ಮಡಿಕೇರಿ(ಫೆ.27): ಮಡಿಕೇರಿಯಲ್ಲಿ ಅಂಚೆ ಕಚೇರಿ ಸಿಬ್ಬಂದಿಗಳ ಬೇಜವಾಬ್ದಾರಿಯಿಂದಾಗಿ ಇಬ್ಬರು ಯುವಕರು ಪಾಸ್‌ಪೋರ್ಟ್ ಕಳೆದುಕೊಳ್ಳುವಂತಾಗಿದೆ. ವಿದ್ಯಾಭ್ಯಾಸ, ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡವರೀಗ ಪಾಸ್‌ಪೋರ್ಟ್ ಇಲ್ಲದೆ ಪರದಾಡಿದ್ದಾರೆ.

ಅಂಚೆ ಕಚೇರಿಯಿಂದ ರವಾನಿಸಿದ್ದ ಪಾಸ್ ಪೋರ್ಟ್ ಕಾಣೆಯಾಗಿದೆ. ಮಡಿಕೇರಿ ನಗರದ ಕೇಂದ್ರ ಅಂಚೆ ಕಚೇರಿಯಿಂದ ಎರಡು ಪಾಸ್ ಪೋರ್ಟ್‌ಗಳನ್ನು ರವಾನಿಸಲಾಗಿತ್ತು. ಅಂಚೆ ಇಲಾಖೆ ಸಿಬ್ಬಂದಿ ಖಾಸಗಿ ಬಸ್ ಮೂಲಕ ಪಾಸ್‌ಪೋರ್ಟ್ ರವಾನಿಸಿದ್ದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಮೇಲೆ ರೌಡಿ ಶೀಟರ್ ಫೈಲ್ ಓಪನ್

ಮಡಿಕೇರಿ ತಾಲೂಕಿನ ಚೇರಂಬಾಣೆಗೆ ಬಸ್ ಮೂಲಕ ಪಾಸ್‌ಪೋರ್ಟ್ ರವಾನೆ ಮಾಡಿದ್ದರು. ಬಸ್‌ನಲ್ಲಿ ಪಾಸ್ ಪೋರ್ಟ್ ಕಳುವಾಗಿದೆ. ಚೆರಂಬಾಣೆಯ ಮೊಹಮ್ಮದ್ ರಫೀಕ್, ಮಿಥುನ್ ಎಂಬವರಿಗೆ ಪಾಸ್ ಪೋರ್ಟ್ ಕಾಣೆಯಾಗಿದೆ.

ವಿದ್ಯಾಭ್ಯಾಸ, ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದ ಯುವಕರು ಕಂಗಾಲಾಗಿದ್ದರು. ಅಂಚೆ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿತನಕ್ಕೆ ಯುವಕರು ಕಂಗಾಲಾಗಿದ್ದಾರೆ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.