ಕೋವಿಡ್‌ಗೆ 78 ವರ್ಷದ ವೃದ್ಧ ಬಲಿ|  ಬಳ್ಳಾರಿ ನಗರದ ಹೂವಿನ ಮಾರ್ಕೆಟ್ ಸೀಲ್‌ಡೌನ್‌| ಕೊರೋನಾ 2ನೇ ಅಲೆಯನ್ನ ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ| 

ಬಳ್ಳಾರಿ(ಮಾ.26): ಮೂರು ತಿಂಗಳ ಬಳಿಕ ಬಳ್ಳಾರಿಯಲ್ಲಿ ಕೊರೋನಾಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಎರಡನೇ ಅಲೆಯಲ್ಲಿ ಮೊದಲ ಸಾವಿನ ಪ್ರಕರಣವಾಗಿದೆ. ಗುರುವಾರ ಕೋವಿಡ್‌ಗೆ 78 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇಲ್ಲಿಯವರೆಗೆ ಗಣಿ ನಾಡು ಬಳ್ಳಾರಿಯಲ್ಲಿ ಕೊರೋನಾ ಮಾರಿಗೆ ಒಟ್ಟು 598 ಮಂದಿ ಬಲಿಯಾಗಿದ್ದಾರೆ. ನಗರದಲ್ಲಿ ಆರು ತಿಂಗಳ ಬಳಿಕ ಮತ್ತೊಮ್ಮೆ ಏರಿಯಾ ಸೀಲ್‌ಡೌನ್‌ ಆಗಿದೆ. ಕೊರೋನಾ ಎರಡನೇ ಅಲೆಯಲ್ಲಿ ಮೊದಲ ಬಾರಿಗೆ ನಗರದ ಹೂವಿನ ಮಾರ್ಕೆಟ್ ಸೀಲ್‌ಡೌನ್‌ ಮಾಡಲಾಗಿದೆ. 

ಇನ್ನು 20 ದಿನಕ್ಕೆ ದೇಶದಲ್ಲಿ 2ನೇ ಅಲೆ ಅಬ್ಬರ ತುತ್ತತುದಿಗೆ!

ಕೊರೋನಾ 2ನೇ ಅಲೆಯನ್ನ ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಜನರು ಎಚ್ಚತ್ತುಕೊಳ್ಳದೇ ಇದ್ರೇ ಮತ್ತೊಮ್ಮೆ ಲಾಕ್‌ಡೌನ್‌ ಮಾಡೋದು ಅನಿವಾರ್ಯವಾಗಿಲಿದೆ ಎಂದು ತಿಳಿಸಿದೆ. ನಗರದಲ್ಲಿ ಮತ್ತೆ ಮಾಡಿದ್ದರಿಂದ ಜನರಲ್ಲಿ ಅತಂಕ ಹೆಚ್ಚಾಗಿದೆ.