ಉಡುಪಿ(ಅ.05): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೇಜಾವರ ಶ್ರೀಗಳು ಪತ್ರ ಬರೆದು ರಾಜ್ಯಕ್ಕೆ ಶೀಘ್ರ ನೆರೆ ಪರಿಹಾರಧನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದರು.

ಪತ್ರದ ಸಾರಾಂಶ ಹೀಗಿದೆ:

ರಾಷ್ಟ್ರ ಮತ್ತು ವಿಶ್ವದ ನಾಯಕರಾಗಿ ತಾವು ಮಾಡುತ್ತಿರುವ ಕೆಲಸದಿಂದ ನಮಗೆ ಸಂತುಷ್ಟಿಯಾಗಿದೆ. ನಿಮ್ಮ ಜನಕಲ್ಯಾಣ ಯೋಜನೆಗಳು, ಕಾಶ್ಮೀರದ ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಧಾರ, ಆರ್ಥಿಕ ನೀತಿಗಳ ಬಗ್ಗೆ ನಮಗೆ ಹೆಮ್ಮೆಯೂ ಇದೆ. ನಿಮ್ಮ ಕೆಲಸಗಳಿಂದ ತಾವು ಭಾರತೀಯರ ಪ್ರೀತಿ ಗಳಿಸಿದ್ದೀರಿ ಎಂದು ಕೊಂಡಾಡಿರುವ ಪೇಜಾವರ ಶ್ರೀಗಳು, ನಿಮ್ಮ ನೇತೃತ್ವದಲ್ಲಿ ಭಾರತದ ಸಮಗ್ರ ಅಭಿವೃದ್ಧಿಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

ಕಂಡಕ್ಟರ್ ಟಿಕೆಟ್ ಕೊಡಲ್ವಾ..? ಹಾಗಾದ್ರೆ ಉಚಿತವಾಗಿ ಪ್ರಯಾಣಿಸಿ

ಆದರೆ ಕರ್ನಾಟಕದಲ್ಲಿ ಪ್ರವಾಹದಿಂದ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಲಕ್ಷಾಂತರ ಜನರ ಮನೆಗಳು ನಾಶವಾಗಿದೆ, ಜನರು ನಿಮ್ಮ ನೆರವಿಗಾಗಿ ಆಸೆಗಣ್ಣಿನಿಂದ ನಿರೀಕ್ಷಿಸುತ್ತಿದ್ದಾರೆ. ನಾವು ಕೂಡಾ ತಾವು ಪರಿಹಾರ ಘೋಷಿಸುವುದನ್ನು ಕಾಯುತ್ತಿದ್ದೇವೆ. ಆದ್ದರಿಂದ ಕರ್ನಾಟಕಕ್ಕೆ ಅತಿ ಶೀಘ್ರ ಆರ್ಥಿಕ ಸಹಾಯ ಘೋಷಿಸುವಿರಿ ಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದು ಶ್ರೀಗಳು ಆಶಿಸಿದ್ದಾರೆ.

ಸೂರ್ಯನ ಸುತ್ತ ಉಂಗುರ, ಉಡುಪಿಯಲ್ಲಿ ಕಂಡ ‘ರವಿಕ್ರಾಂತ' ಯುದ್ಧ ರಹಸ್ಯ!

ಪರಿಹಾರ ಕೊಟ್ಟರೆ ಕರ್ನಾಟಕದ ಜನರಲ್ಲಿ ತಮ್ಮ ಬಗ್ಗೆ ಪ್ರೀತಿ, ಗೌರವ ಇನ್ನೂ ಹೆಚ್ಚುತ್ತದೆ ಎಂದಿರುವ ಶ್ರೀಗಳು, ಜೊತೆಗೆ ಮಹಾರಾಷ್ಟ್ರ, ಗುಜರಾತ್‌, ಬಿಹಾರದ ಪ್ರವಾಹ ಪೀಡಿತ ಜನರಿಗೂ ಪರಿಹಾರ ಘೋಷಿಸಿ ಎಂದೂ ಸಲಹೆ ಮಾಡಿದ್ದಾರೆ. ಎಲ್ಲವನ್ನೂ ತಾವು ಅರಿತಿದ್ದೀರಿ...ನಾನು ಇನ್ನೇನು ಬರೆಯಲಿ. ಮೋದಿಯವರಿಗೆ ಶುಭಾಶಿರ್ವಾದಗಳು ಎಂದು ಶ್ರೀಗಳು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.