Asianet Suvarna News Asianet Suvarna News

ಕೊಡಗು: 2 ತಲೆಮಾರು ಬೀದಿಯಲ್ಲೇ ಉರುಳಿದ ಬದುಕು, ಸಾಮೂಹಿಕ ಆತ್ಮಹತ್ಯೆಗೆ ಜನರ ನಿರ್ಧಾರ..!

ಸುತ್ತಲೂ ಕಾಡು, ಕಸದ ರಾಶಿ, ತಗಡಿನ ಶೀಟುಗಳನ್ನು ನಿಲ್ಲಿಸಿ ಅದರ ಮೇಲೆ ಹೊದಿಸಿದ ಪ್ಲಾಸ್ಟಿಕ್ ಛಾವಣಿ. ಈ ಗುಡಿಸಲಿನ ಮೇಲೆ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ಲೈನ್, ಆದರೂ ಗುಡಿಸಲಿಗೆ ಮಾತ್ರ ವಿದ್ಯುತ್ ಬೆಳಕಿಲ್ಲ. ಕಸದ ರಾಶಿಯಿಂದ ಗಬ್ಬೆದ್ದು ನಾರುತ್ತಿರುವ ವಾಸನೆ. ಕುಡಿಯುವುದಕ್ಕೆ ಶುದ್ಧ ನೀರೂ ಇಲ್ಲ. ಇಂತಹ ದುಸ್ಥರದ ಬದುಕು ನಡೆಸುತ್ತಿರುವುದು ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕು ಕೇಂದ್ರದ 7 ಕುಟುಂಬಗಳು. 

People Decision to Commit Mass Suicide For Not Give Facilities in Kodagu grg
Author
First Published Sep 6, 2023, 11:30 PM IST

ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು 

ಕೊಡಗು (ಸೆ.06):  ಇವರೆಲ್ಲಾ ಅದೇ ಊರಿನಲ್ಲೇ ಹುಟ್ಟಿ ಬೆಳೆದವರು. ಮೂರು ತಲೆಮಾರುಗಳನ್ನು ಇಲ್ಲಿಯೇ ಕಳೆದವರು. ಆದರೂ ಸ್ವಂತ ಸೂರು ಇಲ್ಲದೆ ಬೀದಿಯಲ್ಲೇ ಬದುಕು ಕಳೆದರು. ಕೊನೆಗೆ ಬೀದಿಯಲ್ಲೇ ಮಣ್ಣಾದರೇ ವಿನಃ ಇಂದಿಗೂ ಸ್ವಂತ ಸೂರು ಮಾತ್ರ ಸಿಗಲಿಲ್ಲ. ಅವರ ಯಾತನಾಮಯ ಬದುಕನ್ನು ನೀವು ಒಮ್ಮೆ ಓದಿ. 

ಸುತ್ತಲೂ ಕಾಡು, ಕಸದ ರಾಶಿ, ತಗಡಿನ ಶೀಟುಗಳನ್ನು ನಿಲ್ಲಿಸಿ ಅದರ ಮೇಲೆ ಹೊದಿಸಿದ ಪ್ಲಾಸ್ಟಿಕ್ ಛಾವಣಿ. ಈ ಗುಡಿಸಲಿನ ಮೇಲೆ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ಲೈನ್, ಆದರೂ ಗುಡಿಸಲಿಗೆ ಮಾತ್ರ ವಿದ್ಯುತ್ ಬೆಳಕಿಲ್ಲ. ಕಸದ ರಾಶಿಯಿಂದ ಗಬ್ಬೆದ್ದು ನಾರುತ್ತಿರುವ ವಾಸನೆ. ಕುಡಿಯುವುದಕ್ಕೆ ಶುದ್ಧ ನೀರೂ ಇಲ್ಲ. ಇಂತಹ ದುಸ್ಥರದ ಬದುಕು ನಡೆಸುತ್ತಿರುವುದು ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕು ಕೇಂದ್ರದ 7 ಕುಟುಂಬಗಳು. 

ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಬರುತ್ತಾರೆಂದು ಸಂತೋಷ್ ಕನಸು ಕಾಣುತ್ತಿದ್ದಾರೆ: ಸಲೀಂ ಅಹಮದ್ ವ್ಯಂಗ್ಯ

ಕುಶಾಲನಗರ ಪುರಸಭೆ ವ್ಯಾಪ್ತಿಯ ಒಂದನೇ ವಾರ್ಡಿನಲ್ಲಿ ಕಳೆದ ನೂರೈವತ್ತು ವರ್ಷಗಳಿಂದ ಇಂತಹ ದುಃಸ್ಥಿತಿಯಲ್ಲೇ ಬದುಕು ದೂಡಿ ವಿವಿಧ ರೋಗಗಳಿಗೆ ತುತ್ತಾಗಿ 30 ಕುಟುಂಬಗಳು ಸರ್ವನಾಶವಾಗಿವೆ. ಇದೀಗ ಏಳು ಕುಟುಂಬಗಳು ಮಾತ್ರವೇ ಉಳಿದಿವೆ. ಇಲ್ಲಿಯೇ ಹುಟ್ಟಿ ಬೆಳೆದು, ಕೂಲಿ ಕೆಲಸ ಮಾಡಿ ಬದುಕುವ ಇವರಿಗೆ ಸ್ವಂತ ನೆಲೆ ಎಂಬುದೇ ಇಲ್ಲ. ಕಳೆದ ಮೂರು ವರ್ಷಗಳ ವರೆಗೆ ಕೆಇಬಿಯ ಕೌಂಪೌಂಡಿಗೆ ಹೊಂದಿಕೊಂಡಂತೆ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದವು. ಆದರೆ ಬೈಪಾಸ್ ಹೆದ್ದಾರಿ ಮಾಡಿದ್ದರಿಂದ ಅಲ್ಲಿಂದ ಒಕ್ಕಲೆಬ್ಬಿಸಲಾಯಿತು. ನಂತರ ಕಾವೇರಿ ನದಿ ದಂಡೆಯಲ್ಲಿ ಸಣ್ಣ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಜೀವನ ಆರಂಭಿಸಿದವು. ಆದರೆ ಅಲ್ಲಿಗೆ ಯುಡಿಜಿ ಸಂಸ್ಕರಣ ಘಟಕ ಬಂದಿದ್ದರಿಂದ ಅಲ್ಲಿಂದ ಒಕ್ಕಲೆಬ್ಬಿಸಿದ ಹಿನ್ನೆಲೆ ಈಗ ಮಾರುಕಟ್ಟೆ ಸಮೀಪದ ಕೊಳಚೆ ಜಾಗದಲ್ಲಿ ನೆಲೆ ಕಂಡುಕೊಂಡಿವೆ. ಹಾವು ಚೇಳುಗಳ ಕಾಟ ಅಷ್ಟಿಷ್ಟಲ್ಲ. ಹೀಗಾಗಿ ನಮ್ಮ ಮಕ್ಕಳನ್ನು ಹೊರ ಜಿಲ್ಲೆಗಳಲ್ಲಿ ಹಾಸ್ಟೆಲ್ಗಳಿಗೆ ಸೇರಿಸಿ ಓದಿಸುತ್ತಿದ್ದೇವೆ ಎಂದು ಕಣ್ಣೀರಿಡುತ್ತಿದ್ದಾರೆ ಮಹಿಳೆಯರು. 

ಇಷ್ಟು ವರ್ಷಗಳ ಕಾಲ ನಮಗೊಂದು ಮನೆಕೊಡಿ ಎಂದು ಕೇಳಿ ಸಾಕಾಗಿ ಹೋಗಿದೆ. ಯಾರೂ ನಮ್ಮ ಮನವಿಯನ್ನು ಆಲಿಸುತ್ತಿಲ್ಲ. ನಮಗೆ ಬದುಕೇ ಸಾಕಾಗಿ ಹೋಗಿದೆ. ಎಲ್ಲರೂ ಸಾಮೂಹಿಕವಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಕಣ್ಣೀರಿಡುತ್ತಿದ್ದಾರೆ ಸಂಕಷ್ಟದಲ್ಲಿರುವ ಅಲೀಮಾ. 

ಈ ಗುಡಿಸಲುಗಳಲ್ಲಿ ಬದುಕುತ್ತಿರುವ ನಾವು ಕುಡಿಯುವುದಕ್ಕೂ ಶುದ್ಧ ನೀರಿಲ್ಲದೆ ಪರದಾಡುತ್ತಿದ್ದೇವೆ. ಒಂದು ನಲ್ಲಿ ಹಾಕಿಕೊಟ್ಟಿದ್ದಾರೆ. ಅದರಲ್ಲಿ ಹುಳು ಉಪ್ಪಟೆಗಳು ಬರುತ್ತವೆ. ನಾವು ಬೇರೆ ದಾರಿಯಿಲ್ಲದೆ ಅದೇ ನೀರನ್ನು ಸೋಸಿ ಕುಡಿಯುತ್ತೇವೆ. ನಮ್ಮ ಬದುಕು ಇಲ್ಲಿಗೆ ಮುಗಿದು ಹೋಗಿದೆ, ಕನಿಷ್ಠ ನಮ್ಮ ಮಕ್ಕಳಿಗಾದರೂ ಒಂದು ಮನೆಯ ಆಸರೆ ಇರಲಿ. ಅದಕ್ಕಾಗಿ ದಯವಿಟ್ಟು ಒಂದು ಮನೆ ಕೊಡಿ ಎಂದು ಮಹಿಳೆ ರಶ್ಮಿ ಅಂಗಲಾಚುತ್ತಿದ್ದಾರೆ. 

ಪ್ರಕೃತಿ ವಿಕೋಪದಿಂದ ನಲುಗಿ ಹೋಗಿತ್ತು ಆ ಜಿಲ್ಲೆ..! ದಯಾಮರಣ ಕೋರಿ ರಾಷ್ಟ್ರಪತಿಗೆ ಸಂತ್ರಸ್ತೆ ಪತ್ರ

ಇನ್ನು ಈ ಕುರಿತು ಪುರಸಭೆಯ ಈ ವಾರ್ಡಿನ ಸದಸ್ಯ ಶೇಕ್ ಖಲೀಂ ಉಲ್ಲಾ ಅವರನ್ನು ಕೇಳಿದರೆ ಇದುವರೆಗೆ ಶಾಸಕರು ಕಡೆಗಣಿಸಿದ್ದಾರೆ. ಇದೀಗ ನೂತನ ಶಾಸಕರು ಇದರ ಬಗ್ಗೆ ಗಮನ ಹರಿಸಿದ್ದಾರೆ. ಪುರಸಭೆಯಲ್ಲೂ ಕೂಡ ಚರ್ಚಿಸಿ ನಿರ್ಧರಿಸಿದ್ದೇವೆ. ಇನ್ನೊಂದೆರಡು ತಿಂಗಳಲ್ಲಿ ಇವರಿಗೆ ಮನೆ ಕೊಡಲಾಗುವುದು ಎಂದಿದ್ದಾರೆ. 

ಒಟ್ಟಿನಲ್ಲಿ ಬಡತನದಲ್ಲಿ ಹುಟ್ಟಿ ಎರಡು ತಲೆಮಾರುಗಳ ಕಾಲ ಬೀದಿ ಬದಿಯಲ್ಲಿ ಬದುಕಿದ ಹಲವು ಕುಟುಂಬಗಳು ರೋಗ ರುಜಿನಗಳಿಗೆ ತುತ್ತಾಗಿ ಪ್ರಾಣ ಬಿಟ್ಟಿವೆ. ಉಳಿದ ಕುಟುಂಬಗಳಿಗಾದರೂ ಸ್ವಂತ ಸೂರು ಒದಗಿಸಿ ನೆಮ್ಮದಿಯ ಬದುಕಿನ ಅವಕಾಶ ನೀಡುತ್ತಾರಾ ಕಾದು ನೋಡಬೇಕಾಗಿದೆ.

Follow Us:
Download App:
  • android
  • ios