Asianet Suvarna News Asianet Suvarna News

Tumakur : ಗಣಿಗಾರಿಕೆ ನಡೆಸಬೇಡಿ ಎಂದು ಆಕ್ರೋಶ

  ಕಲ್ಲಿನ ಗುಡ್ಡದಲ್ಲಿ ಗಣಿಗಾರಿಕೆ ಮಾಡಿ ಕ್ರಷರ್‌ ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು ಇದರಿಂದ ಇಲ್ಲಿ ವಾಸಿಸುವ ಜನರಿಗೆ ತೀವ್ರ ತೊಂದರೆಯಾಗಲಿದ್ದು ಗಣಿಗಾರಿಕೆ ಆರಂಭಿಸಿದರೆ ಸ್ಥಳದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದೆಂದು ದಲಿತ ಮುಖಂಡ ಪೆದ್ದಿಹಳ್ಳಿ ನರಸಿಂಹಯ್ಯ ಆಕ್ರೋಶ ವ್ಯಕ್ತಪಡಿಸಿದರು.

People Demand For stop Mining snr
Author
First Published Dec 29, 2022, 4:44 AM IST

 ತಿಪಟೂರು :  ತಾಲೂಕಿನ ಕಸಬಾ ಹೋಬಳಿ ಬೊಮ್ಮೇನಹಳ್ಳಿ, ದೇವರಹಳ್ಳಿ, ಮಾರುತಿ ಬಡಾವಣೆ, ರಾಮೇನಹಳ್ಳಿ ಹಾಗೂ ರಾಮೇನಹಳ್ಳಿ ಗೊಲ್ಲರಹಟ್ಟಿ, ಬೆನ್ನಾಯಕನಹಳ್ಳಿ, ಪೆದ್ದಿಹಳ್ಳಿ ಭಾಗದಲ್ಲಿರುವ ಕಲ್ಲಿನ ಗುಡ್ಡದಲ್ಲಿ ಗಣಿಗಾರಿಕೆ ಮಾಡಿ ಕ್ರಷರ್‌ ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು ಇದರಿಂದ ಇಲ್ಲಿ ವಾಸಿಸುವ ಜನರಿಗೆ ತೀವ್ರ ತೊಂದರೆಯಾಗಲಿದ್ದು ಗಣಿಗಾರಿಕೆ ಆರಂಭಿಸಿದರೆ ಸ್ಥಳದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದೆಂದು ದಲಿತ ಮುಖಂಡ ಪೆದ್ದಿಹಳ್ಳಿ ನರಸಿಂಹಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕೌಸ್ತುಭ ಹೋಟೆಲ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೆ ನಂಬರ್‌ 36ರಲ್ಲಿ ಸುಮಾರು 25 ಎಕರೆ ಜಾಗವಿದ್ದು ಇಲ್ಲಿ ಗಣಿಗಾರಿಕೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳನ್ನು ಮೇಯಿಸಲು ಇದು ಏಕೈಕ ಜಾಗವಾಗಿದ್ದು, ಇನ್ನೆಲ್ಲಿಯೂ ಗೋಮಾಳವಿಲ್ಲ. ಅಲ್ಲದೆ ಈ ಭಾಗದಲ್ಲಿ ರೈತ ಕುಟುಂಬಗಳು ವಾಸಿಸುವ ನೂರಾರು ಮಣ್ಣಿನ ಹಳೆ ಮನೆಗಳಿದ್ದು ಗಣಿಗಾರಿಕೆ ಪ್ರಾರಂಭಿಸಿದರೆ ಬಿರುಕು ಬೀಳುವ ಸಂಭವವಿದ್ದು ಜನರು ಜೀವನ ನಡೆಸಲು ಮನೆಗಳಿಲ್ಲದೆ ಬೀದಿಪಾಲಾಗಲಿದ್ದಾರೆ. ಎತ್ತಿನಹೊಳೆ ಯೋಜನೆ ಹಾಯ್ದು ಹೋಗಿದ್ದು ಇಂತಹ ಸ್ಥಳದಲ್ಲಿ ಅಕ್ರಮವಾಗಿ ಕ್ರಷರ್‌ ಸ್ಥಾಪಿಸಲು ಮುಂದಾಗಿರುವುದು ಖಂಡನೀಯ. ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಸಂಬಂಧಪಟ್ಟತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸರ್ವೆ ಮಾಡಲು ಬಂದಿದ್ದಾರೆ. ಈ ಬಗ್ಗೆ ಇಲ್ಲಿನ ಗ್ರಾಮಸ್ಥರು ವಿಚಾರಿಸಲು ಹೋದರೆ ಸರ್ವೆ ಅಧಿಕಾರಿಗಳು ನಮ್ಮ ಮೇಲಿಯೇ ದೌರ್ಜನ್ಯ ಮಾಡುತ್ತಾರೆ. ಆದ್ದರಿಂದ ಗಣಿಗಾರಿಕೆಯ ನಡೆಸಬಾರದು ನಡೆಸಿದರೆ ಹೋರಾಟ ಮತ್ತು ಮುಷ್ಕರ ಹಮ್ಮಿಕೊಳ್ಳಲಾಗುತ್ತದೆ ಎಂದು ಆಗ್ರಹಿಸಿದರು.

Udupi; ಅಕ್ರಮ ಮರಳು ಅಡ್ಡೆಗೆ ದಾಳಿ, 8 ಮೆಟ್ರಿಕ್ ಟನ್ ಮರಳು, 14 ಮೆಟ್ರಿಕ್ ಟನ್ ಕೆಂಪುಕಲ್ಲು ವಶ

ಗ್ರಾಮಸ್ಥರಾದ ಬೊಮ್ಮೇನಹಳ್ಳಿ ಕುಮಾರಸ್ವಾಮಿ ಮತ್ತು ಲೋಕೇಶ್‌ ಮಾತನಾಡಿ, ಗಣಿಗಾರಿಕೆ ನಡೆಸುವ ಸ್ಥಳದಲ್ಲಿ ಪುರಾತನ ಕಾಲದಿಂದಲೂ ಗಂಗಮ್ಮನ ಕಟ್ಟೆಯಿದ್ದು ಹತ್ತಾರು ಹಳ್ಳಿಗಳಿಂದ ಹೆಣ್ಣು ಮಕ್ಕಳು ಗಂಗಮ್ಮನನ್ನು ಮಾಡಲು ಬರುತ್ತಾರೆ. ಇಲ್ಲಿನ ಜನ ಜಾನುವಾರುಗಳಿಗೆ ಕುಡಿಯಲು ನೀರನ್ನು ಇದನ್ನೇ ಬಳಸುತ್ತಾರೆ. ಸುತ್ತಮುತ್ತ ತೆಂಗು ಸೇರಿದಂತೆ, ರಾಗಿ, ತೊಗರಿ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದು ಗಣಿಗಾರಿಕೆಯಿಂದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುವುದಿಲ್ಲ. ಸ್ಥಳೀಯ ಸಚಿವರು ಈ ಬಗ್ಗೆ ಗಮನಹರಿಸಬೇಕು. ಒಂದು ವೇಳೆ ಅನುಮತಿ ಕೊಟ್ಟರೆ ಮುಂದೆ ಆಗುವ ಅನಾಹುತಕ್ಕೆ ನೀವೇ ಹೊಣೆಗಾರರಾಗುತ್ತೀರೆಂದರು.

ಸುವರ್ಣ ನ್ಯೂಸ್ ‌ಇಂಪ್ಯಾಕ್ಟ್: ಉಳ್ಳಾಲದ ಮರಳು ದಂಧೆಕೋರರ ವಿರುದ್ದ ಎಫ್ಐಆರ್!

ಸುದ್ದಿಗೋಷ್ಠಿಯಲ್ಲಿ ವಿವಿಧ ಗ್ರಾಮಗಳ ಗ್ರಾಮಸ್ಥರಾದ ಲೋಕೇಶ್‌, ಗಂಗಾಧರ್‌, ರಂಗಸ್ವಾಮಿ, ವೆಂಕಟೇಶ್‌, ಶ್ರೀನಿವಾಸ್‌, ಲಕ್ಕಪ್ಪ, ಚಂದನ್‌, ಬಸವರಾಜು, ರಾಮಚಂದ್ರ ಮತ್ತಿತರರಿದ್ದರು.

ಫೋಟೋ 27-ಟಿಪಿಟಿ1ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಮುಖಂಡ ಪೆದ್ದಿಹಳ್ಳಿ ನರಸಿಂಹಯ್ಯ.

ಮರಳಿ ಅಡ್ಡೆ ಮೇಲೆ ದಾಳಿ

ಮಂಗಳೂರು (ಡಿ.9): ದಕ್ಷಿಣ ಕನ್ನಡ ಜಿಲ್ಲೆಯ ಹಲವಡೆ ಅಕ್ರಮ ಮರಳು ಅಡ್ಡೆಗಳಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ದ.ಕ ಜಿಲ್ಲೆಯ ಮುಲ್ಕಿ, ಬೆಳ್ತಂಗಡಿ ಮತ್ತು ಬಂಟ್ವಾಳದಲ್ಲಿ ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ‌ ಲಾರಿ, ಟಿಪ್ಪರ್‌, ಜೆಸಿಬಿ ಮತ್ತು ಮರಳು ಸಹಿತ 40 ಲಕ್ಷ ‌ಮೌಲ್ಯದ ಸೊತ್ತುಗಳು ವಶಕ್ಕೆ ಪಡೆಯಲಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಮೂರು ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಡಿವೈಎಸ್ಪಿಗಳಾದ ಕಲಾವತಿ, ಚಲುವರಾಜು ಮತ್ತು ಇನ್ಸ್ಪೆಕ್ಟರ್ ಅಮಾನುಲ್ಲಾ ನೇತೃತ್ವದ 03 ತಂಡಗಳನ್ನು ರಚಿಸಿ ದಾಳಿ ನಡೆಸಲಾಗಿದೆ.  ಇನ್ನು ಅನೇಕ ಕಡೆಗಳಲ್ಲಿ ಅಕ್ರಮವಾಗಿ ಗಣಿಗಾರಿಕೆ ಮತ್ತು ನಿಯಮ ಮಾಡುತ್ತಿರುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಅಕ್ರಮ ಮರಳುಗಾರಿಕೆಯಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದ್ದು, ಗಣಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತನದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಲೋಕಾಯುಕ್ತದ ಮಂಗಳೂರು ವಿಭಾಗದ ಎಸ್ಪಿ ಲಕ್ಷ್ಮೀಗಣೇಶ್  ತಿಳಿಸಿದ್ದಾರೆ.

ಲೋಕಾಯುಕ್ತ ಫೋನ್ ಇನ್: ಹಲವು ದೂರಿನ ಕರೆ!
ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಗೆ ಸರಕಾರಿ ಕೆಲಸಗಳಲ್ಲಿ ವಿಳಂಬ, ಲಂಚದ ಬೇಡಿಕೆ ಮತ್ತು ಭ್ರಷ್ಟಾಚಾರದ ಸಂಬಂಧ ದೂರುಗಳಿಗಾಗಿ “ನೇರ ಫೋನ್- ಇನ್” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕರಿಂದ 25 ದೂರು ಕರೆಗಳು ಬಂದಿದ್ದು, ದೂರುಗಳಲ್ಲಿ ಪ್ರಮುಖವಾಗಿ ಕಂದಾಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಮೂಡ ಇಲಾಖೆಗೆ ಸಂಬಂಧಿಸಿದ ದೂರುಗಳು ಇದ್ದವು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ. 

Follow Us:
Download App:
  • android
  • ios