ಅನರ್ಹರಿಗೆ ಪಿಂಚಣಿ ಸೌಲಭ್ಯ: ಕ್ರಮ ಕೈಗೊಳ್ಳಲು ಗ್ರಾಮಸ್ಥರು ಮನವಿ

  • ಪಿಂಚಣಿಯ ಸೌಲಭ್ಯಗಳನ್ನು ಅನರ್ಹರಿಗೆ ವಿತರಿಸಿದ ತಾವರಗೇರಾ ನಾಡಕಚೇರಿ ಉಪತಹಸೀಲ್ದಾರ್
  • ಕಂದಾಯ ಇಲಾಖೆ ವತಿಯಿಂದ ದೊರೆಯುವ ಪಿಂಚಣಿ ಅನರ್ಹರ ಪಾಲು
  • ಸೂಕ್ತ ಕ್ರಮಕ್ಕೆ ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ಅವರಿಗೆ ದೂರು.
Pension facility for ineligibl Villagers request to take action at kushtagi tavaragera

ದೋಟಿಹಾಳ (ಆ.22) : ಕುಷ್ಟಗಿ ತಾಲೂಕಿನ ತಾವರಗೇರಾ ನಾಡಕಚೇರಿಯ ಉಪತಹಸೀಲ್ದಾರ್‌ ವಿಜಯಾ ಮುಂಡರಗಿ ಅವರು ಕಂದಾಯ ಇಲಾಖೆ ವತಿಯಿಂದ ದೊರೆಯುವ ಪಿಂಚಣಿಯ ಸೌಲಭ್ಯಗಳನ್ನು ಅನರ್ಹರಿಗೆ ವಿತರಿಸಿದ್ದು, ಎಲ್ಲ ಆದೇಶ ಪತ್ರ ಹಿಂಪಡೆದು ರದ್ದುಪಡಿಸಬೇಕು. ತಪ್ಪು ಮಾಡಿದ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ತಹಸೀಲ್ದಾರ್‌ ಗುರುರಾಜ ಚಲುವಾದಿ, ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ಅವರಿಗೆ ದೂರು ಸಲ್ಲಿಸಿದರು. ತಾವರಗೇರಾ ಹೋಬಳಿ ವ್ಯಾಪ್ತಿಆಯ ಅಡವಿಬಾವಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ತಹಸೀಲ್ದಾರರ ಗ್ರಾಮ ವಾಸ್ತವ್ಯದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಮಸ್ಯೆಗಳ ಸುರಿಮಳೆಯನ್ನೇ ಸುರಿಸಿದರು.

ಅಟಲ್ ಪಿಂಚಣಿ ಯೋಜನೆ ನಿಯಮ ಬದಲಾವಣೆ;ಇವರಿಗಿಲ್ಲ ಫಲಾನುಭವಿಯಾಗೋ ಭಾಗ್ಯ

ತಾವರಗೇರಾ(Tavaragera) ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 300ಕ್ಕೂ ಅಧಿಕ ಜನ ಅನರ್ಹರಿಗೆ ಪಿಂಚಣಿಯ ಸೌಲಭ್ಯವನ್ನು ಅಧಿಕಾರಿಯು ಒದಗಿಸಿಕೊಟ್ಟಿದ್ದಾರೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ತನಿಖೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್‌ ಗುರುರಾಜ ಚಲುವಾದಿ ಮಾತನಾಡಿ, ಈಗಾಗಲೆ ಈ ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲನೆಯನ್ನು ಮಾಡಲಾಗಿದ್ದು, ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವವರು ತಮ್ಮ ದಾಖಲೆಗಳನ್ನು ತಿದ್ದುಪಡಿಯನ್ನಾಗಿ ನಕಲಿ ಮಾಡಿ ಅರ್ಜಿಯನ್ನು ಸಲ್ಲಿಸಿರುವುದು ಕಂಡುಬಂದಿದೆ. ಈಗಾಗಲೇ ಸುಮಾರು 30 ಜನ ಅನರ್ಹ ಫಲಾನುಭವಿಗಳಿಗೆ ನೀಡಿದ್ದ ಮಂಜೂರಾತಿಯನ್ನು ಕಡಿತಗೊಳಿಸಲಾಗಿದೆ. ಜತೆಗೆ ಅನರ್ಹ ಫಲಾನುಭವಿಗಳು ಮಧ್ಯವರ್ತಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.

ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ(Amaregowda Patil Bhaiapur) ಮಾತನಾಡಿ, ಅನರ್ಹರು ಪಡೆದುಕೊಂಡಿರುವ ಸೌಲಭ್ಯಗಳನ್ನು ಪಡೆದುಕೊಂಡಿರುವ ಆದೇಶವನ್ನು ರದ್ದುಪಡಿಸಬೇಕು. ಸೌಲಭ್ಯವನ್ನು ಒದಗಿಸಿಕೊಟ್ಟಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರರಿಗೆ ಸೂಚಿಸಿದರು.

ಪಿಂಚಣಿ ಇಲ್ಲ, ತುತ್ತು ಅನ್ನಕ್ಕಾಗಿ ಬಿಪಿಎಲ್ ಕಾರ್ಡನ್ನು ಆಶ್ರಯಿಸಿದ ಮಾಜಿ ಶಾಸಕ!

ಮನವಿಪತ್ರ: ಸಭೆಯಲ್ಲಿ ಅಕ್ರಮ ಮದ್ಯ ಮಾರಾಟ, ವಿದ್ಯುತ್‌ ಸಮಸ್ಯೆ, ಗ್ರಾಮದಲ್ಲಿನ ಚರಂಡಿ, ಸಿಸಿ ರಸ್ತೆ ಸೇರಿದಂತೆ ಇತರೆ ಗ್ರಾಮಗಳ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಶಾಸಕರಿಗೆ ಮನವಿ ಪತ್ರಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕಾಧಿಕಾರಿ ಶಿವಪ್ಪ ಸುಭೆದಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮರೇಶ ಹಾವಿನ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ, ಜುಮಾಲಾಪುರ ಗ್ರಾಪಂ ಅಧ್ಯಕ್ಷರು ಸೇರಿದಂತೆ ಜನಪ್ರತಿನಿಧಿಗಳು ಅಧಿಕಾರಿಗಳು ಗ್ರಾಮಸ್ಥರು ಇದ್ದರು.

Latest Videos
Follow Us:
Download App:
  • android
  • ios