ಕೋಲಾರ: ಕನಸಲ್ಲೂ ಬೆಚ್ಚಿ ಬೀಳುತ್ತಿರುವ ಗ್ರಾಮಸ್ಥರು..!
ದೊಡ್ಡ ಅಯ್ಯುರು ಗ್ರಾಮಕ್ಕೆ ಸೇರಿರುವ ಬೆಟ್ಟದಲ್ಲಿ ಕಳೆದ ಆರು ತಿಂಗಳಿನಿಂದ ಭಾರಿ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ಆರಂಭವಾಗಿದೆ. ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಬಳಸಿ ಬಂಡೆಗಳನ್ನು ಬ್ಲಾಸ್ಟ್ ಮಾಡುತ್ತಿರುವ ಪರಿಣಾಮ ಗುಡ್ಡನಪುರ ಗ್ರಾಮದಲ್ಲಿ 40 ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿದ್ದು, ಕೆಲ ಮನೆಗಳ ಮೇಲ್ಚಾವಣಿ ಸಹ ಕುಸಿದು ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಮೇ.26): ಆ ಗ್ರಾಮದ ಜನರು ಕಣ್ತುಂಬ ನಿದ್ದೆ ಮಾಡಿ ಅದೆಷ್ಟು ತಿಂಗಳುಗಳು ಕಳೆದಿದಿಯೋ ಗೊತ್ತಿಲ್ಲ. ಕನಸಲ್ಲೂ ಸಹ ಅದೊಂದು ವಿಚಾರ ಕಣ್ಮುಂದೆ ಬಂದ್ರೆ ಬೆಚ್ಚಿ ಬೀಳುತ್ತಾರೆ. ಯಾವಾಗ ನಮಗೆ ಏನಾಗುತ್ತೋ ಅಂತ ಜೀವ ಕೈಯಲಿಡಿದು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಮುಗಿಲೆತ್ತರಕ್ಕೆ ನಿಂತಿರುವ ಬೆಟ್ಟ, ಗುಡ್ಡಗಳ ಸಾಲು, ಸುಂದರವಾದ ಪ್ರಕೃತಿಯ ನಡುವೆ ವಾಸಿಸುತ್ತಿರುವ ಗ್ರಾಮಸ್ಥರು. ಯಾವ ಮನೆಗಳ ಗೋಡೆಗಳು ನೋಡಿದ್ರು ಬಿರುಕು, ನೋಡು ನೋಡುತಲೇ ಮೇಲ್ಚಾವಣಿ ಕುಸಿದು ಬಿದ್ದು ಗ್ರಾಮಸ್ಥರಲ್ಲಿ ಆತಂಕ. ಅಂದಹಾಗೆ ಸುಂದರವಾದ ಪ್ರಕೃತಿಯ ನಡುವೆ ಜೀವನ ಸಾಗಿಸುತ್ತಿದ್ರು ಸಹ ಗ್ರಾಮಸ್ಥರು ಮಾತ್ರ ಆತಂಕದಲ್ಲಿರುವ ಈ ದೃಶ್ಯಗಳು ಕಂಡು ಬಂದಿದ್ದು ಕೋಲಾರ ತಾಲೂಕಿನ ಅರಭಿಕೊತ್ತನೂರು ಬಳಿ ಇರುವ ಗುಡ್ಡಣಪುರ ಗ್ರಾಮದಲ್ಲಿ.
KOLAR ELECTION RESULTS 2023: ಸೋಲಿನ ಬಳಿಕ ಕಾರ್ಯಕರ್ತರಿಗೆ ಭರ್ಜರಿ ಬಿರಿಯಾನಿ ಊಟ ಹಾಕಿಸಿದ ವರ್ತೂರು ಪ್ರಕಾಶ್!
ಹೌದು, ಪಕ್ಕದ ದೊಡ್ಡ ಅಯ್ಯುರು ಗ್ರಾಮಕ್ಕೆ ಸೇರಿರುವ ಬೆಟ್ಟದಲ್ಲಿ ಕಳೆದ ಆರು ತಿಂಗಳಿನಿಂದ ಭಾರಿ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ಆರಂಭವಾಗಿದೆ. ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಬಳಸಿ ಬಂಡೆಗಳನ್ನು ಬ್ಲಾಸ್ಟ್ ಮಾಡುತ್ತಿರುವ ಪರಿಣಾಮ ಗುಡ್ಡನಪುರ ಗ್ರಾಮದಲ್ಲಿ 40 ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿದ್ದು, ಕೆಲ ಮನೆಗಳ ಮೇಲ್ಚಾವಣಿ ಸಹ ಕುಸಿದು ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲ್ಲು ಬ್ಲಾಸ್ಟ್ ಆಗುವ ರಭಸಕ್ಕೆ ಮನೆಗಳು ಅದರುತ್ತಿದ್ದು,ಮನೆಯಲ್ಲಿರುವ ಮಹಿಳೆಯರು,ಮಕ್ಕಳು ಹಾಗೂ ವೃದ್ಧರು ಜೀವ ಕೈಯಲಿಡಿದು ಜೀವನ ಸಾಗಿಸುತ್ತಿದ್ದಾರೆ. ಗ್ರಾಮದ ಬಹುತೇಕ ಜನರು ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದು, ಬಂದ ಅಲ್ಪಸ್ವಲ್ಪ ಆದಾಯದಲ್ಲಿ ಕನಸಿನ ಮನೆ,ರೇಷ್ಮೆ ಸಾಕಾಣಿಕೆಯ ಮನೆಯನ್ನು ಸಾಲಸೋಲ ಮಾಡಿ ನಿರ್ಮಿಸಿಕೊಂಡಿದ್ದಾರೆ.ಗ್ರಾಮದಿಂದ ಸುಮಾರು 500 ಮೀಟರ್ ದೂರದಲ್ಲಿ ಕಲ್ಲು ಗಣಿಗಾರಿಕೆಯ ಸ್ಪೋಟದಿಂದಾಗಿ ಗ್ರಾಮಸ್ಥರು ಕಣ್ತುಂಬ ನಿದ್ದೆ ಮಾಡ್ತಿಲ್ಲ, ಯಾವಾಗ ಏನಾಗುತ್ತೋ ಅಂತ ಜೀವ ಕೈಯಲಿಡಿದು ಜೀವನ ಸಾಗಿಸುತ್ತಿದ್ದಾರೆ.
ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಶ್ರಮಿಸುವೆ: ಶಾಸಕ ಕೆ.ವೈ.ನಂಜೇಗೌಡ
ಇನ್ನು ಸ್ಪೋಟವಾಗ್ತಿದಂತೆ ಬರುವ ಭಾರಿ ಶಬ್ದದಿಂದ ಮನೆಯಲ್ಲಿರುವ ಗೃಹಪಯೋಗಿ ವಸ್ತುಗಳು ಹಾಗೂ ಅಡಿಕೆ ಮನೆಯ ಪಾತ್ರೆ -ಪಗಾಡೆಗಳು ಅದರುತ್ತಿರೋದ್ರಿಂದ ಮನೆಯಲ್ಲಿ ಇರೋದಕ್ಕೆ ಗ್ರಾಮಸ್ಥರು ಭಯ ಪಡ್ತಿದ್ದಾರೆ. ಹಸು,ಜಾನುವಾರುಗಳು ಸಹ ಬೆಚ್ಚಿ ಬೀಳ್ತಿದ್ದು,ಬಂಡೆ ಸ್ಪೋಟಗೊಂಡಾಗ ಅದರ ಧೂಳು ಹಾಗೂ ಕಲ್ಲಿನ ಪುಡಿಗಳು ಬಂದು ಗ್ರಾಮದ ಕೆರೆಯಲ್ಲಿ ಶೇಖರಣೆ ಆಗ್ತಿದೆ, ಅದೇ ನೀರನ್ನು ಹಸುಗಳು ಹಾಗೂ ಕುರಿ ಮೇಕೆಗಳು ಕುಡಿಯುವ ಅನಿವಾರ್ಯತೆ ಇದ್ದು ಅವುಗಳು ಸಹ ಅಪಾಯದಲ್ಲಿದೆ.ಗ್ರಾಮದಲ್ಲಿ ಹೊಸದಾಗಿ ನಿರ್ಮಾಣ ಮಾಡ್ತಿರುವ ಮನೆಗಳು ಸಹ ಬಿರುಕು ಬಿಡ್ತಿರೋದ್ರಿಂದ ಕೆಲವರು ಮನೆಯ ಕಾಮಗಾರಿಯನ್ನು ನಿಲ್ಲಿಸಿದ್ದಾರೆ. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಗ್ರಾಮಸ್ಥರು ಮನವೊಲಿಕೆ ಮಾಡಿಕೊಟ್ಟಿದ್ದಾರೆ.ಕೆಲ ದಿನಗಳ ಹಿಂದೆ ಗ್ರಾಮಕ್ಕೆ ತಹಶೀಲ್ದಾರ್ ಭೇಟಿ ಕೊಟ್ಟು ಹೋಗಿದ್ದು ಬಿಟ್ಟರೆ ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ ಗ್ರಾಮಸ್ಥರು.
ಇನ್ನು ಗ್ರಾಮದ ಬಹುತೇಕ ಭೂಮಿ ಬಂಡೆಗಳಿಂದ ಆವರಿಸಿಕೊಂಡಿದೆ,ಈಗಾಗಿ 500 ಮೀಟರ್ ದೂರದಲ್ಲಿ ಬಂಡೆಗಳನ್ನು ಸ್ಪೋಟಿಸಿದರು ಸಹ ಇಷ್ಟೊಂದು ಪ್ರಮಾಣದಲ್ಲಿ ಆತಂಕ ಉಂಟು ಮಾಡಿದೆ.ಅದೇನೇ ಇರಲಿ ನೂರಾರು ವರ್ಷಗಳಿಂದ ನೆಮ್ಮದಿಯಿಂದ ಜೀವನ ಸಾಗಿಸಿಕೊಂಡು ಬಂದಿರುವ ಗ್ರಾಮಸ್ಥರ ಆತಂಕವನ್ನು ಅಧಿಕಾರಿಗಳು ದೂರ ಮಾಡಬೇಕಾಗಿದೆ.ಇಲ್ಲವಾದ್ರೆ ಮುಂದಾಗುವ ದೊಡ್ಡ ಅನಾಹುತಕ್ಕೆ ಹೊಣೆ ಆಗೋದ್ರಲ್ಲಿ ಅನುಮಾವಿಲ್ಲ.