ಕಡ್ಡಾಯ ಮಾಸ್ಕ್ ಆದೇಶ ಇದ್ರೂ ಫಾಲೋ ಮಾಡೋರಿಲ್ಲ

ರಾಜ್ಯ ಆರೋಗ್ಯ ಇಲಾಖೆ ಮತ್ತೆ ಮಾಸ್ಕ್‌ ಕಡ್ಡಾಯಗೊಳಿಸಿದೆ. ಜೊತೆಗೆ ಮಾಸ್ಕ್‌ ಹಾಕದೇ ಇರುವರಿಗೆ ನಗರದಲ್ಲಿ 250 ರು, ಗ್ರಾಮೀಣ ಭಾಗದಲ್ಲಿ 100 ದಂಡ ವಿಧಿಸುವಂತೆಯು ಆದೇಶಿಸಿದೆ. ಆದರೆ ಜಿಲ್ಲೆಯ ಪಾಲಿಗೆ ಸರ್ಕಾರದ ಆದೇಶ ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವಂತಾಗಿದೆ.

People Don't Care About Covid Rules in chikkabalapura snr

 ಚಿಕ್ಕಬಳ್ಳಾಪುರ (ಮಾ.26):  ಕೊರೊನಾ ಎರಡನೇ ಅಲೆ ಆತಂಕದ ಹಿನ್ನಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಮತ್ತೆ ಮಾಸ್ಕ್‌ ಕಡ್ಡಾಯಗೊಳಿಸಿದೆ. ಜೊತೆಗೆ ಮಾಸ್ಕ್‌ ಹಾಕದೇ ಇರುವರಿಗೆ ನಗರದಲ್ಲಿ 250 ರು, ಗ್ರಾಮೀಣ ಭಾಗದಲ್ಲಿ 100 ದಂಡ ವಿಧಿಸುವಂತೆಯು ಆದೇಶಿಸಿದೆ. ಆದರೆ ಜಿಲ್ಲೆಯ ಪಾಲಿಗೆ ಸರ್ಕಾರದ ಆದೇಶ ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವಂತಾಗಿದೆ.

ಸರ್ಕಾರದ ಆರೋಗ್ಯ ಇಲಾಖೆ ಮಾಸ್ಕ್‌ ಕಡ್ಡಾಯಗೊಳಿಸಿ ಮೂರು ದಿನದ ಹಿಂದೆಯೆ ಆದೇಶ ಹೊರಡಿಸಿದರೂ ಜಿಲ್ಲೆಯಲ್ಲಿ ಮಾಸ್ಕ್‌ ಹಾಕದವರಿಗೆ ದಂಡ ಹಾಕುವರೇ ಇಲ್ಲವಾಗಿದ್ದು ಜಿಲ್ಲೆಯಲ್ಲಿ ರಾಜಾರೋಷವಾಗಿ ಸಾರ್ವಜನಿಕರು ಮಾಸ್ಕ್‌ ಹಾಕಿಕೊಳ್ಳದೇ ಸಂಚರಿಸುವುದು ಸಾಮಾನ್ಯವಾಗಿದೆ.

ಕೊರೋನಾ ನಿಯಂತ್ರಣಕ್ಕೆ ಎಪ್ರಿಲ್ 1 ರಿಂದ ಕಠಿಣ ಕ್ರಮ; ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರ! ..

ಮಾಸ್ಕ್‌ ಹಾಕದೇ ಇರುವ ಸಾರ್ವಜನಿಕರು ದಂಡ ವಿಧಿಸುವ ಅಧಿಕಾರವನ್ನು ಸರ್ಕಾರ ಮುಖ್ಯ ಪೊಲೀಸ್‌ ಪೇದೆಯಿಂದ ಹಿಡಿದು ಮೇಲಿನ ಅಧಿಕಾರಿಗಳಿಗೆ, ಆರೋಗ್ಯ ನಿರೀಕ್ಷಕರು, ಗ್ರಾಮ ಪಂಚಾಯತಿ ಕಾರ್ಯದರ್ಶಿ, ಬಿಲ್‌ ಕಲೆಕ್ಟರ್‌, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿದೆ. ಆದರೂ ನಗರ ಪ್ರದೇಶದಲ್ಲಿ ಅಪರೂಪಕ್ಕೊಮ್ಮೆ ಸಂಚಾರಿ ಪೊಲೀಸರು ಹೆಲ್ಮೆಟ್‌ ಕಡ್ಡಾಯದ ವಿರುದ್ದ ನಡೆಸುತ್ತಿರುವ ಕಾರ್ಯಾಚರಣೆ ವೇಳೆ ಮಾಸ್ಕ್‌ ಹಾಕದವರು ಸಿಕ್ಕಿಬಿದ್ದರೆ ದಂಡ ಹಾಕುವುದು ಬಿಟ್ಟರೆ ಮಾಸ್ಕ್‌ ಕಡ್ಡಾಯಗೊಳಿಸಲು ಸಾರ್ವಜನಿಕರಿಗೆ ಅರಿವು ಮೂಡಿಸು ಕಾರ್ಯ ಜಿಲ್ಲೆಯಲ್ಲಿ ಕಂಡುಬರುತ್ತಿಲ್ಲ.

ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದೆ. ಆದರೂ ಜನ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಕೊರೋನಾ ಎರಡನೇ ಅಲೆ ಹತಂಕಕ್ಕೆ ಕ್ಯಾರೆ ಎನ್ನದೇ ನಡೆದುಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಪೊಲೀಸರಿಂದ ಮಾತ್ರ ದಂಡ

ಜಿಲ್ಲೆಯಲ್ಲಿ ನಗರ ಪ್ರದೇಶದ ಸಂಚಾರಿ ಪೊಲೀಸರು ಮಾತ್ರ ವಾಹನಗಳಲ್ಲಿ ಬರುವ ಸಾರ್ವಜನಿಕರು ಹಾಗೂ ವಾಹ ಸವಾರರು ಮಾಸ್ಕ್‌ ಹಾಕದೇ ಇದ್ದರೆ ಮಾತ್ರ ದಂಡ ವಿಧಿಸಿ ಕಳುಹಿಸುತ್ತಿರುವುದು ಬಿಟ್ಟರೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಾಸ್ಕ್‌ ಹಾಕದವರಿಗೆ ಬೇರೆ ಯಾವುದೇ ಇಲಾಖೆ ಅಧಿಕಾರಿಗಳು ದಂಡದ ಪ್ರಯೋಗ ಮಾಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಅಂತೂ ಮಾಸ್ಕ್‌ ಹಾಕಲಿ, ಬಿಡಲಿ ಯಾರು ಅದರ ಬಗ್ಗೆ ಗಮನ ಕೊಡುವರು ಅಥವ ದಂಡ ಹಾಕುವರೇ ಇಲ್ಲವಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ ಕುಮಾರ್‌ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios