Asianet Suvarna News Asianet Suvarna News

ಕಾಂಗ್ರೆಸ್ ಮುಖಂಡ ಹರಿಪ್ರಸಾದ ಹೇಳಿಕೆಗೆ ಪೇಜಾವರ ಶ್ರೀ ಆಕ್ಷೇಪ

ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ತಮಗೆ ಮಾಹಿತಿ ಸಿಕ್ಕ ಕೂಡಲೇ ಅದನ್ನು ಪೊಲೀಸರಿಗೆ ತಿಳಿಸಬೇಕಿತ್ತು. ಅದನ್ನು ಮಾಡದೇ ಪೊಲೀಸರು ಕೇಳಿದರಷ್ಟೇ ಮಾಹಿತಿ ನೀಡುವುದಾಗಿ ಹೇಳಿದರೆ ಅವರನ್ನು ಯಾರನ್ನು ರಕ್ಷಿಸಲು ಹೊರಟಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪ್ರಜೆಗಳ ರಕ್ಷಣೆ ಮುಖ್ಯವೋ ಅಥವಾ ವಿಧ್ವಂಸಕ ಕೃತ್ಯ ನಡೆಸುವವರ ರಕ್ಷಣೆ ಆಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದ ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ 

Pejavar Shree Objected to Congress Leader BK Hariprasad's Statement grg
Author
First Published Jan 5, 2024, 9:45 PM IST

ಬಾಗಲಕೋಟೆ(ಜ.05):  ಗೋಧ್ರಾ ಮಾದರಿ ಘಟನೆ ಸಂಭವಿಸಬಹುದು ಎಂಬ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪಸ್ರಾದ ಅವರ ವಿವಾದಾತ್ಮಕ ಹೇಳಿಕೆಗೆ ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುರುವಾರ ನವನಗರದ ವಿನಾಯಕ ತಾಳಿಕೋಟಿ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವದಿಸಿದ ಶ್ರೀಗಳನ್ನು ತಮ್ಮನ್ನು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿದರು.

ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ತಮಗೆ ಮಾಹಿತಿ ಸಿಕ್ಕ ಕೂಡಲೇ ಅದನ್ನು ಪೊಲೀಸರಿಗೆ ತಿಳಿಸಬೇಕಿತ್ತು. ಅದನ್ನು ಮಾಡದೇ ಪೊಲೀಸರು ಕೇಳಿದರಷ್ಟೇ ಮಾಹಿತಿ ನೀಡುವುದಾಗಿ ಹೇಳಿದರೆ ಅವರನ್ನು ಯಾರನ್ನು ರಕ್ಷಿಸಲು ಹೊರಟಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪ್ರಜೆಗಳ ರಕ್ಷಣೆ ಮುಖ್ಯವೋ ಅಥವಾ ವಿಧ್ವಂಸಕ ಕೃತ್ಯ ನಡೆಸುವವರ ರಕ್ಷಣೆ ಆಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದರು.

ಜನರಿಗೆ ಕೈ ಗ್ಯಾರಂಟಿ ಅಲ್ಲ, ಮೋದಿ ಗ್ಯಾರಂಟಿ ಬೇಕಿದೆ: ಬಿ.ವೈ.ವಿಜಯೇಂದ್ರ

ಸಾಕ್ಷಾಧಾರಗಳನ್ನು ನೀಡದೇ ಇಂಥ ಮಾತುಗಳನ್ನು ಆಡುವುದನ್ನು ಗಮನಿಸಿದರೆ ಇದೆಂಥ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಯಾರಿಂದ ಸಮಾಜದಲ್ಲಿ ಭಯ ಹುಟ್ಟುವಂತೆ ಆಯ್ತೋ ಅವರು ಭಯೋತ್ಪಾದಕರಾಗುತ್ತಿದ್ದಾರೆ. ಅಂಥ ಕೃತ್ಯ ಯಾರೂ ಮಾಡಬಾರದು ಎಂದು ಹೇಳಿದರು.

Follow Us:
Download App:
  • android
  • ios