ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದ ಪಿಡಿಒ; ಸಾಮೂಹಿಕ ರಾಜೀನಾಮೆಗೆ ಮುಂದಾದ ಗ್ರಾಪಂ ಸದಸ್ಯರು!
ಅಧಿಕಾರಿಗಳಿಗೆ ಜನರಿಗೆ ಸರಿಯಾಗಿ ಸ್ಪಂದಿಸಲ್ಲ ಎಂದು ಜನಸಾಮಾನ್ಯರ ಬಾಯಲ್ಲಿ ಕೇಳೋದು ಸರ್ವೆ ಸಾಮಾನ್ಯ. ಆದ್ರೆ ಇಲ್ಲಲೊಂದು ಗ್ರಾ.ಪಂ ಯಲ್ಲಿ ಜನಪ್ರತಿನಿಧಿಗಳೇ ಅಧಿಕಾರಿಯ ನಡೆಗೆ ಬೇಸತ್ತು ಸಾಮೂಹಿಕ ರಾಜೀನಾಮೆ ಕೊಟ್ಟಿರುವ ಘಟನೆ ಹಿರಿಯೂರು ತಾಲ್ಲೂಕಿನಲ್ಲಿ ನಡೆದಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಮಾ.1): ಅಧಿಕಾರಿಗಳಿಗೆ ಜನರಿಗೆ ಸರಿಯಾಗಿ ಸ್ಪಂದಿಸಲ್ಲ ಎಂದು ಜನಸಾಮಾನ್ಯರ ಬಾಯಲ್ಲಿ ಕೇಳೋದು ಸರ್ವೆ ಸಾಮಾನ್ಯ. ಆದ್ರೆ ಇಲ್ಲಲೊಂದು ಗ್ರಾ.ಪಂ ಯಲ್ಲಿ ಜನಪ್ರತಿನಿಧಿಗಳೇ ಅಧಿಕಾರಿಯ ನಡೆಗೆ ಬೇಸತ್ತು ಸಾಮೂಹಿಕ ರಾಜೀನಾಮೆ ಕೊಟ್ಟಿರುವ ಘಟನೆ ಹಿರಿಯೂರು ತಾಲ್ಲೂಕಿನಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕರಿಯಾಲ ಗ್ರಾ.ಪಂ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದಲೂ ಸುಮಾರು ೯ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಲ್ಭಣವಾಗಿದೆ. ಈ ಕುರಿತು ಅನೇಕ ಬಾರಿ ಪಿಡಿಓ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ. ೯ ಹಳ್ಳಿಗೂ ಟ್ಯಾಂಕರ್ ಮೂಲ ನೀರು ಸರಬರಾಜು ಮಾಡಲಾಗ್ತಿದೆ,ಈ ಕುರಿತು ತಹಶಿಲ್ದಾರ್ ನಿಮ್ಮ ಪಿಡಿಓ ಕಡೆಯಿಂದ ಒಂದು ಲೆಟರ್ ಕಳಿಸಿಕೊಡಿ ಮುಂದಿನ ವ್ಯವಸ್ಥೆ ನಾವು ಮಾಡಿಕೊಡ್ತೀವಿ ಅಂದ್ರು PDO ತಲೆ ಕೆಡಿಸಿಕೊಳ್ತಿಲ್ಲ. ಅಲ್ಲದೇ ನರೇಗಾ ಯೋಜನೆಯಡಿ ಸಾರ್ವಜನಿಕರಿಗೆ ಸರಿಯಾಗಿ ಕೆಲಸ ಕೊಡ್ತಿಲ್ಲ. ಇದೆಲ್ಲವನ್ನು ಪ್ರಶ್ನೆ ಮಾಡಿದ್ರೆ, ಸರಿಯಾಗಿ ಸ್ಪಂದಿಸ್ತಿಲ್ಲ ಆದ್ದರಿಂದ ಬೇಸರಗೊಂಡು ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಗ್ರಾ.ಪಂ ೧೨ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ಕೊಟ್ಟಿದ್ದೀವಿ ಎಂದು ಪಿಡಿಓ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.
ಈರುಳ್ಳಿ, ಟೊಮ್ಯಾಟೋ 100 ರೂ. ಇದ್ದಾಗ ಸರ್ಕಾರ ಮಧ್ಯಸ್ಥಿಕೆವಹಿಸಿ ಕಡಿಮೆ ಮಾಡಿತು; ಈಗ ದರ ಕುಸಿದಿದೆ ಎಲ್ಲಿದೆ ಸರ್ಕಾರ
ನಿರ್ಲಕ್ಷ್ಯದ ಕುರಿತು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಕೇರ್ ಮಾಡ್ತಿಲ್ಲ. ಸುಮ್ಮನೆ ನಮ್ಮ ಒತ್ತಾಯಕ್ಕೆ ಮಣಿದು ಒಂದೆರಡು ದಿನ ರಜೆ ಕಳಿಸ್ತಾರೆ, ಬಳಿಕ ಅವರು ಬಂದ ಮೇಲೆ ಅದೇ ಚಾಳಿ ಮುಂದುವರೆಸ್ತಾರೆ. ನಮ್ಮ ಪಂಚಾಯ್ತಿಗೆ ಅವರು ಬಂದ ಮೇಲಿಂದ ಯಾವುದೇ ಕೆಲಸಗಳು ಆಗಿಲ್ಲ. ಗ್ರಾ.ಪಂ ಯಲ್ಲಿ ಕೆಲಸಗಳೇ ಆಗದ ಮೇಲೆ ನಾವ್ಯಾಕೆ ಅಧಿಕಾರದಲ್ಲಿ ಇರಬೇಕು ಎಂದು ರಾಜೀನಾಮೆ ಸಲ್ಲಿಸಲು ಬಂದಿದ್ದೇವೆ. ಏನೆ ಕೆಲಸ ಮಾಡಲಿಕ್ಕೂ ದುಡ್ಡಿಲ್ಲ ಎಂದು ಬೇಜವಾಬ್ದಾರಿ ಉತ್ತರ ಕೊಡ್ತಾರೆ, ಇಓ ಕೇಳಿದ್ರೆ ಹಣ ಇದೆ ಅಂತಾರೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಿ ನಮ್ಮಿಂದ ಆಗ್ತಿಲ್ಲವಲ್ಲ ಎಂದು ನೋವಿನಿಂದ ಎಲ್ಲರೂ ರಾಜೀನಾಮೆ ಸಲ್ಲಿಸಿದ್ದೇವೆ ಎಂದು ಬೇಸರ ವ್ಯಕ್ತಪಡಿಸ್ತಾರೆ ಗ್ರಾ.ಪಂ ಅಧ್ಯಕ್ಷರು.\
ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬಿಜೆಪಿ ರೆಡಿ: ಕೇಂದ್ರ ಸಚಿವ ನಾರಾಯಣಸ್ವಾಮಿ
ಒಟ್ಟಾರೆಯಾಗಿ ಜನರ ಸೇವೆ ಮಾಡಲೆಂದು ಸರ್ಕಾರಗಳು ಅಧಿಕಾರಿಗಳ ನೇಮಕ ಮಾಡುತ್ತೆ. ಆದ್ರೆ ಇಂತಹ ನಿರ್ಲಕ್ಷ್ಯ ಇರುವ ಅಧಿಕಾರಿಗಳು ಕೆಲಸ ಮಾಡದೇ ಇರುವುದು ಸದಸ್ಯರಿಗೂ ಬೇಸರ ತಂದು ಸಾಮೂಹಿಕ ರಾಜೀನಾಮೆ ಕೊಟ್ಟಿರುವುದು ದುರದೃಷ್ಟಕರ. ಈ ಸಂಬಂಧ ಮೇಲಾಧಿಕಾರಿಗಳು ಕೂಡಲೇ PDO ಮೇಲೆ ಕ್ರಮ ಕೈಗೊಳ್ಳುವ ಮೂಲಕ ಜನರ ಸಮಸ್ಯೆ ಬಗೆಹರಿಸಬೇಕಿದೆ......,