Asianet Suvarna News Asianet Suvarna News

ಉಡುಪಿ: ರಾ.ಹೆ.ಮೇಲ್ಸೇತುವೆಯಲ್ಲಿ ಪೇಜಾವರ ಶ್ರೀ ಹೆಸರಿನ ಫಲಕ!

ಬೆಂಗಳೂರಿನ ಯಲಹಂಕ ಮೇಲ್ಸೆತುವೆಗೆ ಮತ್ತು ಮಂಗಳೂರಿನ ಫ್ಲೈಓವರ್‌ಗಳಿಗೆ ಸಾವರ್ಕರ್‌ ಹೆಸರಿಡುವ ಬಗ್ಗೆ ವಿವಾದಗಳೆದ್ದಿರುವ ಮಧ್ಯೆ, ಉಡುಪಿಯ ಕರಾವಳಿ ಬೈಪಾಸ್‌ ಮೇಲ್ಸೇತುವೆಗೆ ಯಾರೋ ಅನಾಮಿಕರು ಪೇಜಾವರ ಶ್ರೀಗಳ ಹೆಸರು ನಾಮಕರಣ ಮಾಡಿದ್ದಾರೆ.

Pejavara Sri name in udupi national highway flyover
Author
Bangalore, First Published Jun 7, 2020, 7:52 AM IST

ಉಡುಪಿ(ಜೂ.07): ಬೆಂಗಳೂರಿನ ಯಲಹಂಕ ಮೇಲ್ಸೆತುವೆಗೆ ಮತ್ತು ಮಂಗಳೂರಿನ ಫ್ಲೈಓವರ್‌ಗಳಿಗೆ ಸಾವರ್ಕರ್‌ ಹೆಸರಿಡುವ ಬಗ್ಗೆ ವಿವಾದಗಳೆದ್ದಿರುವ ಮಧ್ಯೆ, ಉಡುಪಿಯ ಕರಾವಳಿ ಬೈಪಾಸ್‌ ಮೇಲ್ಸೇತುವೆಗೆ ಯಾರೋ ಅನಾಮಿಕರು ಪೇಜಾವರ ಶ್ರೀಗಳ ಹೆಸರು ನಾಮಕರಣ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಈ ಬೈಪಾಸ್‌ ಮೇಲ್ಸೇತುವೆಯ ಮೇಲೆ ಶನಿವಾರ ಪೇಜಾವರ ಶ್ರೀ ವಿಶ್ವೇಶ್ವತೀರ್ಥ ಮೇಲ್ಸೇತುವೆ ಎಂಬ ಬೋರ್ಡು ಪ್ರತ್ಯಕ್ಷವಾಗಿದೆ. ಆದರೆ, ಜಿಲ್ಲಾಡಳಿತವಾಗಲಿ, ಉಡುಪಿಯ ಜನಪ್ರತಿನಿಧಿಗಲಾಗಿ ಈ ಬಗ್ಗೆ ಯಾವುದೇ ಪ್ರಸ್ತಾಪವನ್ನು ಹೊಂದಿಲ್ಲ ಅಥವಾ ಈ ಮೇಲ್ಸೆತುವೆಗೆ ಪೇಜಾವರ ಶ್ರೀಗಳ ಹೆಸರಿಡುವ ಬಗ್ಗೆ ಸಾರ್ವಜನಿಕರಲ್ಲಿಯೂ ಅಭಿಪ್ರಾಯ ವ್ಯಕ್ತವಾಗಿಲ್ಲ.

ದಕ್ಷಿಣ ಕನ್ನಡ: ಕೊರೋನಾ ಸಮಯದಲ್ಲಿ 40 ಡೆಂಘೀ ಕೇಸ್‌!

ಮಂಗಳೂರಿನಲ್ಲಿ ಮೇಲ್ಸೇತುವೆ ಮೇಲೆ ಸಾವರ್ಕರ್‌, ರಾಣಿ ಅಬ್ಬಕ್ಕ, ಕೋಟಿ-ಚೆನ್ನಯ ಮೊದಲಾದ ಹೆಸರುಗಳನ್ನು ಅನಾಮಿಕರು ರಾತ್ರೋರಾತ್ರಿ ಅಳವಡಿಸಿ ಪ್ರಚಾರಕ್ಕೆ ಕಾರಣವಾಗಿದ್ದರು. ಬೆಂಗಳೂರಿನ ಯಲಹಂಕ ಸೇತುವೆಗೆ ಸಾವರ್ಕರ್‌ ಹೆಸರಿಡುವ ಬಗ್ಗೆ ಪರ ವಿರೋಧ ಅಭಿಯಾನವೇ ಆರಂಭವಾಗಿದೆ. ಅವುಗಳಿಂದ ಸ್ಫೂರ್ತಿ ಪಡೆದು ಉಡುಪಿಯಲ್ಲಿಯೂ ನಡೆದ ಈ ವಿದ್ಯಮಾನ ಜನರಲ್ಲಿ ಅಚ್ಚರಿ ಮೂಡಿಸಿದೆ.

Follow Us:
Download App:
  • android
  • ios