‘ರಾಷ್ಟ್ರಸಂತ’ ಉಡುಪಿ ವಿಶ್ವೇಶ ತೀರ್ಥರಿಗೆ ಮರಣೋತ್ತರ ಗೌರವ

‘ರಾಷ್ಟ್ರ ಸಂತ, ಸಂತರ ಸಂತ’ ಎಂದು ಕರೆಯಲ್ಪಡುವ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ಗೌರವಗಳಲ್ಲೊಂದಾದ ಪದ್ಮವಿಭೂಷಣ ಪ್ರಶಸ್ತಿ ಬಂದಿದೆ.

Pejawar Swamiji awarded Padma Vibhushan posthumously

ಉಡುಪಿ(ಜ.26): ‘ರಾಷ್ಟ್ರ ಸಂತ, ಸಂತರ ಸಂತ’ ಎಂದು ಕರೆಯಲ್ಪಡುವ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು ತಿಂಗಳ ಹಿಂದೆ (ಡಿ.29, 2019) ಕೃಷ್ಣಕ್ಯರಾಗಿದ್ದಾರೆ.

ಉಡುಪಿಯ ಅಷ್ಟಮಠಗಳು ಮಾತ್ರವಲ್ಲದೆ ನಾಡಿನಾದ್ಯಂತ ಮಠ-ಮಾನ್ಯಗಳ ಪಾಲಿಗೆ ಹಿರಿಯಜ್ಜನೇ ಆಗಿದ್ದ ಶ್ರೀಗಳ ಅಗಲಿಕೆಯ ನೋವು ಭಕ್ತರ ಮನಸ್ಸಲ್ಲಿ ಇನ್ನೂ ಮಾಸಿಲ್ಲ. ಅಷ್ಟರಲ್ಲೇ ಶ್ರೀಗಳಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ಗೌರವಗಳಲ್ಲೊಂದಾದ ಪದ್ಮವಿಭೂಷಣ ಪ್ರಶಸ್ತಿ ಬಂದಿರುವುದು ಭಕ್ತರ ಮನಸ್ಸಿನಲ್ಲಿ ಮನೆಮಾಡಿದ್ದ ದುಗುಡವನ್ನು ಕೊಂಚ ಮಟ್ಟಿಗೆ ಮರೆಮಾಚಿಸಿದೆ.

ಕಿತ್ತಳೆ ಮಾರಿ ಶಿಕ್ಷಣ ದೇಗುಲ ಕಟ್ಟಿದ ಅಕ್ಷರ ಸಂತನಿಗೆ ಪದ್ಮಶ್ರೀ

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜ ಹಾಗೂ ಧರ್ಮದ ಸೇವೆ ಮಾಡುತ್ತಿದ್ದ, ಸರ್ವ ಧರ್ಮೀಯರಿಗೂ ಪ್ರಿಯರಾಗಿದ್ದ ಪೇಜಾವರ ಶ್ರೀಗಳು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟಗ್ರಾಮ ರಾಮಕುಂಜದಲ್ಲಿ(1931ರ ಏ.27ರಂದು). 1938ರಲ್ಲಿ 8ನೇ ವಯಸ್ಸಿನಲ್ಲೇ ಆಗಿನ ಪೇಜಾವರ ಮಠದ ಹಿರಿಯ ಶ್ರೀಗಳಾದ ವಿಶ್ವಮಾನ್ಯ ತೀರ್ಥರಿಂದ ಹಂಪಿಯ ಚಕ್ರತೀರ್ಥದಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿದವರು. ಆ ಕಾಲದ ಮಹಾಪಂಡಿತರಾಗಿದ್ದ ಭಂಡಾರಕೇರಿ ಮಠದ ಶ್ರೀ ವಿದ್ಯಾಮಾನ್ಯತೀರ್ಥರಿಂದ ಆಧ್ಯಾತ್ಮಿಕ-ವೇದಾಂತ-ನ್ಯಾಯಸುಧಾ-ಶಾಸ್ತ್ರ ಶಿಕ್ಷಣ ಪಡೆದ ವಿಶ್ವೇಶ ತೀರ್ಥರು, ಮುಂದೆ ಗುರುಗಳನ್ನೂ ಮೀರಿಸುವ ಪಂಡಿತರಾದರು. ಉಡುಪಿಯ ಅಷ್ಠ ಮಠಗಳಲ್ಲೇ ಐದು ಬಾರಿ ಪರಾರ‍ಯಯ ಪೂರ್ತಿಗೊಳಿಸಿದ ಶ್ರೀಗಳಿದ್ದರೆ ಅದು ವಿಶ್ವೇಶ ತೀರ್ಥರು ಮಾತ್ರ.

ಚಿದು ಬಂಧಿಸಲು ಗೋಡೆ ಹಾರಿದ್ದ ಅಧಿಕಾರಿಗೆ ಪದಕ!

ಅಸ್ಪೃಶ್ಯತೆ ನಿವಾರಣೆ, ಪರಿಸರ ಹೋರಾಟ, ಅಯೋಧ್ಯೆ ಹೋರಾಟದಲ್ಲಿ ಗುರುತಿಸಿಕೊಂಡ ಪೇಜಾವರ ಶ್ರೀಗಳು ದೇಶಾದ್ಯಂತ ಭಕ್ತರನ್ನು ಹೊಂದಿದ್ದವರು. ಕರ್ನಾಟಕ ಮಾತ್ರವಲ್ಲದೆ ದೂರದ ಬಿಹಾರ, ಉತ್ತರ ಪ್ರದೇಶ, ಗುಜರಾತ್‌ನಂಥ ರಾಜ್ಯಗಳಲ್ಲೂ ಅತಿವೃಷ್ಟಿ, ಅನಾವೃಷ್ಟಿಯಿಂದ ಜನ ಸಂಕಷ್ಟಕ್ಕೆ ಸಿಲುಕಿದಾಗ ಶ್ರೀಗಳು ನೆರವಿಗೆ ಧಾವಿಸಿದ್ದರು. ಕರ್ನಾಟಕದಲ್ಲಿ ಅತಿವೃಷ್ಟಿಯಿಂದಾಗಿ ಜನ ಮನೆ-ಮಠ ಕಳೆದುಕೊಂಡಾಗ ಮಠದ ವತಿಯಿಂದ ಮನೆ ಕಟ್ಟಿಕೊಟ್ಟಿದ್ದರು.

ಅಸ್ಪೃಶ್ಯತೆ ವಿರುದ್ಧ ಹೋರಾಟ:

ರಾಜ್ಯದ ವಿವಿಧೆಡೆ ದಲಿತ ಕೇರಿಗಳಿಗೆ ತೆರಳಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ್ದು, ಅಸ್ಪೃಶ್ಯತೆ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯದಲ್ಲೂ ಪೇಜಾವರರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮಲೆನಾಡಿನಲ್ಲಿ ನಕ್ಸಲಿಂನತ್ತ ವಾಲುತ್ತಿದ್ದಾಗ ಸರ್ಕಾರವನ್ನು ಎಚ್ಚರಿಸಿ, ಸ್ವತಃ ತಾವೇ ಮುಂದೆ ನಿಂತು ಹಿಂದುಳಿದ ಕಾಡಂಚಿನ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಕೃಷ್ಣ ಮಠದ ಆವರಣದಲ್ಲೇ ಮುಸ್ಲಿಮರಿಗೆ ಸೌಹಾರ್ದ ಕೂಟ ಆಯೋಜಿಸಿ ಹೊಸ ಮನ್ವಂತರಕ್ಕೆ ಕಾರಣವಾಗಿದ್ದರು. 2016ರಲ್ಲಿ ಶ್ರೀಗಳು ತಮ್ಮ ಐದನೇ ಪರ್ಯಾಯೋತ್ಸವದ ಸಂದರ್ಭದಲ್ಲಿ ಕ್ಷತ್ರಿಯ ಮತ್ತು ದಲಿತರೊಬ್ಬರಿಗೆ ದೀಕ್ಷೆ ನೀಡುವ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದರು. ತತ್ವಶಾಸ್ತ್ರದಲ್ಲಿ ವಿಶೇಷ ಪಾಂಡಿತ್ಯಗಳಿಸಿದ್ದ ಶ್ರೀಗಳು ತಮ್ಮ ಉಪನ್ಯಾಸಗಳ ಮೂಲಕ ಭಕ್ತರ ಮನಸ್ಸನ್ನು ಮುಟ್ಟಿದ್ದವರು. ಇವರು ನೀಡಿದ ಅನೇಕ ಉಪನ್ಯಾಸಗಳು ಗೀತಾ ಸಾರೋ​ದ್ಧಾರ, ಶ್ರೀಮ​ಧ್ವಾ​ಗ​ಮ​ಸಾ​ರ, ಸಂದೇ​ಶದ ಕಥೆ​ಗಳು, ನ್ಯಾಯಾ​ಮೃತ ನವನೀತ (ಸಂಸ್ಕೃ​ತ​) ಸೇರಿ 15ಕ್ಕೂ ಹೆಚ್ಚು ಕೃತಿಗಳ ರೂಪದಲ್ಲಿ ಪ್ರಕಟವಾಗಿವೆ.

Latest Videos
Follow Us:
Download App:
  • android
  • ios