ಆಕ್ಸಿಜನ್‌ ಅಳವಡಿಸಿದ ಮಗುವನ್ನು ತಂದೆ ಹೊತ್ತುಕೊಂಡು ಹೋಗುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟ ಸಾರ್ವಜನಿಕರು| ಕಿಮ್ಸ್‌ ಆಸ್ಪತ್ರೆಗೆ ಸಾರ್ವಜನಿಕರಿಂದ ತೀವ್ರ ಅಸಮಾಧಾನ| ಆಕ್ಸಿಜನ್‌ ಅಳವಡಿಸಿದ ಮಗುವನ್ನು ಸ್ಟ್ರೆಚರ್‌ ಸೌಲಭ್ಯ ಇಲ್ಲದ ಕಾರಣ ತಂದೆಯೇ ಹೊತ್ತುಕೊಂಡು ಮಕ್ಕಳ ವಾರ್ಡ್‌ಗೆ ಕರೆದುಕೊಂಡು ಹೋದ ತಂದೆ|

ಹುಬ್ಬಳ್ಳಿ(ಮೇ.30): ಇಲ್ಲಿನ ಕಿಮ್ಸ್‌ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನಿದರ್ಶನ ಎಂಬಂತೆ ಇನ್ನೊಂದು ಚಿತ್ರಣ ಹೊರಬಂದಿದೆ. ಆಕ್ಸಿಜನ್‌ ಅಳವಡಿಸಿದ ಮಗುವನ್ನು ಸ್ಟ್ರೆಚರ್‌ ಸೌಲಭ್ಯ ಇಲ್ಲದ ಕಾರಣ ತಂದೆಯೇ ಹೊತ್ತುಕೊಂಡು ಮಕ್ಕಳ ವಾರ್ಡ್‌ಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್‌ ಆಗಿದ್ದು, ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Add Asianetnews Kannada as a Preferred SourcegooglePreferred

ಈ ಮಗು, ತಂದೆ ಯಾರು ಎಂಬುದು ತಿಳಿದುಬಂದಿಲ್ಲ. ಆಕ್ಸಿಜನ್‌ ಅಳವಡಿಸಿದ ಮಗುವನ್ನು ತಂದೆ ಹೊತ್ತುಕೊಂಡು ಹೋಗುತ್ತಿರುವುದನ್ನು ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. 

ಹುಬ್ಬಳ್ಳಿ: ನರ್ಸ್‌ಗಳ ಮೇಲೆ ದರ್ಪ, KIMS ಸಿಇಒ ವಿರುದ್ಧ ದೂರು

ಕಿಮ್ಸ್‌ ಸಿಬ್ಬಂದಿ ಆಕ್ಸಿಜನ್‌ ಟ್ಯಾಂಕ್‌ನ್ನು ದೂಡಿಕೊಂಡು ಬರುತ್ತಿದ್ದರೆ, ಮಗುವನ್ನು ಕೈಯಲ್ಲಿ ಎತ್ತಿಕೊಂಡು ತಂದೆ ಮಕ್ಕಳ ವಾರ್ಡ್‌ನತ್ತ ಹೆಜ್ಜೆ ಹಾಕುತ್ತಿರುವ ಮನಕಲಕುವ ದೃಶ್ಯ ವೈರಲ್‌ ಆಗಿದೆ. ಈ ಕುರಿಂತೆ ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಕಿಮ್ಸ್‌ ಸುಧಾರಣೆ ಆಗುವುದು ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.