ಕೊಪ್ಪಳ: ಗಣೇಶ ಮೂರ್ತಿಗಳನ್ನ ಚರಂಡಿಗೆ ಸುರಿದ ನಗರಸಭೆ ಸಿಬ್ಬಂದಿ

ನಗರಸಭೆ ಸಿಬ್ಬಂದಿ ವಿರುದ್ಧ ಸ್ಥಳೀಯರ ಆಕ್ರೋಶ| ಕೊಪ್ಪಳದಲ್ಲಿ ನಗರಸಭೆ ಸಿಬ್ಬಂದಿಯ ಮಾಹಾ ಯಡವಟ್ಟು|ಗಣೇಶನ ಮೂರ್ತಿಗಳನ್ನು ಚರಂಡಿಯಲ್ಲಿ ಸುರಿದು ಹೋದ ನಗರಸಭೆ ಸಿಬ್ಬಂದಿ| 

People Anger on Municipal Staff in Koppal

ಕೊಪ್ಪಳ(ಆ.23): ಚರಂಡಿಯಲ್ಲಿ ಗಣೇಶನ ಮೂರ್ತಿಗಳನ್ನು ಹಾಕಿದ ನಗರಸಭೆ ಸಿಬ್ಬಂದಿ ವಿರುದ್ಧ ಸ್ಥಳೀಯರು ರೊಚ್ಚಿಗೆದ್ದ ಘಟನೆ ನಗರದ ಬಿ ಟಿ ಪಾಟೀಲ್ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. ನಗರಸಭೆ ಸಿಬ್ಬಂದಿಯ ಮಾಹಾ ಯಡವಟ್ಟಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. 

ನಗರದ ಸಿದ್ದಿವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ನಗರಸಭೆಯವರು ಸಾರ್ವಜನಿಕ ಗಣೇಶನ ವಿಸರ್ಜನೆಗೆ ಬ್ಯಾರಲ್ ಇಟ್ಟಿದ್ದರು. ನಿನ್ನೆ(ಶನಿವಾರ) ರಾತ್ರಿ ಬ್ಯಾರರ್‌ನಲ್ಲಿ ಗಣೇಶನ ಮೂರ್ತಿಗಳನ್ನು ಹಾಕಿ ವಿರ್ಜಿಸಿದ್ದರು. 

ಕೊಪ್ಪಳ: ವೆಂಟಿಲೇಟರ್‌ ಸಮಸ್ಯೆಯಿಂದಲೇ ಹಲವರ ಸಾವು!

ಇಂದು ಬೆಳಿಗ್ಗೆ ಬ್ಯಾರಲ್‌ನಲ್ಲಿದ್ದ ಗಣೇಶನ ಮೂರ್ತಿಗಳನ್ನು ನಗರಸಭೆ ಸಿಬ್ಬಂದಿ ಚರಂಡಿಯಲ್ಲಿ ಸುರಿದು ಹೋಗಿದ್ದಾರೆ.  ನಗರಸಭೆಯವರ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಗಣೇಶನ ಮೂರ್ತಿಗಳು, ಹೂವಿನ ಹಾರಗಳು ಚರಂಡಿಯಲ್ಲಿಯೇ ಬಿದ್ದಿವೆ. ಇದನ್ನು ನೋಡಿದ ಸಾರ್ವಜನಿಕರು ನಗರಸಭೆ ವಿರುದ್ಧ ಕಿಡಿಕಾರಿದ್ದಾರೆ. 

Latest Videos
Follow Us:
Download App:
  • android
  • ios