ಯಲ್ಲಾಪುರ(ಫೆ.03): ಚಾಲ​ಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್‌ ರಸ್ತೆ ಬದಿಯ ಮೋರಿಗೆ ಡಿಕ್ಕೆ ಹೊಡೆದ ಪರಿ​ಣಾಮ ಬಸ್‌ನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಸೋಮ​ವಾರ ಯಲ್ಲಾಪುರ-ಹಳಿಯಾಳ ರಸ್ತೆಯ ಡೌಗಿನಾಲಾ-ಕಣ್ಣಿಗೇರಿ ನಡುವೆ ಸಂಭವಿಸಿದೆ. 

ಹಳಿಯಾಳದಿಂದ ಯಲ್ಲಾಪುರಕ್ಕೆ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್‌ ಚಾಲಕನ ನಿಯಂತ್ರಣ ತಪ್ಪಿ ದುರ್ಘ​ಟನೆ ನಡೆ​ದಿದೆ. ಬಸ್‌ನಲ್ಲಿದ್ದ ಕಿರವತ್ತಿ ಇಂದಿರಾನಗರ ನಿವಾಸಿಗಳಾದ ರೋಸಿ ಕಿರಣ ಡಯಾಸ್‌ ಸಿದ್ದಿ (28), ನಿಶಲ್ಮನವೆಲ್‌ ಸಿದ್ದಿ (13), ಡೆಸಿ ಮನವೇಲ್‌ ಸಿದ್ದಿ (15), ಶಾಂತಾ ಮನವೇಲ್‌ ಸಿದ್ದಿ(35), ಅಶ್ವಿನಿ ಲಾರೆನ್ಸ್‌ ಸಿದ್ದಿ (13) ಹಾಗೂ ಕಾಳಮ್ಮನಗರದ ನಿವಾಸಿ ಫರ್ವಿನ್‌ಬಾನು ರಿಯಾಜ್‌ಅಹ್ಮದ್‌ ಕಂಡು(23) ಗಾಯಗೊಂಡಿದ್ದು ತಾಲೂಕಾ ಆಸ್ಪ​ತ್ರೆಗೆ ದಾಖ​ಲಿಸಿ ಚಿಕಿತ್ಸೆ ನೀಡ​ಲಾ​ಗು​ತ್ತದೆ. 

ಅಂಕೋಲಾ ಬಳಿ ಭೀಕರ ಅಪಘಾತ; ಧಾರವಾಡ ಮಹಿಳೆ ದುರ್ಮರಣ

ಬಸ್‌ ಚಾಲಕ ಮಾರುತಿ ರಾಮಪ್ಪ ಪಟವರ್ಧನ(53) ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.