ಸುವರ್ಣ ನ್ಯೂಸ್ ‌ಇಂಪ್ಯಾಕ್ಟ್: ಉಳ್ಳಾಲದ ಮರಳು ದಂಧೆಕೋರರ ವಿರುದ್ದ ಎಫ್ಐಆರ್!

Illegal Sand Mining In Ullal: ಸಿಸಿಟಿವಿ ಒಡೆದು ಹಾಕಿದ ಮರಳು ದಂಧೆಕೋರರ ವಿರುದ್ದ ಕೊನೆಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ

Suvarna News Impact FIR against illegal sand miners in Ullal Mangaluru mnj

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್, ‌ಮಂಗಳೂರು

ಮಂಗಳೂರು (ಸೆ. 12): ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಉಳ್ಳಾಲದ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದೆ. ಸಿಸಿಟಿವಿ ಒಡೆದು ಹಾಕಿದ ಮರಳು ದಂಧೆಕೋರರ (Illegal Sand Mining) ವಿರುದ್ದ ಕೊನೆಗೂ ದೂರು ದಾಖಲಿಸಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ (Ullal Police Station) ಎಫ್ ಐಆರ್ ದಾಖಲಾಗಿದೆ.   ಸುವರ್ಣ ನ್ಯೂಸ್ ಈ ಬಗ್ಗೆ ವರದಿ ಮಾಡಿದ ಬೆನ್ನಲ್ಲೇ ಉಳ್ಳಾಲ ಪೊಲೀಸ್ ಠಾಣೆಗೆ ಓಡೋಡಿ ಬಂದ ಕಂದಾಯ ನಿರೀಕ್ಷಕ ದೂರು ನೀಡಿದ್ದಾರೆ. ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕ ಮಂಜುನಾಥ್ ಸೋಮೇಶ್ವರ ಬಳಿ ಸಿಸಿಟಿವಿ ಒಡೆದು ಹಾಕಿದ ಮರಳು ದಂಧೆಕೋರರ ವಿರುದ್ದ ದೂರು ನೀಡಿದ್ದಾರೆ. ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡ ಉಳ್ಳಾಲ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಲು ಜಿಲ್ಲಾಧಿಕಾರಿ ಮತ್ತು ಕೆಲ ಉನ್ನತ ಮಟ್ಟದ ಅಧಿಕಾರಿಗಳು ಕಠಿಣ ಕ್ರಮಗಳನ್ನು ಕೈಗೊಂಡರೂ ಕೆಳ ಮಟ್ಟದ ಅಧಿಕಾರಿಗಳು ಮಾತ್ರ ಇನ್ನೂ  ಮರಳು ದಂಧೆಕೋರರಿಗೆ ಸಾಥ್ ನೀಡ್ತಾ ಇದ್ದು, ಪರಿಣಾಮ ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ಮರಳು ಅಕ್ರಮ ದಂಧೆಕೋರರ ಅಟ್ಟಹಾಸ ಮುಂದುವರೆದಿದೆ ಎಂದು ಬೆಳಿಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ವರದಿ ಪ್ರಸಾರವಾಗಿತ್ತು. 

Udupi; ಅಕ್ರಮ ಮರಳು ಅಡ್ಡೆಗೆ ದಾಳಿ, 8 ಮೆಟ್ರಿಕ್ ಟನ್ ಮರಳು, 14 ಮೆಟ್ರಿಕ್ ಟನ್ ಕೆಂಪುಕಲ್ಲು ವಶ

ಕಳೆದ ಶುಕ್ರವಾರ ಮಧ್ಯರಾತ್ರಿ ಹೊತ್ತಿಗೆ ಜಿಲ್ಲಾಡಳಿತ ಅಳವಡಿಸಿದ್ದ ಸಿಸಿಟಿವಿ ಕ್ಯಾಮಾರಗಳನ್ನೇ ಮರಳು ದಂಧೆಕೋರರು ಪುಡಿ ಗಟ್ಟಿದ್ದು, ಘಟನೆ ನಡೆದು ಮೂರು ದಿನ ಕಳೆದರೂ ಅಧಿಕಾರಿ ವರ್ಗ ಪೊಲೀಸ್ ದೂರು ನೀಡಿರಲಿಲ್ಲ. ಇದು ಮಂಗಳೂರಿನಲ್ಲಿ ಅಕ್ರಮ ಮರಳು ದಂಧೆಕೋರರ ಜೊತೆ ಅಧಿಕಾರಿಗಳು ಶಾಮೀಲಾದ್ರಾ ಎಂಬ ಅನುಮಾನಕ್ಕೆ ಕಾರಣವಾಗಿತ್ತು. 

ಸಿಸಿಟಿವಿ ಪುಡಿಗೈದ ಮರಳು ಲೂಟಿಕೋರರ ವಿರುದ್ದ ಇನ್ನೂ ಪ್ರಕರಣ ದಾಖಲಾಗದೇ ಇದ್ದು, ಅಕ್ರಮ ದಂಧೆಕೋರರ ವಿರುಧ್ಧ ಪೊಲೀಸ್ ದೂರು ನೀಡಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ವರದಿ ಪ್ರಸಾರವಾಗಿತ್ತು.‌ ಮಂಗಳೂರು ಹೊರವಲಯದ ಸೋಮೇಶ್ವರ ಬಳಿ ಸಿಸಿಟಿವಿ ಕ್ಯಾಮರಾ ಪುಡಿಗೈದು ದಾಂಧಲೆ ಮಾಡಿರೋ ಮರಳು ದಂಧೆಕೋರರು, ಮರಳು ಲಾರಿ ಡಿಕ್ಕಿ ಹೊಡೆಸಿ ಸಿಸಿಟಿವಿ ಕ್ಯಾಮೆರಾ ಪುಡಿಗೈದಿದ್ದಾರೆ. 

ಭೀಮಾತೀರದಲ್ಲಿ ಆತಂಕ ಸೃಷ್ಟಿಸಿದ ಆಯಿಲ್‌ ಗ್ಯಾಂಗ್: ಉದ್ಯಮಿ, ವ್ಯಾಪಾರಿಗಳೇ ಇವರ ಟಾರ್ಗೆಟ್!

ಕಳೆದ ಶುಕ್ರವಾರ ಮಧ್ಯರಾತ್ರಿ ಸೋಮೇಶ್ವರದಲ್ಲಿ ಘಟನೆ ನಡೆದಿದ್ದು, ಉಳ್ಳಾಲ ತಹಶೀಲ್ದಾರ್ ಮತ್ತು ಸೋಮೇಶ್ವರ ಗ್ರಾಮದ ಗ್ರಾಮಕರಣಿಕರ ಶಾಮೀಲಾತಿ ಆರೋಪ ವ್ಯಕ್ತವಾಗಿತ್ತು. ಮೂರು ದಿನ ಕಳೆದರೂ ಇನ್ನೂ ಪೊಲೀಸ್ ದೂರು ನೀಡದ ಅಧಿಕಾರಿಗಳು ಮರಳು ದಂಧೆಕೋರರ ಜೊತೆ ನೇರ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿತ್ತು. ಇನ್ನು ಯಾವುದೇ ದೂರು ಬಂದಿಲ್ಲ ಎಂದು ಉಳ್ಳಾಲ ಪೊಲೀಸರು ಕೈಕಟ್ಟಿ ಕುಳಿತಿದ್ದರು. ಇದೀಗ ವರದಿ ಪ್ರಸಾರವಾದ ಬೆನ್ನಲ್ಲೇ ಡಿಸಿ ಸೂಚನೆ ಹಿನ್ನೆಲೆ ಆರ್.ಐ ಮಂಜುನಾಥ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios