Kolar Election Results 2023: ಸೋಲಿನ ಬಳಿಕ ಕಾರ್ಯಕರ್ತರಿಗೆ ಭರ್ಜರಿ ಬಿರಿಯಾನಿ ಊಟ ಹಾಕಿಸಿದ ವರ್ತೂರು ಪ್ರಕಾಶ್!

ವರ್ತೂರು ಪ್ರಕಾಶ್‌ ಕಾಂಗ್ರೆಸ್‌ ಪಕ್ಷದ ಕೊತ್ತೂರು ಮಂಜುನಾಥ್‌ ವಿರುದ್ದ ಸೋತಿದ್ದು, ಕೋಲಾರದಲ್ಲಿ ಆತ್ಮಾವಲೋಕನಾ ಸಭೆ ಹಮ್ಮಿಕೊಂಡಿದ್ದರು.

Kolar Election Results 2023 varthur prakash  Introspection meeting with followers gow

ಕೋಲಾರ (ಮೇ.21): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಹಲವಾರು ಘಟಾನುಘಟಿ ನಾಯಕರು ಸೋಲುಂಡಿದ್ದಾರೆ. ಇದರಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವರ್ತೂರು ಪ್ರಕಾಶ್‌ ಸಹ ಒಬ್ಬರು,ಯಾರೇ ಸ್ಫರ್ಧೆ ಮಾಡಿದ್ರು ನಾನು ಕನಿಷ್ಠ 50 ಸಾವಿರ ಮತಗಳಿಂದ ಗೆಲ್ಲುತ್ತೇನೆ ಎಂದು ಭಾರಿ ಆತ್ಮವಿಶ್ವಾಸದಿಂದ ಹೇಳ್ತಿದ್ದ ವರ್ತೂರು ಪ್ರಕಾಶ್‌ ಕಾಂಗ್ರೆಸ್‌ ಪಕ್ಷದ ಕೊತ್ತೂರು ಮಂಜುನಾಥ್‌ ವಿರುದ್ದ ಸೋಲು ಕಾಣಬೇಕಾಯ್ತು. ಹೀಗಾಗಿ ತಮ್ಮ ಸೋಲಿನ ಬಗ್ಗೆ ಪರಾಮರ್ಶೆ ಮಾಡೋದಕ್ಕೆ ಇಂದು ಕೋಲಾರ ನಗರದ ಕೋಗಿಲಹಳ್ಳಿ ಬಳಿ ಇರುವ ತಮ್ಮ ನಿವಾಸದ ಬಳಿ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆ ಕರೆದಿದ್ದರು. ಸಭೆಯಲ್ಲಿ ಹಲವಾರು ವಿಚಾರವಾಗಿ ಚರ್ಚೆ ಸಹ ಆಗಿದ್ದು,ಪ್ರಮುಖವಾಗಿ ಮುಸ್ಲಿಂ ಸಮುದಾಯದವರು ಸಂಪೂರ್ಣವಾಗಿ ಈ ಬಾರಿ ಕಾಂಗ್ರೆಸ್‌ ಗೆ ಮತ ನೀಡುವುದರ ಜೊತೆಗೆ ಕಾಂಗ್ರೆಸ್‌ ನ ಗ್ಯಾರಂಟಿ ಕಾರ್ಡ್ ಗಳಿಗೆ ಮರುಳಾಗಿ ಜನರು ಮೋಸ ಹೋಗಿ ನಮಗೇ ವೋಟು ಹಾಕಿಲ್ಲ ಈಗಾಗಿ ನಾವು ಮುಂಬರುವ ತಾಲೂಕು ಪಂಚಾಯ್ತಿ,ಜಿಲ್ಲಾ ಪಂಚಾಯ್ತಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ನಮ್ಮ ತಾಕತ್ತು ತೋರಿಸುವ ಮೂಲಕ ನಮ್ಮ ಅಸ್ಥಿತ್ವ ಉಳಿಸಿಕೊಳ್ಳಬೇಕು ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ಹಾಗೂ ಸಂಸದ ಮುನಿಸ್ವಾಮಿ ಸಭೆಯಲ್ಲಿ ಮನವಿ ಮಾಡಿದ್ರು.

ಕಾಂಗ್ರೆಸ್‌ ಪರವಾಗಿ ಮತ ಹಾಕಿರುವ ಮುಸ್ಲಿಮರ ವಿರುದ್ಧ ಸಂಸದ ಮುನಿಸ್ವಾಮಿ ವಾಗ್ದಾಳಿ!
ನಮ್ಮದೂ ಎಲ್ಲೆಲ್ಲಿ ತಪ್ಪುಗಳು ಆಗಿದೆ ಎಂದು ಗೊತ್ತಾಗಿದೆ.ನಮಗೇ ಕೋಲಾರ ವಿಧಾಸಭಾ ಕ್ಷೇತ್ರದಲ್ಲಿ 50 ಸಾವಿರಕ್ಕೂ ಹೆಚ್ಚಿಗೆ ಮತ ಹಾಕಿದ್ದಾರೆ, ಜವಬ್ದಾರಿ ಇದೆ. ವರ್ತೂರು ಪ್ರಕಾಶ್‌ ಸೋತರು ಕ್ಷೇತ್ರ ಬಿಟ್ಟು ಹೋಗಿಲ್ಲ, ವಿರೋಧ ಪಕ್ಷದವರೂ ಎಷ್ಟೇ ಹಣ ಹಂಚಿದ್ರೂ ಸಹ ನಮಗೇ ಮತ ನೀಡಿದ್ದಾರೆ. ನಗರ ಪ್ರದೇಶದ ಮತ ಎಣಿಕೆ ಬರುವವರೆಗೂ ನಾವು ಲೀಡ್‌ ನಲ್ಲಿದ್ದೆವು, ಆದ್ರೆ ನಂತರ ಹಿನ್ನಡೆ ಆಯ್ತು,ಕೋಟಿ ಖರ್ಚು ಮಾಡಿ ವರ್ತೂರು ಪ್ರಕಾಶ್‌ ಅಭಿವೃದ್ದಿ ಮಾಡಿದ್ದಾರೆ. ನಾವೂ ಅವರನ್ನು (ಮುಸ್ಲಿಮರನ್ನು)ಈಗಲೂ ದ್ವೇಷ ಮಾಡೋದಿಲ್ಲ. ಕಾಂಗ್ರೆಸ್‌ ಗೆ ಮತ ನೀಡಿರುವ ನಿಮಗೆ ಇವತ್ತಲ್ಲಾ ನಾಳೆ ಸತ್ಯದ ಅರಿವೂ ಆಗುತ್ತೆ, ನೀವೂ ಅನುಭವಿಸುತ್ತೀರಿ.

ಕಾಂಗ್ರೆಸ್‌ ಬಂದಿದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರಬಹುದು,ಡಿಕೆ ಶಿವಕುಮಾರ್‌ ಉಪ ಮುಖ್ಯಮಂತ್ರಿ ಆಗಿರಬಹುದು. ನಿಮಗೆ ಪ್ರಧಾನಿ ನರೇಂದ್ರ ಮೋದಿ ಕೊಟ್ಟಿರುವ ಸವಲತ್ತುಗಳನ್ನು ಅನುಭವಿಸಿ ಬಿಜೆಪಿಯನ್ನು ವಿರೋಧಿಸಿದ್ದೀರಿ.ನಾವೂ ನಿಮಗೆ(ಮುಸ್ಲಿಮರಿಗೆ) ಏನೂ ಮೋಸ ಮಾಡಿಲ್ಲ,ನೀವೂ ನಮ್ಮನ್ನು ವಿರೋಧ ಮಾಡಿದ್ದೀರ,ಆಗಾಗಿ ನಾವು ನಿಮ್ಮನ್ನು ವಿರೋಧ ಮಾಡ್ತೇವೆ. ನೀವು (ಮುಸ್ಲಿಮರು) ಏನೂ ಮಾಡ್ತೀರ, ನನ್ನ ಮೇಲೇ ಕೇಸ್‌ ಹಾಕ್ತೀರ ?ಹಾಕಿ ನೋ ಪ್ರಾಬ್ಲಂ ತಲೆಕೆಡಿಸಿಕೊಳ್ಳೊದಿಲ್ಲ! ಸಂಘ ಪರವಾರಕ್ಕಾಗಿ ಎಷ್ಟೇ ಜನರು ಪ್ರಾಣ ಕಳೆದುಕೊಂಡಿದ್ದಾರೆ,ನಿಮ್ಮ ಗೊಡ್ದು ಬೆದರಿಕೆಗಳಿಗೆ ಹೆದರೋದಿಲ್ಲ. ನಾವೂ ಭಷ್ಟಾಚಾರ ಮಾಡಿಲ್ಲಇನ್ನು ಮುಂದೆ ನಿಮ್ಮ ಆಟ ಆಡೋದಕ್ಕೆ ಕೋಲಾರದಲ್ಲಿ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ ಸಂಸದ ಮುನಿಸ್ವಾಮಿ.

ಮಣ್ಣು ತಿನ್ನೋಕೆ ಜನರು ವೋಟು ನೀಡಿದ್ದಾರೆ: ವರ್ತೂರು ಪ್ರಕಾಶ್‌
ಚುನಾವಣೆಯಲಿ ಏನೇ ತಪ್ಪು ಆಗಿದ್ರೂ ಕೆಲವರನ್ನು ದೂಷಿಸೋದು ಬೇಡ. ನಾನಾ ಕಾರಣ ಹಾಗೂ ಒತ್ತಡಗಳಿಂದ ತಪ್ಪುಗಳಾಗಿದೆ ಅವರನ್ನು ಭಗವಂತ ನೋಡಿಕೊಳ್ತಾನೆ. 220 ಹಳ್ಳಿಗಳಲ್ಲಿ ಬಿಜೆಪಿ ಪಕ್ಷಕ್ಕೆ ಲೀಡ್‌ ಬಂದಿದೆ. ಮತದಾನದ ದಿನ ಸಂಜೆ 6 ಗಂಟೆ ಬಳಿಕ ಜೆಡಿಎಸ್‌ ಪಕ್ಷದವರು ಎರಡೂವರೆ ಕೋಟಿ ಹಣ ಹಂಚಿದ್ದಾರೆ, ಹಣ ತೆಗೆದುಕೊಂಡು ಕಾಂಗ್ರೆಸ್‌ ಗೆ ಮತ ಹಾಕಿದ್ರು (ಮುಸ್ಲಿಮರು) ಇದರಿಂದ ಕಾಂಗ್ರೆಸ್‌ ಗೆ 10  ಪರ್ಸೆಂಟ್ ಮತ ಹೆಚ್ಚಿಗೆ ಬಂದಿದೆ. ಸಾಕಷ್ಟೂ ತಪ್ಪು ಜೆಡಿಎಸ್‌ ನಿಂದ ಆಗಿದೆ. ಮುಸ್ಲಿಂ ಏರಿಯಾಗಳಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಕ್ಕೆ ಏಜೆಂಟ್‌ ಗಳಿರಲಿಲ್ಲ, ಹಿಂದೂಗಳು ಇರುವ ಕಡೆ ಬಿಜೆಪಿ ಪಕ್ಷ ಲೀಡ್‌ ನಲ್ಲಿತ್ತು. ಒಕ್ಕಲಿಗರ ಸಾಮ್ರಾಜ್ಯ ಇರುವ ಬೂತ್‌ ಗಳಲ್ಲೂ ಬಿಜೆಪಿಗೆ ಹೆಚ್ಚಿಗೆ ಮತ ಬಂದಿದೆ.15 ದಿನಗಳಲ್ಲಿ ಹೇಗೆ ಚುನಾವಣೆ ಗೆಲ್ಲಬೇಕು ಎಂದು ಕಾಂಗ್ರೆಸ್‌ ನ ಕೊತ್ತೂರು ಮಂಜುನಾಥ್‌ ನನಗೆ ಮಾರ್ಗದರ್ಶನ ಮಾಡಿದ್ದಾರೆ. ನಾನು ಅವರಂತೆ ಚನಾವಣೆ ಮಾಡಿ ಶಾಸಕನಾಗಿದ್ದೆ, ಆದ್ರೆ ಈ ಬಾರಿ ನನಗೆ ಆತ್ಮವಿಶ್ವಾಸ ಇತ್ತು ಪೆಟ್ಟು ಬಿದಿದ್ದೆ.ಹುಲಿಗೆ ಬೇಟೆ ಆಡೋದನ್ನು ಕಲಿಸೋಕೆ ಆಗುತ್ತಾ,ಹುಟ್ಟುತ್ತಲೇ ಬಂದಿರುತ್ತೆ.

ಸಿದ್ದರಾಮಯ್ಯ ಮನೆ, ನನ್ನ ಮನೆ ಸುತ್ತುತ್ತ ಇರಬೇಡಿ: ಡಿಸಿಎಂ ಆಗ್ತಿದ್ದಂತೆ ಡಿಕೆಶಿ ಫುಲ್‌ ವೈಲೆಂಟ್‌ !

ಬಿಜೆಪಿ ಸೋಲೋದಕ್ಕೆ ಕಾಂಗ್ರೆಸ್‌ ನೀಡಿರುವ ಗ್ಯಾರಂಟಿಗಳಿಗೆ ಕಾರಣ,ಇದಕ್ಕೆ ಯಾಮಾರಿ ಜನರು ಮತ ಹಾಕಿದ್ದಾರೆ, ಬಿಜೆಪಿ ಮಾಡಿರುವ ಅಭಿವೃದ್ದಿಗೆ ಕರ್ನಾಟಕದ ಜನ ಮತ ನೀಡಿಲ್ಲ,ಮಣ್ಣು ತಿನ್ನೋಕೆ ಜನರು ವೋಟು ನೀಡಿದ್ದಾರೆ. ವೋಟುಗಳಿಗೆ ಹಣ ಕೊಟ್ಟು ಗೊಲ್ಲೋದಲ್ಲಾ,ಪ್ರೀತಿಯಿಂದ ಗೆಲ್ಲಬೇಕು.ಎಲ್ಲಾ ಜಾತಯವರು ಕಾಂಗ್ರೆಸ್‌ ನ ಗ್ಯಾರಂಟಿ ಕಾರ್ಡ್ ಗೆ ಯಾಮಾರಿದ್ದಾರೆ. ಜಿಲ್ಲೆಯ ಘಟಬಂದನ್‌ ಟೀಂ ಕೊತ್ತೂರು ಮಂಜುನಾಥ್‌ ಗೆದ್ದಿಲ್ಲ,ಗ್ಯಾರಂಟಿ ಕಾರ್ಡ್ ಗೆಲ್ಲಿಸಿದೆ.ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚಿಗೆ ಮತ ಪಡೆದ ಕಾರಣ ಜೆಡಿಎಸ್‌ ಸೋತು ಕಾಂಗ್ರೆಸ್‌ ಗೆದ್ದಿದೆ. ಒಕ್ಕಲಿಗರ ಸಾಮ್ರಾಜ್ಯದಲ್ಲಿ ಬಿಜೆಪಿಗೆ ಮತ ಬಂದಿದೆ. ಜನರಿಗೆ ದಿಕ್ಕು ತಪ್ಪಿಸಿ ಕಾಂಗ್ರೆಸ್‌ ಗೆದ್ದಿದೆ,ಇದರ ಫಲ ನೀವು ಅನುಭವಿಸುತ್ತೀರ ಎಂದು ಗುಡುಗಿದ ವರ್ತೂರು ಪ್ರಕಾಶ್‌.

ಸಚಿವ ಎಂ.ಬಿ. ಪಾಟೀಲ್‌ಗೆ ಎಚ್ಚರಿಕೆ ಕೊಟ್ಟ ಡಿಸಿಎಂ: ಡೋಂಟ್ ಡಿಸ್ಟರ್ಪ್ ಎಂದ ಡಿಕೆಶಿ !

ಚುನಾವಣೆಯಲ್ಲಿ ಸೋತರು ತಮ್ಮ ಕಾರ್ಯಕರ್ತ ರಿಗೆ ಚಿಕನ್‌ ಬರಿಯಾನಿ!
ಇನ್ನು ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ಜನರು ಭಾಗವಹಿಸಿದ್ರು,ಸೋಲಿಗೆ ತಮ್ಮದೆ ಆದ ಕಾರಣ ನೀಡುವ ಮೂಲಕ ನಾವು ನಿಮ್ಮನ್ನು ಬಿಟ್ಟು ಹೋಗೋದಿಲ್ಲ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ರು,ಇನ್ನು ಚುನಾವಣೆಯಲ್ಲಿ ಸೋತರು ಸಹ ಎಂದಿನಂತೆ ತಮ್ಮ ಕಾಯಕ್ರಮಕ್ಕೆ ಬಂದ ಬೆಂಬಲಿಗರಿಗೆ ಭರ್ಜರಿ ಚಿಕನ್‌ ಬಿರಿಯಾನಿ ವ್ಯವಸ್ಥೆಯನ್ನು ವರ್ತೂರು ಪ್ರಕಾಶ್‌ ಆಯೋಜನೆ ಮಾಡಿದ್ರು,ಬಿರಿಯಾನಿ ಗಾಗಿ ಒಬ್ಬರ ಮೇಲೊಬ್ಬರು ಬಿದ್ದು ಕಿತ್ತಾಡಿಕೊಂಡರೇ,ಇನ್ನು ಕೆಲವರೂ ಮನೆಗೂ ಪಾರ್ಸಲ್‌ ತೆಗೆದುಕೊಂಡು ಹೋದ್ರು..

Latest Videos
Follow Us:
Download App:
  • android
  • ios