Asianet Suvarna News Asianet Suvarna News

ಕೊರೋನಾ ವಿರುದ್ಧ ಸದ್ದಿಲ್ಲದೆ ಯುದ್ಧ ಮಾಡುವ ಯೋಧರಿವರು!

ಉಡುಪಿಯ ಯುವತಿಗೆ ತುರ್ತಾಗಿ ಒಂದು ಔಷಧಿ ಬೇಕಾಗಿರುತ್ತದೆ, ಅದು ಉಡುಪಿಯಲ್ಲಿಲ್ಲ, ಬೆಂಗಳೂರಲ್ಲಿ ಲಭ್ಯ ಇದೆ, ಮರುದಿನವೇ ಈ ಔಷಧಿ ಆಕೆಗೆ ತಲುಪುತ್ತದೆ. ಲಾಕ್‌ಡೌನ್‌ನಿಂದ ಅಂಗಡಿಗಳು ಬಂದ್‌ ಆಗಿವೆ. ಬ್ರಹ್ಮಾವರದಲ್ಲಿ ವೃದ್ಧ ದಂಪತಿಯಿಬ್ಬರೇ ಇದ್ದಾರೆ, ಹೃದ್ರೋಗದ ಕಾರಣ ಅವರ ನಿತ್ಯದ ಆಹಾರ ಬ್ರೆಡ್‌- ರಸ್ಕ್, ಅದು ಕೂಡ ಸಿಗುತ್ತಿಲ್ಲ, ಆದರೇ 20 ನಿಮಿಷದಲ್ಲಿ ಅವರಿಗೆ ಬ್ರೆಡ್‌ ರಸ್ಕ್ ತಲುಪುತ್ತದೆ. ಇದನ್ನೆಲ್ಲ ಮಾಡುತ್ತಿರುವವರು ಉಡುಪಿ ಕೊರೋನಾ ವಾರಿಯರ್ಸ್‌

 

Corona Warriors helps people by providing food and medicine
Author
Bangalore, First Published Apr 11, 2020, 8:37 AM IST

ಉಡುಪಿ(ಏ.11): ಉಡುಪಿಯ ಯುವತಿಗೆ ತುರ್ತಾಗಿ ಒಂದು ಔಷಧಿ ಬೇಕಾಗಿರುತ್ತದೆ, ಅದು ಉಡುಪಿಯಲ್ಲಿಲ್ಲ, ಬೆಂಗಳೂರಲ್ಲಿ ಲಭ್ಯ ಇದೆ, ಮರುದಿನವೇ ಈ ಔಷಧಿ ಆಕೆಗೆ ತಲುಪುತ್ತದೆ.

ಲಾಕ್‌ಡೌನ್‌ ನಡುವೆಯೇ ಪಲಿಮಾರು ಮಠದ ಶ್ರೀಗಳು ನೂರಾರು ಜನರನ್ನು ಸೇರಿಸಿ ರಾಮನವಮಿ ಆಚರಿಸಿದರು ಎಂಬ ಫೋಟೋವೊಂದು ವೈರಲ್‌ ಆಗುತ್ತದೆ. ಜಿಲ್ಲಾಡಳಿತ ಗೊಂದಲಕ್ಕೀಡಾಗುತ್ತದೆ, ಅರ್ಧ ಗಂಟೆಯಲ್ಲಿ ಅದು ಫೇಕ್‌ ಫೋಟೋ ಎಂದು ಜಿಲ್ಲಾಡಳಿತಕ್ಕೆ ದೃಢವಾಗುತ್ತದೆ.

ಉಡುಪಿ ಜಿಲ್ಲೆಯ ಗಡಿಗಳು ಸಂಪೂರ್ಣ ಸೀಲ್‌ ಡೌನ್‌: ಡಿಸಿ

ಲಾಕ್‌ಡೌನ್‌ನಿಂದ ಅಂಗಡಿಗಳು ಬಂದ್‌ ಆಗಿವೆ. ಬ್ರಹ್ಮಾವರದಲ್ಲಿ ವೃದ್ಧ ದಂಪತಿಯಿಬ್ಬರೇ ಇದ್ದಾರೆ, ಹೃದ್ರೋಗದ ಕಾರಣ ಅವರ ನಿತ್ಯದ ಆಹಾರ ಬ್ರೆಡ್‌- ರಸ್ಕ್, ಅದು ಕೂಡ ಸಿಗುತ್ತಿಲ್ಲ, ಆದರೇ 20 ನಿಮಿಷದಲ್ಲಿ ಅವರಿಗೆ ಬ್ರೆಡ್‌ ರಸ್ಕ್ ತಲುಪುತ್ತದೆ.

ಇಂತಹ ನೂರಾರು ಮಾನವೀಯ ಉದಾಹರಣೆಗಳಿವೆ. ಇದನ್ನೆಲ್ಲ ಮಾಡುತ್ತಿರುವವರು ಉಡುಪಿ ಕೊರೋನಾ ವಾರಿಯರ್ಸ್‌. ಇವರು ಯಾವುದೇ ಪ್ರಚಾರ, ಫೋಟೋ ಪೋಸ್‌ ಇಲ್ಲದೆ ಕಷ್ಟದಲ್ಲಿರುವವರ ಸಹಾಯಕ್ಕೆ ಧಾವಿಸುತ್ತಿದ್ದಾರೆ.

ಔಷಧಿಗಾಗಿ 16 ಕಿ.ಮೀ. ನಡೆದು ಬಂದ 70ರ ಅಜ್ಜಿ !

ರಾಜ್ಯ ವಾರ್ತಾ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ರೆಡ್‌ ಕ್ರಾಸ್‌ ಈ ಕೊರೋನಾ ವಾರಿಯರ್ಸ್‌ ಎಂಬ ಸೈನ್ಯವನ್ನು ನಡೆಸುತ್ತಿದೆ. ರಾಜ್ಯದಲ್ಲಿ 20 ಸಾವಿರ, ಉಡುಪಿ ಜಿಲ್ಲೆಯಲ್ಲಿ 264 ಮಂದಿ ವೈದ್ಯರು, ಟೆಕ್ಕಿಗಳು, ವಿದ್ಯಾರ್ಥಿಗಳು, ಸ್ವ ಉದ್ಯೋಗಿಗಳೂ ಈ ಸೈನ್ಯದಲ್ಲಿದ್ದಾರೆ.

ರಾಜ್ಯದಿಂದ ತಾಲೂಕುಗಳವರೆಗೆ ಅವರದ್ದೇ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿವೆ. ಅದರಲ್ಲಿ ಯಾವುದೇ ಸಂದೇಶ ಬಂದ ತಕ್ಷಣ ಆಯಾ ತಾಲೂಕಿನ ಕೊರೋನಾ ವಾರಿಯರ್ಸ್‌ ಅದಕ್ಕೆ ಸ್ಪಂದಿಸಿ, ಕೆಲಸವನ್ನು ಪೂರೈಸಿ, ಮರು ಸಂದೇಶ ಕಳುಹಿಸುತ್ತಾರೆ. ಅವರ ಮುಖ್ಯ ಕೆಲಸ ಅಗತ್ಯವುಳ್ಳರಿಗೆ ಸಹಾಯ ಮಾಡುವುದು, ವೈರಲ್‌ ವದಂತಿಗಳ ಸತ್ಯಾಸತ್ಯತೆ ಪರೀಕ್ಷಿಸುವುದು ಮತ್ತು ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇವರ ಕೆಲಸ. ಈ ಸೈನಿಕರು ಯಾವುದೇ ಪ್ರತಿಫಲ ಇಲ್ಲದೇ ತೆರೆಮರೆಯಲ್ಲಿದ್ದುಕೊಂಡೇ ಈ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ.

ಮರುವಾಯಿ ಮೀನು ಹಿಡಿದ ಯುವಕರ 11 ಬೈಕ್ ಜಪ್ತಿ

ದಿನಕ್ಕೆ ಕನಿಷ್ಠ 6- 8 ಕಾಲ್‌ ಬರ್ತವೆ, ಅವುಗಳಲ್ಲಿ 5- 6 ಕಾಲ್‌ಗಳು ಔಷಧಿ ಬೇಕು ಅಂತಾಗಿದ್ರೆ, ಉಳಿದವರು ಊಟ ಬೇಕು, ದಿನಸಿ ಬೇಕು ಅಂತ ಕೇಳ್ತಾರೆ. ಅವುಗಳನ್ನು ತಕ್ಷಣ ಕೊಂಡುಹೋಗಿ ಕೊಡುತ್ತೇವೆ. ಈ ಕೆಲಸದಿಂದ ನಮಗೆ ಬಹಳ ಖುಷಿ ಇದೆ ಎನ್ನುತ್ತಾರೆ ಕೊರೋನಾ ವಾರಿಯರ್ಸ್‌ ಜಿಲ್ಲಾ ಸಂಘಟಕ ಸುಕೇತ್‌ ಶೆಟ್ಟಿ.(8310155994)

ಮಾ.26ರಿಂದ ಈ ಗ್ರೂಪ್‌ ಆರಂಭವಾಗಿದೆ. ಮೊದಲು 3 ದಿನ ತರಬೇತಿ ಇತ್ತು. ನಂತರದ ಈ 12 ದಿನಗಳಲ್ಲಿ ಉಡುಪಿ ಜಿಲ್ಲೆಯಿಂದ ಸುಮಾರು 100ರಷ್ಟುಕಾಲ್‌ ಗಳು ಸಹಾಯ ಕೇಳಿ ಬಂದಿವೆ. 10ಕ್ಕೂ ಹೆಚ್ಚು ವೈರಲ್‌ ಆಗಿದ್ದ ಫೇಕ್‌ನ್ಯೂಸ್‌ಗಳನ್ನು ಪತ್ತೆ ಮಾಡಿದ್ದೇವೆ ಎನ್ನುತ್ತಾರೆ ಉಡುಪಿ ಕೊರೋನಾ ವಾರಿಯರ್ಸ್‌ ಉಸ್ತುವಾರಿ ಸಹನಾ ಬೆಂಗಳೂರು.

Follow Us:
Download App:
  • android
  • ios