದರಿಂದ ಗ್ರಾಮೀಣರು ಭೀತಿಗೊಳಗಾಗುವಂತಾಗಿದೆ ಎಂದು ಈ ಭಾಗದ ಸ್ಪಂದನ ಸಮಾಜದ ಸೇವಾ ಸಂಸ್ಥೆಯ ಸಂಚಾಲಕ ಚಂದ್ರಕಾಂತ ಕೊಚರೇಕರ ಆಕ್ಷೇಪಿಸಿದ್ದಾರೆ.
30,000 ಖರ್ಚು ಮಾಡಿ ಮನೆಗೆ ಬಂದವನ ಹೊರಗಟ್ಟಿದ ಕುಟುಂಬ!
ರಾತ್ರಿ ವೇಳೆ ಖಾಸಗಿ ವಾಹನಗಳಲ್ಲಿ ಹಳ್ಳಿಗಳ ತಮ್ಮ ಸಂಬಂಧಿತರ ಮನೆಗೆ ದೂರದ ಊರುಗಳಿಂದ ಆಗಮಿಸುವ ನಿತ್ಯ ನೂರಾರು ಸಂಖ್ಯೆಯ ಜನರು ಪೊಲೀಸ್ ಚೆಕ್‌ಪೋಸ್ಟ್‌ಗಳ ಕಣ್‌ತಪ್ಪಿಸಿ ಬರುತ್ತಾರೆ. ಖೊಟ್ಟಿಪಾಸ್‌ಗಳನ್ನು ಬಳಸುವ ಜೊತೆ ಒಳದಾರಿಗಳಿಂದ ನುಸುಳುವವರ ಸಂಖ್ಯೆ ಅಧಿಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರತಿ ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಹೊರಗಿನಿಂದ ಬಂದವರ ಸಮೀಕ್ಷೆ ನಡೆಯಬೇಕು. ಹಗಲಿನಲ್ಲಿ ಕಾಣಿಸಿಕೊಳ್ಳದ ಇವರನ್ನು ರಾತ್ರಿ ವೇಳೆ ಮನೆಯಲ್ಲಿ ಸುಲಭವಾಗಿ ಪತ್ತೆ್ತಹಚ್ಚಬಹುದಾಗಿದೆ. ಈ ದಿಸೆಯಲ್ಲಿ ಕಾರ್ಯಾಚರಣೆ ನಡೆಯಬೇಕು ಎಂಬ ಆಗ್ರಹ ಹೆಚ್ಚತೊಡಗಿದೆ.
ದೇಶದಲ್ಲಿ 70000 ಗಡಿ ದಾಟಿದ ಸೋಂಕು, ಒಂದೇ ದಿನ ದಾಖಲೆಯ 174 ಸಾವು!
ಬೇರೆ ಜಿಲ್ಲೆಯಿಂದ ಆಗಮಿಸಿದ 269 ಮಂದಿಯನ್ನೂ ಹೋಮ್ ಕ್ವಾರಂಟೈನ್ ಸೀಲ್ ಹಾಕಿ ಕಳುಹಿಸಲಾಗಿದೆ. ಕ್ವಾರಂಟೈನ್ ಸೀಲ್ ಇದ್ದವರು ಎಲ್ಲೆಂದರಲ್ಲಿ ತಿರುಗಾಡುವಂತಿಲ್ಲ. ಅವರ ಮೇಲೆ ಸ್ಥಳೀಯ ಆಶಾ ಕಾರ್ಯಕರ್ತೆಯರು ನಿಗಾ ಇಟ್ಟಿರುತ್ತಾರೆ. ಮಾತ್ರವಲ್ಲ ಅವರ ಮನೆಯವರೂ ಬಲವಾದ ಕಾರಣವಿಲ್ಲದೇ ಮನೆಬಿಟ್ಟು ಹೊರ ಬರುವಂತಿಲ್ಲ ಎನ್ನಲಾಗುತ್ತಿದೆ.
ಆದರೆ ಕ್ವಾರಂಟೈನ್ ಸೀಲ್ ಇದ್ದವರು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅಧಿಕಾರಿಗಳಿಗೆ ತಿಳಿಸಬಹುದು. ಕ್ವಾರಂಟೈನ್‌ಗೊಳಪಟ್ಟವರ ಮನೆಯವರು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಗುರುತಿಸುವುದು ಹೇಗೆ? ಎನ್ನುವ ಪ್ರಶ್ನೆ ಸಾರ್ವಕನಿಕರನ್ನು ಕಾಡುತ್ತಿದೆ.