ಬೆಳಗಾವಿ(ಫೆ.01): ಉತ್ತರ ಕರ್ನಾಟಕ ಅಭಿವೃದ್ಧಿ ಹೆಸರಿನಲ್ಲಿ ಕೇವಲ ಹುಬ್ಬಳ್ಳಿ- ಧಾರವಾಡ ಅಭಿವೃದ್ಧಿಯಾಗುತ್ತಿವೆ ಎಂ ಬ ಆರೋಪ ಪ್ರತ್ಯಾರೋಪಗಳ ಬೆನ್ನಲ್ಲೆ, ಇದೀಗ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಜನರ ಮಧ್ಯ ಅಭಿವೃದ್ಧಿ ವಿಷಯವಾಗಿ ಟ್ವೀಟರ್ ವಾರ್ ನಡೆದಿದೆ. 

ಹುಬ್ಬಳ್ಳಿ, ಧಾರವಾಡ ಅಭಿವೃದ್ಧಿಯಾದಲ್ಲಿ ಇಡೀ ಉತ್ತರ ಕರ್ನಾಟಕವೇ ಅಭಿವೃದ್ಧಿಯಾದಂತೆ ಎಂಬ ಆಕ್ರೋಶ ಭರಿತ ಬರಹಗಳನ್ನು ಟ್ವೀಟರ್‌ನಲ್ಲಿ ಟ್ವೀಟ್ ಮಾಡಿದ್ದರು. ಅಲ್ಲದೇ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ವಿರುದ್ಧ ಬೆಳಗಾವಿ ಜನತೆ ಟ್ವೀಟರ್‌ನಲ್ಲಿ ಕಿಡಿಕಾರಿದ್ದರು. 

ಉತ್ತರ ಕರ್ನಾಟಕ ಅಭಿವೃದ್ಧಿ ಅಂದರೆ ಕೇವಲ ಹುಬ್ಬಳ್ಳಿ ಅಲ್ಲ ಶೆಟ್ಟರ್‌ ಸಾಹೇಬ್ರೆ!

ಈ ಹಿನ್ನೆಲೆಯಲ್ಲಿ ಬೆಳಗಾವಿ ಜನರ ನಾಡಿಮಿಡಿತವನ್ನು ಅರ್ಥೈಸಿಕೊಂಡು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಜ.29 ರಂದು ‘ಹುಬ್ಬಳ್ಳಿಗೆ ಮಾತ್ರ ಸೀಮಿತವಾದ ಉತ್ತರ ಕರ್ನಾಟಕ ಅಭಿವೃದ್ಧಿ!’ ಎಂಬ ಶಿರ್ಷಿಕೆ ಅಡಿಯಲ್ಲಿ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಇನ್ನುಳಿದ ಜಿಲ್ಲೆಗಳ ಜನರ ಭಾವನೆಗಳ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿತ್ತು. 

ಈ ವರದಿಯನ್ನು ಟ್ವೀಟರ್, ಫೇಸ್‌ಬುಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಜತೆಗೆ ಬೆಳಗಾವಿ, ಬಾಗಲಕೊಟೆ, ವಿಜಯಪುರ ಜನರು ಜಾಲತಾಣಗಳಲ್ಲಿ ಹರಿಬಿಡಲಾಗಿರುವ ವರದಿಗೆ ಬೆಂಬಲಿಸಿ, ಹುಬ್ಬಳ್ಳಿ, ಧಾರವಾಡ ಭಾಗದ ಜನಪ್ರತಿನಿಧಿಗಳ ವಿರುದ್ಧ ಕೆಂಡಕಾರಿದ್ದಾರೆ. ಇದಕ್ಕೆ ಪ್ರತಿಯಾಗಿ ಹುಬ್ಬಳಿ- ಧಾರವಾಡ ಭಾಗದ ನೆಟ್ಟಿಗರು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಮಧ್ಯೆ ಬೆಳಗಾವಿ ಹಾಗೂ ಹುಬ್ಬಳ್ಳಿ, ಧಾರವಾಡ ನೆಟ್ಟಿಗರ ಮಧ್ಯ ಟ್ವೀಟರ್ ವಾರ್ ನಡೆದಿದೆ. 

ಕೈಗಾರಿಕೆ ಭೂಮಿ ಕೂಡ ಹು-ಧಾಗೆ ಹೆಚ್ಚು: 

ಸಾಮಾಜಿಕ ಜಾಲತಾಣಗಳಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರಗೆ ಬೆಳಗಾವಿ ಜನರಿಂದ ತರಾಟೆ ಎಂದು ಟ್ವೀಟ್ ಮಾಡಲಾಗಿದೆ. ನಮ್ಮ ಭಾಗದ ಹಲವಾರು ರಸ್ತೆಗಳು ಹಳ್ಳ ಹಿಡಿದರೂ ಗಮನಿಸದ ಸಚಿವರು, ಕೈಗಾರಿಕೆಗಾಗಿ 5400 ಎಕರೆ ಭೂಬ್ಯಾಂಕ್‌ನಲ್ಲಿ 3000 ಎಕರೆ ಹುಬ್ಬಳ್ಳಿಯೊಳಗೆ ಅಂದ್ರ, ಉತ್ತರ ಕರ್ನಾಟಕದ ಉಳಿದ ಜಿಲ್ಲೆಗಳಿಗೆ ಏನ್?, ಬರೀ 100 ಎಕರೆ ಉಳಿದ ಪ್ರತಿ ಜಿಲ್ಲೆಗೆ.. ಪ್ರಹ್ಲಾದ ಜೋಶಿ ಮತ್ತ ಶೆಟ್ಟರ್ ಅವರೇ ಸ್ವಾರ್ಥ ಬಿಡಿ ಎಂದು ಕಾಲೆಳೆದಿದ್ದಾರೆ. 

ಇನ್ನು ಬೆಳಗಾವಿ ವಿಭಾಗ ಕೇಂದ್ರಕ್ಕೆ ಹೆಸ್ಕಾಂ, ಸಾರಿಗೆ ಸಂಸ್ಥೆ ಸೇರಿದಂತೆ ವಿಭಾಗೀಯ ಕಚೇರಿಗಳನ್ನು ಹಾಗೂ ಇತರೆ ಪ್ರಮುಖ ಕಚೇರಿಗಳನ್ನು ಬೆಂಗಳೂರಿನಿಂದ ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡುವಂತೆ ಒತ್ತಾಯಿಸಿರುವ ನೆಟ್ಟಿಗರು, ಬೆಳಗಾವಿ ಜನತೆಯ ಅಭಿಪ್ರಾಯವನ್ನು ಪ್ರಕಟಿಸಿದ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಉತ್ತರ ಕರ್ನಾಟ ಕದ ಅಭಿವೃದ್ಧಿ ಹೆಸರಿನಲ್ಲಿ ದನಿ ಎತ್ತಿ ನಂತರ ಎಲ್ಲ ಪ್ರಮುಖ ಯೋಜನೆ ಹಾಗೂ ಇಲಾಖೆಗಳನ್ನು ಹುಬ್ಬಳಿಗೆ ಸೀಮಿತಗೊಳಿಸುತ್ತಿರುವ ಈ ಭಾಗದ ಜನಪ್ರ ತಿನಿಧಿಗಳ ವಿರುದ್ಧ ಕಿಡಿಕಾರಿದ್ದಾರೆ. 
ಉತ್ತರ ಕರ್ನಾಟಕ ಹೆಸರಿನಲ್ಲಿ ಹುಬ್ಬಳ್ಳಿ, ಧಾರವಾಡಕ್ಕೆ ಸೀಮಿತವಾಗಿರುವ ಯೋಜನೆಗಳು, ಕಚೇರಿಗಳನ್ನು ಇನ್ನು ಳಿದ ಜಿಲ್ಲೆಗಳಿಗೆ ವಿಸ್ತರಿಸುವಂತೆ ಈ ಭಾಗದಯಾ ವೊಬ್ಬ ಜನಪ್ರತಿನಿಧಿ ದನಿ ಎತ್ತುವ ಕಾರ್ಯ ಮಾಡದಿರುವುದೇ, ಉತ್ತರ ಕರ್ನಾಟಕ ಭಾಗಕ್ಕೆ ಮಾಡಲಾಗಿರುವ ಅನ್ಯಾಯ. 

ರಾಜಕೀಯ ಲಾಭಕ್ಕಾಗಿ ಚುನಾವಣೆ ಸಂದರ್ಭದಲ್ಲಿ ಪ್ರಮುಖ ಕಚೇರಿಗಳನ್ನು ಸ್ಥಳಾಂತರ ಮಾಡುವುದಾಗಿ ಹೇಳುವ ಜನಪ್ರತಿನಿ ಧಿಗಳು, ಅಧಿಕಾರ ಸಿಕ್ಕ ನಂತರ ಈ ಭಾಗದ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡದಿ ರುವುದು ಮಾತ್ರ ವಿಪರ್ಯಾಸ. ಸದ್ಯ ಜನರು ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

* ಉತ್ತರ ಕರ್ನಾಟಕ ಅಭಿವೃದ್ಧಿ ಹೆಸರಿನಲ್ಲಿ ಕೇವಲ ಹುಬ್ಬಳ್ಳಿ- ಧಾರವಾಡ ಅಭಿವೃದ್ಧಿಯಾಗುತ್ತಿವೆ ಎಂಬ ಆರೋಪ ಪ್ರತ್ಯಾರೋಪಗಳ ಬೆನ್ನಲ್ಲೆ, ಇದೀಗ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಜನರ ಮಧ್ಯ ಅಭಿವೃದ್ಧಿ ವಿಷಯವಾಗಿ ಟ್ವೀಟರ್ ವಾರ್ ನಡೆದಿದೆ. 

* ಈ ವರದಿ ಟ್ವೀಟರ್, ಫೇಸ್‌ಬುಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು, ಬೆಳಗಾವಿ, ಬಾಗಲಕೊಟೆ, ವಿಜಯಪುರ ಜನರು ಜಾಲತಾಣಗಳಲ್ಲಿ ಹರಿಬಿಡಲಾಗಿರುವ ವರದಿಗೆ ಬೆಂಬಲಿಸಿ, ಹುಬ್ಬಳ್ಳಿ, ಧಾರವಾಡ ಭಾಗದ ಜನಪ್ರತಿನಿಧಿಗಳ ವಿರುದ್ಧ ಕೆಂಡಕಾರಿದ್ದಾರೆ.