Asianet Suvarna News Asianet Suvarna News

ಗಡಿ ದಾಟಲು ಹೆಲ್ತ್‌ ಎಮೆರ್ಜೆನ್ಸಿ ಡ್ರಾಮಾ..! ಅಡ್ಮಿಟ್ ಆಗಿ ರೋಗಿಗಳು ಪರಾರಿ

ಕೇರಳ ಆ್ಯಂಬುಲೆನ್ಸ್‌ಗಳಿಗೆ ತಲಪಾಡಿ ಗಡಿಯಲ್ಲಿ ನೀಡಿದ ಅವಕಾಶವನ್ನು ದುರುಪಯೋಗಪಡಿಸಿಕೊಂಡ ರೋಗಿಗಳು ಆಸ್ಪತ್ರೆಗೆ ದಾಖಲಾಗಿ ಬಳಿಕ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

Patients who admitted to hospital gone missing in Mangalore
Author
Bangalore, First Published Apr 11, 2020, 9:12 AM IST

ಮಂಗಳೂರು(ಏ.11): ಕೇರಳ ಆ್ಯಂಬುಲೆನ್ಸ್‌ಗಳಿಗೆ ತಲಪಾಡಿ ಗಡಿಯಲ್ಲಿ ನೀಡಿದ ಅವಕಾಶವನ್ನು ದುರುಪಯೋಗಪಡಿಸಿಕೊಂಡ ರೋಗಿಗಳು ಆಸ್ಪತ್ರೆಗೆ ದಾಖಲಾಗಿ ಬಳಿಕ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಚಿಕಿತ್ಸೆಗಾಗಿ ತಲಪಾಡಿ ಗಡಿ ದಾಟಲು ನೀಡಿದ ಅವಕಾಶವನ್ನು ಈ ರೀತಿ ರೋಗಿಗಳು ದುರುಪಯೋಗಪಡಿಸಿಕೊಂಡ ಆರೋಪ ವ್ಯಕ್ತವಾಗಿದೆ. ತಲೆನೋವಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ಕೇರಳದಿಂದ ಗುರುವಾರ ರೋಗಿಯೊಬ್ಬ ಆಗಮಿಸಿದ್ದನು.

ಕೊರೋನಾ ವಿರುದ್ಧ ಸದ್ದಿಲ್ಲದೆ ಯುದ್ಧ ಮಾಡುವ ಯೋಧರಿವರು!

ಈತನ ಪ್ರಾಥಮಿಕ ತಪಾಸಣೆ ಮಾಡಿದ ದೇರಳಕಟ್ಟೆ ಖಾಸಗಿ ಆಸ್ಪತ್ರೆ ವೈದ್ಯರು ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಕೇರಳದ ರೋಗಿ ವೈದ್ಯರಿಗೆ ಯಾವುದೇ ಮಾಹಿತಿ ನೀಡದೆ ಆಸ್ಪತ್ರೆಯಿಂದ ಪರಾರಿಯಾಗಿರುವುದು ಶುಕ್ರವಾರ ಬೆಳಕಿಗೆ ಬಂದಿದೆ.

ಉಡುಪಿ ಜಿಲ್ಲೆಯ ಗಡಿಗಳು ಸಂಪೂರ್ಣ ಸೀಲ್‌ ಡೌನ್‌: ಡಿಸಿ

ಈತ ಕೇರಳದಿಂದ ಬಂದಿದ್ದ ಮತ್ತೊಂದು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಯಾವುದೇ ಮಾಹಿತಿ ನೀಡದೆ ಪರಾರಿಯಾಗಿದ್ದಾನೆ. ಈ ಬಗ್ಗೆ ಆಸ್ಪತ್ರೆಯ ಮುಖ್ಯಸ್ಥರು ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Follow Us:
Download App:
  • android
  • ios