ಚಾರ್ಮಾಡಿ ಘಾಟ್ ಅಭಿವೃದ್ಧಿಪಡಿಸವಂತೆ  ಜಾಥಾ ನಡೆಸಲಾಗಿದ್ದು,  ಸ್ವಯಂ ಪ್ರೇರಿತವಾಗಿ ಬಂದ್  ಮಾಡಲಾಗಿದೆ. 

ಚಿಕ್ಕಮಗಳೂರು (ಅ.04): ಚಾರ್ಮಾಡಿ ಘಾಟ್ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಕೊಟ್ಟಿಗೆ ಹಾರಿಂದ ಚಾರ್ಮಾಡಿ ಘಾಟ್ವರೆಗೆ ಜಾಥಾ ನಡೆಸಿದ್ದು, 3 ಗಂಟೆ ಕಾಲ ಕೊಟ್ಟಿಗೆ ಹಾರ ಬಂದ್ ಮಾಡಲಾಗಿದೆ. 

ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಕೊಟ್ಟಿಗೆಹಾರ ಬಂದ್ ಮಾಡಿ ಚಾರ್ಮಾಡಿ ಘಾಟ್ ಉಳಿಸಿ ಅಭಿಯಾನ ಮಾಡಲಾಗಿದೆ. 

ಕೊಟ್ಟಿಗೆಹಾರದಲ್ಲಿ ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿದೆ. 40 ಕ್ಕೂ ಹೆಚ್ಚು ಮಂದಿ ಜಾಥದಲ್ಲಿ ಭಾಗಿಯಾಗಿದ್ದರು.

ಚಾರ್ಮಾಡಿ ಘಾಟ್‌ನಲ್ಲಿ ಸಂಚರಿಸುವವರು ಇಲ್ಲೊಮ್ಮೆ ಗಮನಿಸಿ ...

ಕಳೆದ ವರ್ಷದ ಅಗಷ್ಟ್ ನಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ, ರಸ್ತೆ ಕುಸಿತವಾಗಿದ್ದು ಇಲ್ಲಿ ಲಘು ವಾಹನಗಳಿಗಷ್ಟೇ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಇನ್ನು ಘಾಟ್ ಸ್ಥಳ ಅಭಿವೃದ್ಧಿಪಡಿಸುವಂತೆ ಜಾಥಾ ವೇಳೆ ಆಗ್ರಹಿಸಲಾಗಿದೆ. ಘಾಟ್ ರಸ್ತೆ ದುರಸ್ಥಿಗೂ ಈ ವೇಳೆ ಮನವಿ ಮಾಡಲಾಗಿದೆ. 

ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆ ಇದೀಗ ಸಾಕಷ್ಟು ಹಾಳಾಗಿದೆ.