ರಾಮಕೃಷ್ಣ ದಾಸರಿ

ರಾಯಚೂರು(ಜೂ.18): ನೆರೆಯ ಆಂಧ್ರಪ್ರದೇಶಕ್ಕೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಬುಧವಾರ ಆರಂಭಗೊಂಡಿದ್ದು, ಕೊರೋನಾ ಆತಂಕ​ದಿಂದಾಗಿ ಪ್ರಯಾಣಿಕರಿಂದ ನೀರಸ ಪ್ರತಿ​ಕ್ರಿ​ಯೆ ವ್ಯಕ್ತವಾಗಿದೆ. ಆಂಧ್ರದಲ್ಲಿ ಕೊರೋನಾ ತಾಂಡವ ಮುಗಿಲು ಮುಟ್ಟಿದೆ. ಅದೇ ರೀತಿ ರಾಯಚೂರು ಜಿಲ್ಲೆಯಲ್ಲಿ ದಿನೇ ದಿನೆ ಪಾಸಿಟಿವ್‌ ಪ್ರಕರಣ ಜಾಸ್ತಿಯಾಗುತ್ತಿವೆ. ಆಂಧ್ರದ ಕರ್ನೂಲ್‌ ಜಿಲ್ಲೆಯ ಮಂತ್ರಾಲಯದಲ್ಲಿ ರಾಯರ ದರ್ಶನಕ್ಕೆ ಶ್ರೀಮಠವು ಅವಕಾಶ ನೀಡದ ಕಾರಣಕ್ಕೆ ಜನರು ಆಂಧ್ರಕ್ಕೆ ಬಸ್‌ಗಳನ್ನು ಬಿಟ್ಟರೂ ಯಾರು ಬಂದಿಲ್ಲ. ಕೊರೋನಾ ವೈರಸ್‌ ಹಾವಳಿ ಎರಡೂ ರಾಜ್ಯಗಳಲ್ಲಿ ಹೆಚ್ಚಾಗಿರುವುದರಿಂದ ಹಿಂದೇಟು ಹಾಕುತ್ತಿದ್ದಾರೆ.

ಬಸ್‌ ಬಿಟ್ಟರೂ ಒಬ್ಬರು ಬಂದಿಲ್ಲ:

ನಾಲ್ಕು ಹಂತದ ಕಠಿಣ ಲಾಕ್‌ಡೌನ್‌ನಲ್ಲಿ ಅಂತರಾಜ್ಯ ಬಸ್‌ ಸಂಚಾರವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿತ್ತು. ಇದರಿಂದಾಗಿ ಗಡಿಭಾಗದಲ್ಲಿರುವ ಜಿಲ್ಲೆಯ ಜನರ ಸಂಚಾರಕ್ಕೆ ಸಾಕಷ್ಟುಸಮಸ್ಯೆಯಾಗಿತ್ತು. ಲಾಕ್‌ಡೌನ್‌ ಸಡಿಲಿಕೆ ಬಳಿಕ ರಾಜ್ಯದಲ್ಲಿ ಮಾತ್ರ ಬಸ್‌ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಬುಧವಾರದಿಂದ ಅಂತರಾಜ್ಯ ಬಸ್‌ ಸಂಚಾರಕ್ಕೆ (ಆಂಧ್ರ ಪ್ರದೇಶಕ್ಕೆ) ಅವಕಾಶ ಮಾಡಿಕೊಟ್ಟಿತ್ತು.

ರಾಯಚೂರು: 'ಒಪೆಕ್‌ನಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಡಾಕ್ಟರ್ಸ್‌ ವಿರುದ್ಧ ಕಠಿಣ ಕ್ರಮ'

ಒಬ್ಬ ಪ್ರಯಾ​ಣಿ​ಕನೂ ಇಲ್ಲ:

ಮೊದಲ ದಿನವಾದ ಬುಧವಾರ ಬೆಳಗ್ಗೆ ರಾಯಚೂರು ಡಿಪೋದಿಂದ ಮಂತ್ರಾಲಯಕ್ಕೆ ಎರಡು ಬಸ್‌ಗಳನ್ನು ಬಿಡಲಾಗಿತ್ತು. ದಿನಕ್ಕೆ ಮೂರ್ನಾಲ್ಕು ಟ್ರಿಪ್‌ ಸಂಚಾರಕ್ಕೆ ಯೋಜನೆ ಮಾಡಿಕೊಳ್ಳಲಾಗಿತ್ತು. ಬಿಟ್ಟಎರಡೂ ಬಸ್‌ಗಳಲ್ಲಿ ಒಬ್ಬ ಪ್ರಯಾಣಿಕನೂ ಬಾರದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಟ್ರಿಪ್‌ ರದ್ದು ಪಡಿಸಲಾಯಿತು.

ಹಲವು ಕಾರಣಗಳು:

ಆಂಧ್ರಕ್ಕೆ ಬಸ್‌ಗಳನ್ನು ಬಿಟ್ಟರು ಹಲವು ಕಾರಣಗಳಿಂದಾಗಿ ಪ್ರಯಾಣಿಕರು ಬರುತ್ತಿಲ್ಲ ಎನ್ನುವುದನ್ನು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಜಿಲ್ಲಾ ವಿಭಾಗೀಯ ಇಲಾಖೆಯು ಅವಲೋಕನೆ ಮಾಡಿಕೊಂಡಿದ್ದಾರೆ. ಕೇವಲ ಆಂಧ್ರಕ್ಕೆ ಬಸ್‌ಗಳ ಸಂಚಾರ ಆರಂಭ ಮಾಡಿದ್ದು, ತೆಲಂಗಾಣಕ್ಕೆ ಅವಕಾಶವಿಲ್ಲ. ಆಂಧ್ರದ ಕರ್ನೂಲ್‌ ಜಿಲ್ಲೆಗೆ ರಾಯಚೂರಿನಿಂದ ಹೋಗಬೇಕಾದರೆ ತೆಲಂಗಾಣ ಪ್ರಾಂತದ ಮೇಲೆ ಸಂಚರಿಸಬೇಕಾಗಿದ್ದರಿಂದ ಕರ್ನೂಲ್‌ಗೆ ಬಸ್‌ಗಳನ್ನು ಬಿಟ್ಟಿಲ್ಲ.

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ರಾಯರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡದ ಕಾರಣಕ್ಕೆ ಮಂತ್ರಾಲಯಕ್ಕೂ ಜನರು ಹೋಗುತ್ತಿಲ್ಲ. ಅಂತರಾಜ್ಯ ಸಂಚಾರವಾಗಿರುವುದರಿಂದ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಪ್ರಯಾಣಿಕರಿಗೆ ಸೀಲ್‌ ಹಾಕುತ್ತಾರೆ. ಬಳಿಕ ಅವರು ನಾಲ್ಕೈದು ದಿನಗಳ ಕಾಲ ಹೋಂ ಕ್ವಾರಂಟೈನ್‌ಗೊಳಪಡಬೇಕಾಗುತ್ತದೆ. ಅದರಂತೆ ಉಭಯ ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜನರು ತೀವ್ರ ಆತಂಕಗೊಂಡಿದ್ದಾರೆ. ಈ ಎಲ್ಲ ಅಂಶಗಳಿಂದಾಗಿ ಜನರು ಆಂಧ್ರಕ್ಕೆ ಬಸ್‌ಗಳನ್ನು ಬಿಟ್ಟರು ಹೋಗುತ್ತಿಲ್ಲ.

ಆಂಧ್ರ ಮೂಲಕ ಬೆಂಗಳೂರಿಗೆ ಬಸ್‌

ಲಾಕ್‌ಡೌನ್‌ ಬಳಿಕ ಇದೇ ಮೊದಲ ಬಾರಿಗೆ ಆಂಧ್ರಪ್ರದೇಶದ ಮೂಲಕ ಬೆಂಗಳೂರಿಗೆ ಸಾರಿಗೆ ಸಂಸ್ಥೆಯ ಬಸ್‌ ಸಂಚರಿಸಲು ಸಿದ್ಧಗೊಂಡಿದೆ. ಬುಧವಾರ ಆಂಧ್ರಕ್ಕೆ ಬಸ್‌ ಸಂಚಾರ ಆರಂಭಗೊಂಡಿದ್ದರಿಂದ ರಾಯಚೂರು-ಮಂತ್ರಾಲಯ-ಅನಂತಪುರ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸಲಿರುವ ಬಸ್‌ನ ಎಲ್ಲ ಸೀಟ್‌ಗಳನ್ನು ಪ್ರಯಾಣಿಕರು ಮುಂಗಡವಾಗಿ ಕಾಯ್ದಿರಿಸಿಕೊಂಡಿದ್ದಾಲಾಕ್‌ಡೌನ್‌ ಬಳಿಕ ಇದೇ ಮೊದಲ ಬಾರಿಗೆ ಆಂಧ್ರಪ್ರದೇಶದ ಮೂಲಕ ಬೆಂಗಳೂರಿಗೆ ಸಾರಿಗೆ ಸಂಸ್ಥೆಯ ಬಸ್‌ ಸಂಚರಿಸಲು ಸಿದ್ಧಗೊಂಡಿದೆ. 

ಆಂಧ್ರಕ್ಕೆ ಸಾರಿಗೆ ಬಸ್‌ ಸಂಚಾರ ಆರಂಭಗೊಂಡಿರುವುದರಿಂದ ಮೊದಲ ದಿನ ಮಂತ್ರಾಲಯಕ್ಕೆ ಎರಡು ಬಸ್‌ಗಳನ್ನು ಬಿಡಲಾಗಿತ್ತು. ಆದರೆ ಪ್ರಯಾಣಿಕರು ಬಾರದ ಕಾರಣಕ್ಕೆ ಅದನ್ನು ನಿಲ್ಲಿಸಲಾಗಿದೆ. ರಾಯರ ದರ್ಶನ ಬಂದಾಗಿರುವುದರಿಂದ ಮಂದಿ ಬಂದಿಲ್ಲ. ಇನ್ನು ತೆಲಂಗಾಣ ಮೂಲಕ ಕರ್ನೂಲ್‌ಗೆ ಪ್ರಯಾಣಿಸಬೇಕಾಗಿದ್ದರಿಂದ ಬಸ್‌ ಬಿಟ್ಟಿಲ್ಲ ಎಂದು ರಾಯಚೂರು ಎನ್‌ಇಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಾರಿ ಅಧಿಕಾರಿ ಆರ್‌.ವಿ.ಜಾದವ್‌ ಅವರು ತಿಳಿಸಿದ್ದಾರೆ.